ಸಂಧಾನಕ್ಕೆ ಹೊಸ ತಿರುವು: ಅಮೆರಿಕ ಜೊತೆ ಶಾಂತಿ ಮಾತುಕತೆಗೆ ಇರಾನ್ ಮುಂದಾಳಿ

ಟೆಹ್ರಾನ್‌ನಿಂದ ದೊಡ್ಡ ಬೆಳವಣಿಗೆ…
ಅಮೆರಿಕ ಜೊತೆಗಿನ ಸಂಘರ್ಷದ ನಡುವೆ ಇರಾನ್ ಹೊಸ ಶಾಂತಿ ಪ್ರಸ್ತಾವನೆ ಮುಂದಿಟ್ಟಿದೆ.

ಪಾಕಿಸ್ತಾನದ ಮೂಲಕ ಈ ಪ್ರಸ್ತಾವನೆ ರವಾನೆಯಾಗಿದ್ದು,
ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ತೆರೆಯಲು ಸಿದ್ಧ ಎಂದು ಇರಾನ್ ಘೋಷಿಸಿದೆ.

ಆದರೆ, ಆರ್ಥಿಕ ನಿರ್ಬಂಧಗಳನ್ನು ತೆರವುಗೊಳಿಸುವಂತೆ ಅಮೆರಿಕಗೆ ಷರತ್ತು ಹಾಕಲಾಗಿದೆ.

ಇನ್ನೊಂದೆಡೆ, ಪರಮಾಣು ಕಾರ್ಯಕ್ರಮದ ವಿಚಾರವನ್ನು ತಾತ್ಕಾಲಿಕವಾಗಿ ಬದಿಗಿಟ್ಟು,
ಮುಂದಿನ ಹಂತದಲ್ಲಿ ಚರ್ಚೆ ನಡೆಸುವ ತಂತ್ರವನ್ನು ಇರಾನ್ ಅನುಸರಿಸಿದೆ.

ಈ ನಡುವೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉನ್ನತ ಮಟ್ಟದ ಸಭೆ ಕರೆದಿದ್ದು,
ಈ ಪ್ರಸ್ತಾವನೆಗೆ ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎಂಬುದರ ಮೇಲೆ
ಜಾಗತಿಕ ತೈಲ ಮಾರುಕಟ್ಟೆ ಭವಿಷ್ಯ ಅವಲಂಬಿತವಾಗಿದೆ.

Leave a Reply

Your email address will not be published. Required fields are marked *