ಬ್ರೆಜಿಲ್‌ನಲ್ಲಿ ಭೀಕರ ವಿಮಾನ ದುರಂತ: ವಸತಿ ಕಟ್ಟಡಕ್ಕೆ ಡಿಕ್ಕಿ ಹೊಡೆದು 3 ಮಂದಿ ಸಾವು

ಬ್ರೆಜಿಲ್‌ನ ಬೆಲೊ ಹೊರಿಜಾಂಟೆ ನಗರದಲ್ಲಿ ಭೀಕರ ವಿಮಾನ ಅಪಘಾತ ಸಂಭವಿಸಿದೆ. ಪಂಪುಲ್ಹಾ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಸಣ್ಣ ವಿಮಾನವೊಂದು ವಸತಿ ಕಟ್ಟಡಕ್ಕೆ ಡಿಕ್ಕಿ ಹೊಡೆದಿದೆ. ಈ ದುರ್ಘಟನೆಯಲ್ಲಿ ಪೈಲಟ್ ಸೇರಿ ಒಟ್ಟು ಮೂವರು ಮೃತಪಟ್ಟಿದ್ದಾರೆ. ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಐದು ಜನರಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾವೊ ಪಾಲೊಗೆ ತೆರಳುತ್ತಿದ್ದ ಈ ವಿಮಾನವು ಟೇಕಾಫ್ ನಂತರ ತಾಂತ್ರಿಕ ದೋಷ ಅಥವಾ ನಿಯಂತ್ರಣ ತಪ್ಪಿದ ಕಾರಣದಿಂದ ಪತನಗೊಂಡಿರಬಹುದು ಎಂದು ಪ್ರಾಥಮಿಕ ವರದಿಗಳು…

Read More

ಪಾಕಿಸ್ತಾನ ಭಾಗವೆಂದು ಜಮ್ಮು-ಕಾಶ್ಮೀರ ತೋರಿಕೆ; ನೇಪಾಳ ಏರ್‌ಲೈನ್ಸ್ ವಿರುದ್ಧ ಟೀಕೆ

ಜಮ್ಮು ಮತ್ತು ಕಾಶ್ಮೀರವನ್ನು ಪಾಕಿಸ್ತಾನದ ಭಾಗವೆಂದು ತನ್ನ ನೆಟ್‌ವರ್ಕ್ ನಕ್ಷೆಯಲ್ಲಿ ತೋರಿಸಿ ನೇಪಾಳ ಏರ್‌ಲೈನ್ಸ್ ತೀವ್ರ ವಿವಾದಕ್ಕೀಡಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಂಚಲಾಗಿದ್ದ ಪೋಸ್ಟ್‌ನಲ್ಲಿ ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಪ್ರದೇಶಗಳನ್ನು ಪಾಕಿಸ್ತಾನದ ಭಾಗವಾಗಿ ತೋರಿಸಲಾಗಿದ್ದು, ಭಾರತೀಯ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಪೋಸ್ಟ್ ವೈರಲ್ ಆದ ಬೆನ್ನಲ್ಲೇ #BoycottNepalAirlines ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್‌ಗೆ ಬಂದಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹಾಗೂ ವಿಮಾನಯಾನ ಸಚಿವಾಲಯ ನೇಪಾಳದ ವಿರುದ್ಧ ರಾಜತಾಂತ್ರಿಕ ಕ್ರಮ ಕೈಗೊಳ್ಳಬೇಕೆಂದು ಹಲವರು ಒತ್ತಾಯಿಸಿದ್ದಾರೆ. ಭೋಜ್‌ಪುರಿ ನಟ ಹಾಗೂ ಗಾಯಕ ಖೇಸರಿಲಾಲ್…

Read More

ಅಮೆರಿಕದಲ್ಲಿ ಆಂಧ್ರದ ಯುವಕ ಆತ್ಮಹತ್ಯೆ – ಉದ್ಯೋಗ ಸಿಗದೆ ಜೀವನ ಅಂತ್ಯ

ಅಮೆರಿಕದಲ್ಲಿ ವಿದ್ಯಾಭ್ಯಾಸಕ್ಕಾಗಿ ತೆರಳಿದ್ದ ಆಂಧ್ರಪ್ರದೇಶದ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮನಕಲಕುವಂತಿದೆ. ಕರ್ನೂಲ್ ಜಿಲ್ಲೆಯ 26 ವರ್ಷದ ಇರಗನಬೋಯಿನ ಚಂದು, ಚಿಕಾಗೋದ ಡಿಪಾಲ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ ಬಳಿಕ ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದರು. ಆದರೆ ಹಲವು ವಾರಗಳಿಂದ ಕೆಲಸ ಸಿಗದೆ ಆರ್ಥಿಕ ಮತ್ತು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎನ್ನಲಾಗಿದೆ. ಕುಟುಂಬದ ಸಾಲಬಾಧೆ ಹಾಗೂ ತಂದೆಯ ಆರ್ಥಿಕ ಸಂಕಷ್ಟದಿಂದ ತೀವ್ರವಾಗಿ ಮನನೊಂದಿದ್ದ ಚಂದು, ಅಮೆರಿಕದಲ್ಲಿರುವ ತಮ್ಮ ನಿವಾಸದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ಕುಟುಂಬವನ್ನು ಶೋಕಸಾಗರದಲ್ಲಿ ಮುಳುಗಿಸಿದೆ….

Read More

ಪ್ರಯಾಣಿಕ ರೈಲು ಅಪಘಾತ: 81ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ

ಇಂಡೋನೇಷ್ಯಾದಲ್ಲಿ ಭೀಕರ ರೈಲು ಅಪಘಾತ ಸಂಭವಿಸಿದೆ. ಲೆವೆಲ್ ಕ್ರಾಸಿಂಗ್‌ನಲ್ಲಿ ಟ್ಯಾಕ್ಸಿಯೊಂದು ಪ್ರಯಾಣಿಕರ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ರೈಲು ಹಳಿಯಲ್ಲಿ ನಿಂತಿತ್ತು. ಇದೇ ವೇಳೆಗೆ ಮತ್ತೊಂದು ರೈಲು ಬಂದು ಮಹಿಳೆಯರ ಬೋಗಿಗೆ ಡಿಕ್ಕಿ ಹೊಡೆದಿದೆ. ಈ ಭೀಕರ ಅಪಘಾತದಲ್ಲಿ 7 ಮಂದಿ ಸಾವನ್ನಪ್ಪಿದ್ದು, 81 ಮಂದಿಗೆ ಗಾಯಗಳಾಗಿವೆ. ಹಲವರು ಇನ್ನೂ ಬೋಗಿಗಳೊಳಗೆ ಸಿಲುಕಿಕೊಂಡಿರುವ ಶಂಕೆ ಇದೆ. ರಕ್ಷಣಾ ಕಾರ್ಯಾಚರಣೆ ವೇಗವಾಗಿ ಮುಂದುವರಿದಿದೆ. ಇಂಡೋನೇಷ್ಯಾದ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಸಮಿತಿ (KNKT) ಘಟನೆಗೆ ಸಂಬಂಧಿಸಿದಂತೆ ತನಿಖೆ ಆರಂಭಿಸಿದೆ.

Read More

ಸಂಧಾನಕ್ಕೆ ಹೊಸ ತಿರುವು: ಅಮೆರಿಕ ಜೊತೆ ಶಾಂತಿ ಮಾತುಕತೆಗೆ ಇರಾನ್ ಮುಂದಾಳಿ

ಟೆಹ್ರಾನ್‌ನಿಂದ ದೊಡ್ಡ ಬೆಳವಣಿಗೆ…ಅಮೆರಿಕ ಜೊತೆಗಿನ ಸಂಘರ್ಷದ ನಡುವೆ ಇರಾನ್ ಹೊಸ ಶಾಂತಿ ಪ್ರಸ್ತಾವನೆ ಮುಂದಿಟ್ಟಿದೆ. ಪಾಕಿಸ್ತಾನದ ಮೂಲಕ ಈ ಪ್ರಸ್ತಾವನೆ ರವಾನೆಯಾಗಿದ್ದು,ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ತೆರೆಯಲು ಸಿದ್ಧ ಎಂದು ಇರಾನ್ ಘೋಷಿಸಿದೆ. ಆದರೆ, ಆರ್ಥಿಕ ನಿರ್ಬಂಧಗಳನ್ನು ತೆರವುಗೊಳಿಸುವಂತೆ ಅಮೆರಿಕಗೆ ಷರತ್ತು ಹಾಕಲಾಗಿದೆ. ಇನ್ನೊಂದೆಡೆ, ಪರಮಾಣು ಕಾರ್ಯಕ್ರಮದ ವಿಚಾರವನ್ನು ತಾತ್ಕಾಲಿಕವಾಗಿ ಬದಿಗಿಟ್ಟು,ಮುಂದಿನ ಹಂತದಲ್ಲಿ ಚರ್ಚೆ ನಡೆಸುವ ತಂತ್ರವನ್ನು ಇರಾನ್ ಅನುಸರಿಸಿದೆ. ಈ ನಡುವೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉನ್ನತ ಮಟ್ಟದ ಸಭೆ ಕರೆದಿದ್ದು,ಈ ಪ್ರಸ್ತಾವನೆಗೆ ಹೇಗೆ ಪ್ರತಿಕ್ರಿಯೆ…

Read More

ಪಾಕಿಸ್ತಾನಕ್ಕೆ ಅರಾಗ್ಚಿ ಭೇಟಿ – ಅಮೆರಿಕ ಜೊತೆ ನೇರ ಮಾತುಕತೆಗೆ ಇರಾನ್ ನಿರಾಕರಣೆ

ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ನೇತೃತ್ವದ ನಿಯೋಗವು ಪಾಕಿಸ್ತಾನಕ್ಕೆ ಆಗಮಿಸಿದ್ದು, ಅಮೆರಿಕದೊಂದಿಗೆ ನೇರ ಮಾತುಕತೆ ಸಾಧ್ಯತೆಯನ್ನು ಇರಾನ್ ತಿರಸ್ಕರಿಸಿದೆ. ಹಾರ್ಮುಜ್ ಜಲಸಂಧಿ ಮತ್ತು ಕದನ ವಿರಾಮ ಸ್ಥಿರಗೊಳಿಸುವ ಬಗ್ಗೆ ನಡೆಯುತ್ತಿರುವ ಈ ರಾಜತಾಂತ್ರಿಕ ಪ್ರಕ್ರಿಯೆಯಲ್ಲಿ ಪಾಕಿಸ್ತಾನ ಮಧ್ಯಸ್ಥಿಕೆಯ ಪಾತ್ರವಹಿಸಿದೆ. ಇಸ್ಲಾಮಾಬಾದ್‌ನಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ಉನ್ನತ ಮಟ್ಟದ ಚರ್ಚೆಗಳು ಮುಂದುವರಿಯಲಿವೆ.

Read More

ಟ್ರಂಪ್‌ ಹೇಳಿಕೆಗೆ ಭಾರತದಲ್ಲಿ ಆಕ್ರೋಶ – ಈಗ ಅಮೆರಿಕ ಸ್ಪಷ್ಟನೆ

ನವದೆಹಲಿ: ಭಾರತದ ಬಗ್ಗೆ ವಿವಾದಾತ್ಮಕ ಪೋಸ್ಟ್‌ ಹಂಚಿಕೊಂಡಿರುವ ಡೊನಾಲ್ಡ್‌ ಟ್ರಂಪ್‌ ಅವರ ಹೇಳಿಕೆ ಈಗ ರಾಜತಾಂತ್ರಿಕ ಚರ್ಚೆಗೆ ಕಾರಣವಾಗಿದೆ. ಈ ಹೇಳಿಕೆಗೆ ಭಾರತದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ, ಅಮೆರಿಕ ರಾಯಭಾರ ಕಚೇರಿ ಸ್ಪಷ್ಟನೆ ನೀಡಿದೆ. ಟ್ರಂಪ್‌ ಅವರು ಪ್ರಧಾನಿ ನರೇಂದ್ರ ಮೋದಿಯನ್ನು ಹೊಗಳಿದ್ದು, ಭಾರತ-ಅಮೆರಿಕ ಸಂಬಂಧ ಗಟ್ಟಿಯಾಗಲಿದೆ ಎಂದು ಹೇಳಲಾಗಿದೆ. ಇನ್ನು ಭಾರತ ವಿದೇಶಾಂಗ ಇಲಾಖೆ ಈ ವಿಷಯದಲ್ಲಿ ಸಂಯಮದ ಪ್ರತಿಕ್ರಿಯೆ ನೀಡಿದ್ದು, ವಿವಾದವನ್ನು ಹೆಚ್ಚಿಸದಿರಲು ನಿರ್ಧರಿಸಿದೆ. ಈ ನಡುವೆ ವಿರೋಧ ಪಕ್ಷಗಳು ಮೋದಿ ಮೌನವನ್ನು ಪ್ರಶ್ನಿಸುತ್ತಿದ್ದು,…

Read More