ಬಳ್ಳಾರಿಯಲ್ಲಿ ಭೀಕರ ಸಿಲಿಂಡರ್ ಬ್ಲಾಸ್ಟ್ – ಹೊತ್ತಿ ಉರಿದ ಹೋಟೆಲ್, 10 ವರ್ಷದ ಬಾಲಕನಿಗೆ ಗಂಭೀರ ಗಾಯ

ಬಳ್ಳಾರಿ: ಜಿಲ್ಲೆಯ ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಹೋಟೆಲ್‌ನಲ್ಲಿ ಇದ್ದ ಎರಡು ಗ್ಯಾಸ್ ಸಿಲಿಂಡರ್‌ಗಳು ಏಕಾಏಕಿ ಸ್ಫೋಟಗೊಂಡು ಹೋಟೆಲ್ ಹೊತ್ತಿ ಉರಿದ ಘಟನೆ ನಡೆದಿದೆ. ಈ ಹೋಟೆಲ್ ತೆಕ್ಕಲಕೋಟೆಯ ನಿವಾಸಿ ಈರಣ್ಣ ಅವರಿಗೆ ಸೇರಿದ್ದಾಗಿದೆ. ತಡರಾತ್ರಿ ಸುಮಾರು 2 ಗಂಟೆ ಸುಮಾರಿಗೆ ಅವಘಡ ಸಂಭವಿಸಿದ್ದು, ಆಗ ಹೋಟೆಲ್‌ನಲ್ಲಿ ಈರಣ್ಣನ ಕುಟುಂಬದ 9 ಮಂದಿ ಮಲಗಿದ್ದರು ಎಂದು ತಿಳಿದು ಬಂದಿದೆ. ಸಿಲಿಂಡರ್ ಸ್ಫೋಟದ ಪರಿಣಾಮವಾಗಿ 10 ವರ್ಷದ ಶ್ರೀನಿವಾಸ್ ಎಂಬ ಬಾಲಕನಿಗೆ ಗಂಭೀರ ಗಾಯಗಳಾಗಿವೆ….

Read More

ಹಾಸನದಲ್ಲಿ ರೌಡಿಶೀಟರ್ ಸೈಲೆಂಟ್ ಸುನಿಲ್‌ಗೆ ಭರ್ಜರಿ ಸ್ವಾಗತ – ವೀಡಿಯೋ ವೈರಲ್

ಹಾಸನ: ಜಿಲ್ಲೆಯ ಶಾಂತಿಗ್ರಾಮ ಟೋಲ್ ಸಮೀಪ ನಟೋರಿಯಸ್ ರೌಡಿಶೀಟರ್ ಸೈಲೆಂಟ್ ಸುನಿಲ್ ಆಗಮಿಸುತ್ತಿದ್ದಂತೆ ಯುವಕರ ಗುಂಪೊಂದು ಭರ್ಜರಿ ಸ್ವಾಗತ ಕೋರಿರುವ ಘಟನೆ ನಡೆದಿದೆ. ಹತ್ತಾರು ಕಾರುಗಳಲ್ಲಿ ಬಂದ ಬೆಂಬಲಿಗರು, ಸೈಲೆಂಟ್ ಸುನಿಲ್ ಕಾರನ್ನು ಎಸ್ಕಾರ್ಟ್ ರೀತಿಯಲ್ಲಿ ಹಿಂಬಾಲಿಸಿಕೊಂಡು ಬಂದಿದ್ದಾರೆ. ಈ ವೇಳೆ ರಸ್ತೆ ಮೇಲೆ ಭಾರಿ ಸಂಚಾರ ಉಂಟಾಗಿ ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾಯಿತು. ಮಾಜಿ ಶಾಸಕ ಪ್ರೀತಂಗೌಡ ಅವರ ಆಪ್ತರು ಈ ಸ್ವಾಗತ ಕಾರ್ಯಕ್ರಮವನ್ನು ಆಯೋಜಿಸಿದ್ದು, ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ವಿಶೇಷವಾಗಿ ಪ್ರೀತಂಗೌಡ…

Read More

ಜಾತ್ರೆಯಲ್ಲಿ ಭೀಕರ ದುರಂತ: ರಥದ ಚಕ್ರಕ್ಕೆ ಸಿಲುಕಿ ವ್ಯಕ್ತಿಯ ಎರಡೂ ಕಾಲು ಕಟ್ – ಇಬ್ಬರು ಗಂಭೀರ ಗಾಯ

ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ನಡೆದ ಜಾತ್ರೆಯಲ್ಲಿ ಭೀಕರ ದುರಂತ ಸಂಭವಿಸಿದೆ. ನಗರದ ಥೇರು ಮೈದಾನದಲ್ಲಿ ನಡೆದ ಶ್ರೀ ಬಸವೇಶ್ವರ ಜಾತ್ರೆ ವೇಳೆ ರಥದ ಚಕ್ರಕ್ಕೆ ಸಿಲುಕಿ ವ್ಯಕ್ತಿಯೋರ್ವನ ಎರಡೂ ಕಾಲುಗಳು ಕಟ್ ಆಗಿವೆ. ಧನರಾಜ್ ಎಂಬ ವ್ಯಕ್ತಿ ರಥದಡಿಗೆ ಸಿಲುಕಿದ ಪರಿಣಾಮ ಈ ದುರ್ಘಟನೆ ನಡೆದಿದೆ. ಘಟನೆಯ ತೀವ್ರತೆಯಿಂದ ಸ್ಥಳದಲ್ಲೇ ಜನರಲ್ಲಿ ಆತಂಕ ಉಂಟಾಗಿದೆ. ಇನ್ನೂ ಇಬ್ಬರು ವ್ಯಕ್ತಿಗಳ ಕಾಲಿಗೆ ಗಂಭೀರವಾಗಿ ಗಾಯವಾಗಿದ್ದು, ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಭೀಮಾಶಂಕರ ಎಂಬ ಮತ್ತೊಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು…

Read More

ತುಮಕೂರಿನಲ್ಲಿ 32 ನವಿಲುಗಳ ದುಃಖದ ಸಾವು | ಹೀಟ್‌ಸ್ಟ್ರೋಕ್ ಶಂಕೆ

ತುಮಕೂರು ಜಿಲ್ಲೆಯಲ್ಲಿ ಆತಂಕಕಾರಿ ಘಟನೆ ವರದಿಯಾಗಿದೆ. ತುಮಕೂರು ತಾಲೂಕಿನ ಬೊಮ್ಮನಹಳ್ಳಿ, ಕೋಳಿಹಳ್ಳಿ, ಭೈರಸಂದ್ರ ಮತ್ತು ಹುಲ್ಲೆನಹಳ್ಳಿ ಗ್ರಾಮಗಳಲ್ಲಿ ಏಪ್ರಿಲ್ 16ರಿಂದ 21ರವರೆಗೆ ಒಟ್ಟು 32 ನವಿಲುಗಳು ಸಾವನ್ನಪ್ಪಿವೆ. ಪ್ರಾಥಮಿಕ ಮಾಹಿತಿಯ ಪ್ರಕಾರ ತೀವ್ರ ಬಿಸಿಲಿನ ಹೊಡೆತದಿಂದ ಈ ನವಿಲುಗಳು ಮೃತಪಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಅರಣ್ಯ ಇಲಾಖೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ನಿಖರ ಕಾರಣವನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.

Read More

ಸಿಇಟಿ ಪರೀಕ್ಷೆ (CET Exam) ಬರೆಯಲು ಬಂದ ವಿದ್ಯಾರ್ಥಿನಿಯರ ಮೇಲೆ ಅಚ್ಚರಿಯ ಘಟನೆ ನಡೆದಿದೆ.

ಸಿಇಟಿ ಪರೀಕ್ಷೆ (CET Exam) ವೇಳೆ ಬೆಳಗಾವಿ ಸೇರಿದಂತೆ ಹಲವಾರು ಪರೀಕ್ಷಾ ಕೇಂದ್ರಗಳಲ್ಲಿ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಪರೀಕ್ಷೆಗೆ ಬಂದ ವಿದ್ಯಾರ್ಥಿನಿಯರ ತೀವ್ರ ತಪಾಸಣೆ ನಡೆಸಿದ ಸಿಬ್ಬಂದಿ, ಕೆಲ ವಿದ್ಯಾರ್ಥಿನಿಯರ ಮೂಗುತಿಗೆ ಗಮ್ ಟೇಪ್ ಅಂಟಿಸಿ ನಂತರವೇ ಪರೀಕ್ಷಾ ಕೇಂದ್ರದೊಳಗೆ ಪ್ರವೇಶ ನೀಡಿರುವುದು ಆಘಾತಕ್ಕೆ ಕಾರಣವಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಈ ಬಾರಿ ಮೊದಲ ಬಾರಿಗೆ ಕಡ್ಡಾಯ ವಸ್ತ್ರ ಸಂಹಿತೆ ಜಾರಿಗೆ ತಂದಿದ್ದು, ಅದರ ಭಾಗವಾಗಿ ಭದ್ರತಾ ಕ್ರಮಗಳನ್ನು ಮತ್ತಷ್ಟು ಕಠಿಣಗೊಳಿಸಲಾಗಿದೆ. ಪರೀಕ್ಷಾ ಕೇಂದ್ರದ…

Read More

ಕೊಡಗು ಜಿಲ್ಲೆಯಲ್ಲಿ ವಿದೇಶಿ ಮಹಿಳೆಯ ಮೇಲೆ ನಡೆದಿರುವ ದೌರ್ಜನ್ಯ ಪ್ರಕರಣ..! ರಾಜ್ಯದಾದ್ಯಂತ ಚರ್ಚೆಗೆ ಗ್ರಾಸ.

ಕೊಡಗು ಜಿಲ್ಲೆಯಲ್ಲಿ ವಿದೇಶಿ ಮಹಿಳೆಯ ಮೇಲೆ ನಡೆದಿರುವ ದೌರ್ಜನ್ಯ ಪ್ರಕರಣ ರಾಜ್ಯದಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಪೊನ್ನಂಪೇಟೆ ತಾಲ್ಲೂಕಿನ ಕುಟ್ಟ ಗ್ರಾಮದಲ್ಲಿರುವ ಖಾಸಗಿ ಹೋಂಸ್ಟೇಯಲ್ಲಿ ಈ ದುರ್ಘಟನೆ ನಡೆದಿದೆ. ಅಮೆರಿಕದ ವಾಷಿಂಗ್ಟನ್ ಮೂಲದ ಮಹಿಳೆ ಏಪ್ರಿಲ್ 19ರಂದು “ದೇವಿ ವಿಲ್ಲಾ” ಹೋಂಸ್ಟೇಯಲ್ಲಿ ವಾಸವಾಗಿದ್ದ ವೇಳೆ, ಅಲ್ಲಿ ಕೆಲಸ ಮಾಡುತ್ತಿದ್ದ ಝಾರ್ಖಂಡ್ ಮೂಲದ ವ್ರಿಜೇಶ್ ಕುಮಾರ್ ಎಂಬಾತ ಅತ್ಯಾಚಾರ ಎಸಗಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ದೂರು ಪ್ರಕಾರ, ಆರೋಪಿಯು ಮಹಿಳೆಗೆ ಮದ್ಯದಲ್ಲಿ ಮದ್ದು ಹಾಕಿ ಕುಡಿಸಿ ನಂತರ ಅತ್ಯಾಚಾರ…

Read More

ಬೆಳಗಾವಿಯಲ್ಲಿ ಕ್ರೂರ ಘಟನೆ: ನೈಟಿ ಧರಿಸಿದ್ದಕ್ಕೆ ಪತ್ನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪತಿ!

ಬೆಳಗಾವಿ ಜಿಲ್ಲೆಯ ಖಾನಾಪೂರದ ನಂದಗಡದಲ್ಲಿ ಪತ್ನಿ ನೈಟಿ ಧರಿಸಿದ್ದಕ್ಕೆ ಪತಿಯೊಬ್ಬ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಅಮಾನವೀಯ ಘಟನೆ ನಡೆದಿದೆ. 80% ಸುಟ್ಟ ಗಾಯಗಳಿಂದ ಮಂಜುಳಾ ಪಾಟೀಲ್‌ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Read More

ಬಾಗಲಕೋಟೆಯಲ್ಲಿ ಲೋಕಾಯುಕ್ತ ದಾಳಿ: ₹1.70 ಲಕ್ಷ ಲಂಚ ಪಡೆಯುತ್ತಿದ್ದ PSI & ಕಾನ್‌ಸ್ಟೇಬಲ್ ರೆಡ್ ಹ್ಯಾಂಡ್ ಅರೆಸ್ಟ್!

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪೊಲೀಸ್ ಠಾಣೆಯಲ್ಲಿ ಭ್ರಷ್ಟಾಚಾರದ ಪ್ರಕರಣ ಬಯಲಾಗಿದೆ. ಸಾರ್ವಜನಿಕರ ಸೇವೆಗೆ ನೇಮಕವಾಗಿರುವ ಪೊಲೀಸರು ಲಂಚ ಸ್ವೀಕರಿಸುವಾಗಲೇ ಲೋಕಾಯುಕ್ತರ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಪಿಎಸ್‌ಐ ಭೀಮಪ್ಪ ರಬಕವಿ ಮತ್ತು ಕಾನ್‌ಸ್ಟೇಬಲ್ ಸಂತೋಷ್ ಬಿರಾದಾರ ಅವರು ಮುತ್ತಪ್ಪ ನಾಯ್ಕರ್ ಎಂಬುವವರ ಮೇಲೆ ಇಸ್ಪೀಟ್ ಮತ್ತು ಬಡ್ಡಿ ದಂಧೆ ಪ್ರಕರಣ ದಾಖಲಿಸುವ ಬೆದರಿಕೆ ಹಾಕಿದ್ದರೆಂಬ ಆರೋಪ ಕೇಳಿಬಂದಿದೆ. ಪ್ರಕರಣದಿಂದ ಹೆಸರು ಕೈಬಿಡಲು ಮತ್ತು ವಶಪಡಿಸಿಕೊಂಡಿದ್ದ ಬೈಕ್ ಬಿಡುಗಡೆ ಮಾಡಲು ₹2 ಲಕ್ಷ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಈ ಕುರಿತು…

Read More

ಭೀಕರ ಅಪಘಾತ: ಹುಡುಗಿ ನೋಡಲು ಹೊರಟ ಕುಟುಂಬ ಸೇರಿದ್ದು ಮಸಣಕ್ಕೆ – 4 ಸಾವು, 21 ಮಂದಿಗೆ ಗಾಯ

ವಿಜಯನಗರ ಜಿಲ್ಲೆಯಲ್ಲಿ ಹೃದಯ ಕಲುಕುವ ಭೀಕರ ರಸ್ತೆ ಅಪಘಾತ.. ಹೊಸಪೇಟೆಯ ಹೊರವಲಯದಲ್ಲಿ ನಡೆದ ಸರಣಿ ಅಪಘಾತದಲ್ಲಿ ನಾಲ್ವರು ದಾರುಣವಾಗಿ ಸಾವನ್ನಪ್ಪಿದ್ದು, 21 ಮಂದಿ ಗಾಯಗೊಂಡಿದ್ದಾರೆ. ಕನ್ಯೆ ನೋಡಲು ಸಂತೋಷವಾಗಿ ಹೊರಟಿದ್ದ ಕುಟುಂಬ.ಕ್ಷಣಾರ್ಧದಲ್ಲಿ ಮಸಣ ಸೇರಿರುವ ದುರ್ಘಟನೆ ಇದು. ಹೌದು.. ಕಿತ್ನೂರು ಗ್ರಾಮದ 28 ವರ್ಷದ ಕೊಟ್ರೇಶ್, ಮದುವೆ ಮಾತುಕತೆಗೆ ಗಂಗಾವತಿ ಕಡೆ ಹೊರಟಿದ್ದ. ಆತನ ಜೊತೆ ತಾಯಿ ಸುಜಾತ (34), ತಂದೆ ನಾಗಪ್ಪ (58) ಸಹ ಪ್ರಯಾಣಿಸುತ್ತಿದ್ದರು. ಆದರೆ ಡಣಾಪುರದ ಬಳಿ ಯಮಸ್ವರೂಪಿಯಾಗಿ ಬಂದ ಲಾರಿಯೊಂದು. ಅವರ…

Read More

ಅವನ್ನ ಬಿಟ್ಟು ಇವನ ಜೊತೆ ಪ್ರೀತಿ..ಪ್ರಿಯಕರನ ಜೊತೆ ಸೇರಿ ಗಂಡನ ಕಥೆ ಮಟಾಶ್..!

ಅಮೃತಾ ಕೊಲೆ ಆರೋಪಿ ಪ್ರಿಯಕರ ಸಿದ್ದೇಶ್ (32) ಎಡಭಾಗ, ಅಮೃತಾ ಮದ್ಯಭಾಗ ಕೊಲೆಯಾದ ವ್ಯಕ್ತಿ ಜವರಪ್ಪ ಬಲಭಾಗ ಮೈಸೂರು ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವ ಕ್ರೈಂ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು, ಪತ್ನಿಯೇ ತನ್ನ ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಿಸಿದ ಶಾಕ್ ಘಟನೆ ಸರಗೂರು ತಾಲೂಕಿನ ಕುರ್ಣೇಗಾಲ ಗ್ರಾಮದಲ್ಲಿ ನಡೆದಿದೆ. ಹೌದು… ಕುರ್ಣೇಗಾಲ ನಿವಾಸಿ ಜವರಪ್ಪ ಈ ಕ್ರೂರ ಹತ್ಯೆಗೆ ಬಲಿಯಾದ ವ್ಯಕ್ತಿ.ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ, ಮೈಸೂರು ತಾಲೂಕಿನ ಮಾವಿನಹಳ್ಳಿ ಗ್ರಾಮದ ಸಿದ್ದೇಶ್ (32)…

Read More