
ಅಮೃತಾ ಕೊಲೆ ಆರೋಪಿ

ಪ್ರಿಯಕರ ಸಿದ್ದೇಶ್ (32) ಎಡಭಾಗ, ಅಮೃತಾ ಮದ್ಯಭಾಗ ಕೊಲೆಯಾದ ವ್ಯಕ್ತಿ ಜವರಪ್ಪ ಬಲಭಾಗ
ಮೈಸೂರು ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವ ಕ್ರೈಂ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು, ಪತ್ನಿಯೇ ತನ್ನ ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಿಸಿದ ಶಾಕ್ ಘಟನೆ ಸರಗೂರು ತಾಲೂಕಿನ ಕುರ್ಣೇಗಾಲ ಗ್ರಾಮದಲ್ಲಿ ನಡೆದಿದೆ.
ಹೌದು… ಕುರ್ಣೇಗಾಲ ನಿವಾಸಿ ಜವರಪ್ಪ ಈ ಕ್ರೂರ ಹತ್ಯೆಗೆ ಬಲಿಯಾದ ವ್ಯಕ್ತಿ.ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ, ಮೈಸೂರು ತಾಲೂಕಿನ ಮಾವಿನಹಳ್ಳಿ ಗ್ರಾಮದ ಸಿದ್ದೇಶ್ (32) ಮತ್ತು ಮೃತನ ಪತ್ನಿ ಅಮೃತಾ (26)ರನ್ನು ಪೊಲೀಸರು ಬಂಧಿಸಿದ್ದಾರೆ.
ಮೊದಲಿಗೆ ಜವರಪ್ಪನ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿತ್ತು…ಆದರೆ ಪೊಲೀಸರು ತನಿಖೆ ಕೈಗೊಂಡ ಬಳಿಕ ನಿಜಾಂಶ ಬೆಚ್ಚಿಬೀಳಿಸುವಂತಿತ್ತು.
ಪೊಲೀಸ್ ವಿಚಾರಣೆಯಲ್ಲಿ ಬಹಿರಂಗವಾದ ಸಂಗತಿ ಏನೆಂದರೆ ಅಮೃತಾ ಮತ್ತು ಸಿದ್ದೇಶ್ ನಡುವೆ ಅಕ್ರಮ ಸಂಬಂಧ ಇತ್ತು.
ಗಂಡ ಇದ್ದರೆ ತಮ್ಮ ಸಂಬಂಧಕ್ಕೆ ಅಡ್ಡಿಯಾಗುತ್ತಾನೆ ಎಂಬ ಕಾರಣಕ್ಕೆ…ಇಬ್ಬರೂ ಸೇರಿ ಕೊಲೆ ಮಾಡಲು ಪೂರ್ವ ಯೋಜನೆ ರೂಪಿಸಿದ್ದರು. ಜವರಪ್ಪ ಮತ್ತು ಅಮೃತಾ ದಂಪತಿಗೆ ಇಬ್ಬರು ಮಕ್ಕಳಿದ್ದು…
ಸಣ್ಣಪುಟ್ಟ ವಿಚಾರಗಳಿಗೆ ಗಂಡ-ಹೆಂಡತಿ ನಡುವೆ ಆಗಾಗ ಗಲಾಟೆಗಳು ನಡೆಯುತ್ತಿತ್ತಂತೆ.
ಘಟನೆಯ ಮುನ್ನ 12 ದಿನಗಳ ಹಿಂದೆ ಅಮೃತಾ ತನ್ನ ಮಕ್ಕಳೊಂದಿಗೆ ತವರಿನ ಮನೆಗೆ ತೆರಳಿದ್ದಳು. ಏಪ್ರಿಲ್ 16ರಂದು… ಹೆಂಡತಿಯನ್ನು ಕರೆತರಲು ಜವರಪ್ಪ ಮಾವಿನ ಮನೆಗೆ ಹೋಗಿದ್ದ.
ಆದರೆ ಅಲ್ಲಿಯೇ ಅವನಿಗೆ ಅಂತ್ಯ ಬರೆಯಲ್ಪಟ್ಟಿತ್ತು…
ಪೂರ್ವ ಯೋಜನೆಯಂತೆ, ಅಮೃತಾ ಮತ್ತು ಸಿದ್ದೇಶ್ ಸೇರಿ ಜವರಪ್ಪನನ್ನು ಹತ್ಯೆ ಮಾಡಿ…
ಮೃತದೇಹವನ್ನು ಗ್ರಾಮದ ಸಮೀಪದ ರಸ್ತೆ ಬದಿಯಲ್ಲಿ ಬಿಸಾಡಿ ಪರಾರಿಯಾಗಿದ್ದರು.
ನಂತರ ಶವ ಪತ್ತೆಯಾಗುತ್ತಿದ್ದಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು…ತನಿಖೆ ಚುರುಕುಗೊಳಿಸಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಘಟನೆ ಈಗ ಮೈಸೂರು ಭಾಗದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು…
ಅಕ್ರಮ ಸಂಬಂಧಗಳು ಯಾವ ಮಟ್ಟಿಗೆ ದುರಂತಕ್ಕೆ ದಾರಿ ಮಾಡಿಕೊಡುತ್ತವೆ ಎಂಬುದಕ್ಕೆ ಮತ್ತೊಂದು ಉದಾಹರಣೆಯಾಗಿದೆ.

