ರಾಯರ ಮಠ ಹುಂಡಿ ಎಣಿಕೆ ಪೂರ್ಣ | ಚಿನ್ನ, ಬೆಳ್ಳಿ ಸೇರಿ ಕೋಟಿ ಸಂಗ್ರಹ

ಮಂತ್ರಾಲಯ ರಾಯರ ಮಠದಲ್ಲಿ 20 ದಿನಗಳ ಹುಂಡಿ ಎಣಿಕೆ ಪೂರ್ಣ: ₹2.78 ಕೋಟಿ ಕಾಣಿಕೆ ಸಂಗ್ರಹ

ರಾಯಚೂರು ಜಿಲ್ಲೆಯ ಮಂತ್ರಾಲಯದಲ್ಲಿರುವ ಕಲಿಯುಗದ ಕಾಮಧೇನು ಎಂದೇ ಖ್ಯಾತಿ ಪಡೆದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಏಪ್ರಿಲ್ ಹಾಗೂ ಮೇ ತಿಂಗಳ 20 ದಿನಗಳ ಕಾಣಿಕೆ ಹುಂಡಿ ಎಣಿಕೆ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿದೆ. ಭಕ್ತರಿಂದ ಈ ಅವಧಿಯಲ್ಲಿ ಒಟ್ಟು ₹2,78,19,526 ರೂ. ಕಾಣಿಕೆ ಸಂಗ್ರಹವಾಗಿದೆ.

ಮಠದ ಪ್ರಕಟಣೆಯ ಪ್ರಕಾರ, ಸಂಗ್ರಹವಾದ ಕಾಣಿಕೆಯಲ್ಲಿ ₹2,69,28,176 ರೂ. ಕರೆನ್ಸಿ ನೋಟುಗಳಾಗಿದ್ದು, ₹8,91,350 ರೂ. ಮೌಲ್ಯದ ನಾಣ್ಯಗಳೂ ಸೇರಿವೆ. ಇದಲ್ಲದೆ ಭಕ್ತರು 15.100 ಗ್ರಾಂ ಚಿನ್ನ ಹಾಗೂ 751 ಗ್ರಾಂ ಬೆಳ್ಳಿಯನ್ನು ಕಾಣಿಕೆಯಾಗಿ ಸಮರ್ಪಿಸಿದ್ದಾರೆ.

ಮಂತ್ರಾಲಯ ರಾಯರ ಮಠದಲ್ಲಿ ಸೋಮವಾರ (ಮೇ 11) ರಾತ್ರಿ ಹುಂಡಿ ಎಣಿಕೆ ಕಾರ್ಯ ಮುಕ್ತಾಯಗೊಂಡಿತು. ಈ ಕಾರ್ಯದಲ್ಲಿ ಮಠದ ನೂರಾರು ಸಿಬ್ಬಂದಿ, ಭಜನಾ ಮಂಡಳಿ ಸದಸ್ಯರು ಹಾಗೂ ಕರ ಸೇವಕರು ಭಾಗವಹಿಸಿದ್ದರು.

ಶ್ರೀ ರಾಘವೇಂದ್ರ ಸ್ವಾಮಿಗಳ ಮೇಲಿನ ಭಕ್ತರ ಅಪಾರ ನಂಬಿಕೆ ಮತ್ತು ಭಕ್ತಿ ಮತ್ತೊಮ್ಮೆ ಈ ಕಾಣಿಕೆ ಸಂಗ್ರಹದ ಮೂಲಕ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *