ಬೆಟ್ಟದ ನೆಲ್ಲಿಕಾಯಿ ಗಂಟಲಲ್ಲಿ ಸಿಲುಕಿ 2 ವರ್ಷದ ಮಗು ಸಾವು

ಬೆಟ್ಟದ ನೆಲ್ಲಿಕಾಯಿ ನುಂಗಿ 2 ವರ್ಷದ ಮಗು ಸಾವು ಕೋಲಾರ: ಆಟವಾಡುತ್ತಿದ್ದ ವೇಳೆ ಬೆಟ್ಟದ ನೆಲ್ಲಿಕಾಯಿ ಗಂಟಲಲ್ಲಿ ಸಿಲುಕಿ ಎರಡು ವರ್ಷದ ಮಗು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ. ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದ ಗಾಂಧಿ ಸರ್ಕಲ್ ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದೆ. ರವಿ ಮತ್ತು ಮಾಲಾ ದಂಪತಿಯ ಎರಡು ವರ್ಷದ ಗಂಡು ಮಗು ವಿಜಯೇಂದ್ರ ಮೃತಪಟ್ಟ ಮಗು ಎಂದು ಗುರುತಿಸಲಾಗಿದೆ. ಮಾಹಿತಿ ಪ್ರಕಾರ, ಮಗು ಮನೆಯ ಬಳಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಬೆಟ್ಟದ ನೆಲ್ಲಿಕಾಯಿಯನ್ನು…

Read More

ಕೊಡಗಿನ ದುಬಾರೆ ಶಿಬಿರದಲ್ಲಿ ಆನೆಗಳ ಕಾಳಗ – ಪ್ರವಾಸಿಗ ಮಹಿಳೆ ದುರ್ಮರಣ ಕಂಜನ್, ಧನಂಜಯ ಆಕ್ರೋಶದ ಹಿಂದಿನ ಕಾರಣವೇನು?

ದುಬಾರೆಯಲ್ಲಿ ಸಾಕಾನೆಗಳ ಕಾಳಗಕ್ಕೆ ಮಹಿಳೆ ಬಲಿ – ಪಳಗಿದ ಆನೆಗಳು ಕಾದಾಟ ಮಾಡಿದ್ದು ಯಾಕೆ? ಮಡಿಕೇರಿ: ದೇಶ-ವಿದೇಶಗಳಿಂದ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುವ ಕೊಡಗಿನ ಪ್ರಸಿದ್ಧ ದುಬಾರೆ ಸಾಕಾನೆ ಶಿಬಿರದಲ್ಲಿ ನಡೆದ ದುರಂತ ಒಂದು ಬಾರಿ ಮತ್ತೆ ಆನೆಗಳ ಸುರಕ್ಷತೆ ಮತ್ತು ನಿರ್ವಹಣೆಯ ಪ್ರಶ್ನೆಯನ್ನು ಮುಂದಿಟ್ಟಿದೆ. ಆನೆಗಳ ಜೊತೆ ಫೋಟೋ ತೆಗೆಸಿಕೊಳ್ಳಬೇಕು, ಆಹಾರ ನೀಡಬೇಕು, ಸ್ನಾನ ಮಾಡಿಸಬೇಕು ಎಂಬ ಉತ್ಸಾಹದಿಂದ ಬರುವ ಪ್ರವಾಸಿಗರ ನಡುವೆ ಇದೀಗ ಆತಂಕದ ವಾತಾವರಣ ನಿರ್ಮಾಣವಾಗಿದೆ. ದುಬಾರೆ ಸಾಕಾನೆ ಶಿಬಿರದಲ್ಲಿ ನಡೆದ ಸಾಕಾನೆಗಳ ಕಾಳಗದಲ್ಲಿ…

Read More

ಚಿಕ್ಕಬಾಣಾವರ ದುರಂತ: ಆಟವಾಡುತ್ತಿದ್ದ ಮಕ್ಕಳ ಮೇಲೆ ಗೇಟ್ ಬಿದ್ದು ಮಗು ಮೃತ

ಬೆಂಗಳೂರು: ಆಟವಾಡುತ್ತಿದ್ದ ಮಕ್ಕಳ ಗುಂಪಿನ ಮೇಲೆ ಕಾಂಪೌಂಡ್ ಗೇಟ್ ಬಿದ್ದು 5 ವರ್ಷದ ಮಗು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಂಗಳೂರು ಉತ್ತರ ತಾಲ್ಲೂಕಿನ ಚಿಕ್ಕಬಾಣಾವರ ದ್ವಾರಕಾನಗರದಲ್ಲಿ ನಡೆದಿದೆ. ಮೃತ ಬಾಲಕಿಯನ್ನು ಗೌಸಿಯಾ (5) ಎಂದು ಗುರುತಿಸಲಾಗಿದೆ. ಈ ಘಟನೆಯಲ್ಲಿ ಅಣ್ಣ ಇಮಾಮ್ ಮತ್ತು ತಂಗಿ ಶಕಿಲಾ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜೊತೆಗೆ 3 ವರ್ಷದ ಮಗು ಸುಮಯ್ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಇಮಾಮ್ ರಮೀಜಾ ದಂಪತಿಯ ಮಕ್ಕಳಾದ ಗೌಸಿಯಾ, ಇಮಾಮ್ ಹಾಗೂ…

Read More

ಈಜಲು ಹೋದ ಇಬ್ಬರು ಯುವಕರು ಕೆರೆಯಲ್ಲಿ ನೀರುಪಾಲು

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಪಚ್ಚರಮಾಕಲಹಳ್ಳಿ ಬಳಿ ಕೆರೆಯಲ್ಲಿ ಈಜಲು ಹೋದ ಅಣ್ಣ-ತಮ್ಮ ಇಬ್ಬರು ಯುವಕರು ನೀರುಪಾಲಾಗಿ ದುರ್ಮರಣ ಹೊಂದಿರುವ ಘಟನೆ ನಡೆದಿದೆ. ಮೃತರನ್ನು ರೋಣೂರು ಹೋಬಳಿ ವ್ಯಾಪ್ತಿಯ ಚಾಂಪಲ್ಲಿ ಗ್ರಾಮದ ನರೇಂದ್ರ (25) ಹಾಗೂ ಚಂದನ್ (23) ಎಂದು ಗುರುತಿಸಲಾಗಿದೆ. ಮಾಹಿತಿಯ ಪ್ರಕಾರ, ಇಬ್ಬರೂ ಗಾರೆ ಕೆಲಸಕ್ಕೆ ಪಚ್ಚರಮಾಕಲಹಳ್ಳಿಗೆ ಬಂದಿದ್ದರು. ಮಧ್ಯಾಹ್ನದ ತೀವ್ರ ಬಿಸಿಲಿನ ತಾಪಮಾನದಿಂದ ತಂಪಿಗಾಗಿ ಸಮೀಪದ ಕೆರೆಯಲ್ಲಿ ಈಜಲು ಇಳಿದಿದ್ದಾರೆ. ಈ ವೇಳೆ ಕೆರೆಯ ಆಳ ಅಂದಾಜಿಸಲು ಸಾಧ್ಯವಾಗದೆ ಇಬ್ಬರೂ ನೀರಿನಲ್ಲಿ ಮುಳುಗಿ…

Read More

ನಾಗರಬಾವಿ ಹೋಟೆಲ್‌ನಲ್ಲಿ ಭೀಕರ ಅಗ್ನಿ ಅವಘಡ: ಓರ್ವ ಸಾವು

ಬೆಂಗಳೂರು ನಗರದ ನಾಗರಬಾವಿಯ ದುರ್ಗಾ ಶ್ರೀ ಗ್ರ್ಯಾಂಡ್ ಹೋಟೆಲ್‌ನಲ್ಲಿ ಶುಕ್ರವಾರ ತಡರಾತ್ರಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಘಟನೆದಲ್ಲಿ 45 ವರ್ಷದ ರಾಜಕುಮಾರ್ ಎಂಬುವವರು ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹೋಟೆಲ್‌ನಲ್ಲಿ ಕಾಣಿಸಿಕೊಂಡ ಬೆಂಕಿಯಿಂದ ದಟ್ಟ ಹೊಗೆ ಆವರಿಸಿದ್ದರಿಂದ ಮೇಲ್ಮಹಡಿಯಲ್ಲಿ ಸಿಲುಕಿದ್ದ ಸಿಬ್ಬಂದಿಗೆ ಉಸಿರಾಟದ ತೊಂದರೆ ಉಂಟಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಐವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರು. ಚಿಕಿತ್ಸೆ ಪಡೆಯುತ್ತಿದ್ದ ರಾಜಕುಮಾರ್ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಉಳಿದ ನಾಲ್ವರ ಸ್ಥಿತಿ ಗಂಭೀರವಾಗಿದ್ದು,…

Read More

ಬ್ರೆಜಿಲ್‌ನಲ್ಲಿ ಭೀಕರ ವಿಮಾನ ದುರಂತ: ವಸತಿ ಕಟ್ಟಡಕ್ಕೆ ಡಿಕ್ಕಿ ಹೊಡೆದು 3 ಮಂದಿ ಸಾವು

ಬ್ರೆಜಿಲ್‌ನ ಬೆಲೊ ಹೊರಿಜಾಂಟೆ ನಗರದಲ್ಲಿ ಭೀಕರ ವಿಮಾನ ಅಪಘಾತ ಸಂಭವಿಸಿದೆ. ಪಂಪುಲ್ಹಾ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಸಣ್ಣ ವಿಮಾನವೊಂದು ವಸತಿ ಕಟ್ಟಡಕ್ಕೆ ಡಿಕ್ಕಿ ಹೊಡೆದಿದೆ. ಈ ದುರ್ಘಟನೆಯಲ್ಲಿ ಪೈಲಟ್ ಸೇರಿ ಒಟ್ಟು ಮೂವರು ಮೃತಪಟ್ಟಿದ್ದಾರೆ. ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಐದು ಜನರಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾವೊ ಪಾಲೊಗೆ ತೆರಳುತ್ತಿದ್ದ ಈ ವಿಮಾನವು ಟೇಕಾಫ್ ನಂತರ ತಾಂತ್ರಿಕ ದೋಷ ಅಥವಾ ನಿಯಂತ್ರಣ ತಪ್ಪಿದ ಕಾರಣದಿಂದ ಪತನಗೊಂಡಿರಬಹುದು ಎಂದು ಪ್ರಾಥಮಿಕ ವರದಿಗಳು…

Read More

ಗದಗಕ್ಕೆ ಹೋಗುತ್ತಿದ್ದ ಪಲ್ಲಕ್ಕಿ ಬಸ್‌ಗೆ ಬೆಂಕಿ – ಚಾಲಕನ ಸಮಯಪ್ರಜ್ಞೆಯಿಂದ 17 ಜನ ಪಾರು

ಹಾವೇರಿ: ಬೆಂಗಳೂರಿನಿಂದ ಗದಗ ನಗರಕ್ಕೆ ತೆರಳುತ್ತಿದ್ದ ಪಲ್ಲಕ್ಕಿ ಬಸ್‌ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಕರಕಲಾದ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕಿನ ದೇವರಗುಡ್ಡ ಗ್ರಾಮದ ಬಳಿ ನಡೆದಿದೆ. KA-57-F6680 ಸಂಖ್ಯೆಯ ಪಲ್ಲಕ್ಕಿ ಬಸ್‌ನಲ್ಲಿ ಸುಮಾರು 17ಕ್ಕೂ ಹೆಚ್ಚು ಪ್ರಯಾಣಿಕರು ಗದಗ ಕಡೆಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಬಸ್‌ನಲ್ಲಿ ಏಕಾಏಕಿ ಹೊಗೆ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಬೆಂಕಿ ವ್ಯಾಪಿಸಿದೆ ಎನ್ನಲಾಗಿದೆ. ಬ್ರೇಕ್ ಲೈನ್ ದೋಷದಿಂದ ಈ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ…

Read More

ಜಬಲ್ಪುರ ದೋಣಿ ದುರಂತ: ಸಾವಿನಲ್ಲೂ ಮಗನನ್ನು ಬಿಗಿಯಾಗಿ ತಬ್ಬಿಕೊಂಡ ತಾಯಿ, ಕರುಳು ಹಿಂಡುವ ದೃಶ್ಯ

ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದ ಭೀಕರ ದೋಣಿ ದುರಂತ ದೇಶವನ್ನೇ ಕಣ್ಣೀರಾಗಿಸಿದೆ. ಬಾರ್ಗಿ ಅಣೆಕಟ್ಟಿನಲ್ಲಿ ಪ್ರವಾಸಿಗರನ್ನು ಹೊತ್ತು ಸಾಗುತ್ತಿದ್ದ ಕ್ರೂಸ್ ದೋಣಿ ಪ್ರಬಲ ಗಾಳಿ ಮತ್ತು ಅಲೆಗಳ ಪರಿಣಾಮ ಪಲ್ಟಿಯಾಗಿ 7 ಮಂದಿ ಸಾವನ್ನಪ್ಪಿದ್ದಾರೆ. ಈ ದುರಂತದಲ್ಲಿ ನಾಲ್ಕು ವರ್ಷದ ಮಗುವನ್ನು ತನ್ನ ಎದೆಗೆ ಬಿಗಿಯಾಗಿ ತಬ್ಬಿಕೊಂಡ ಸ್ಥಿತಿಯಲ್ಲೇ ತಾಯಿ ಮೃತಳಾಗಿರುವ ದೃಶ್ಯ ರಕ್ಷಣಾ ಸಿಬ್ಬಂದಿಯನ್ನೇ ಕಣ್ಣೀರಾಗಿಸಿದೆ. ಮಗುವನ್ನು ಉಳಿಸಬೇಕೆಂಬ ತಾಯಿಯ ಕೊನೆಯ ಹೋರಾಟ ಎಲ್ಲರ ಮನಕಲಕಿದೆ. 30ಕ್ಕೂ ಹೆಚ್ಚು ಪ್ರಯಾಣಿಕರಿದ್ದ ದೋಣಿ ಏಕಾಏಕಿ ಹವಾಮಾನ ವೈಪರೀತ್ಯದಿಂದ ಅಸ್ಥಿರಗೊಂಡು…

Read More

ಬೆಂಗಳೂರು ನಂದಿನಿ ಲೇಔಟ್‌ನಲ್ಲಿ ಪ್ಲಾಸ್ಟಿಕ್ ಗೋಡೌನ್‌ಗೆ ಬೆಂಕಿ – ಪಿಜಿ ಯುವತಿಯರ ರೋಚಕ ರಕ್ಷಣೆ

ಬೆಂಗಳೂರು: ರಾಜಧಾನಿಯ ನಂದಿನಿ ಲೇಔಟ್‌ನಲ್ಲಿ ತಡರಾತ್ರಿ ಸಂಭವಿಸಿದ ಭೀಕರ ಅಗ್ನಿ ಅವಘಡ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಪ್ಲಾಸ್ಟಿಕ್ ಗೋಡೌನ್‌ನಲ್ಲಿ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ವ್ಯಾಪಿಸಿ ಪಕ್ಕದ ಮನೆಗಳು ಹಾಗೂ ಲೇಡೀಸ್ ಪಿಜಿಗೂ ಹಬ್ಬಿದ ಪರಿಣಾಮ ದೊಡ್ಡ ದುರಂತ ತಪ್ಪಿದಂತಾಗಿದೆ. ಗೋಡೌನ್‌ನಲ್ಲಿ ಪ್ಲಾಸ್ಟಿಕ್ ವಸ್ತುಗಳು ಸಂಗ್ರಹವಾಗಿದ್ದ ಕಾರಣ ಬೆಂಕಿ ಭಾರೀ ವೇಗದಲ್ಲಿ ಹರಡಿತು. ಬೆಂಕಿಯ ತೀವ್ರತೆಗೆ ಸುತ್ತಮುತ್ತಲಿನ ಮರಗಳು, ಕಬ್ಬಿಣದ ಗೇಟ್‌ಗಳು ಕೂಡ ಹೊತ್ತಿ ಉರಿದವು. ಘಟನೆಯ ವೇಳೆಗೆ ಪಕ್ಕದ ಲೇಡೀಸ್ ಪಿಜಿಯಲ್ಲಿ ಸುಮಾರು 50ಕ್ಕೂ ಹೆಚ್ಚು ಯುವತಿಯರು ವಾಸವಿದ್ದರು….

Read More