
ಹಾಸನ: ಜಿಲ್ಲೆಯ ಶಾಂತಿಗ್ರಾಮ ಟೋಲ್ ಸಮೀಪ ನಟೋರಿಯಸ್ ರೌಡಿಶೀಟರ್ ಸೈಲೆಂಟ್ ಸುನಿಲ್ ಆಗಮಿಸುತ್ತಿದ್ದಂತೆ ಯುವಕರ ಗುಂಪೊಂದು ಭರ್ಜರಿ ಸ್ವಾಗತ ಕೋರಿರುವ ಘಟನೆ ನಡೆದಿದೆ.
ಹತ್ತಾರು ಕಾರುಗಳಲ್ಲಿ ಬಂದ ಬೆಂಬಲಿಗರು, ಸೈಲೆಂಟ್ ಸುನಿಲ್ ಕಾರನ್ನು ಎಸ್ಕಾರ್ಟ್ ರೀತಿಯಲ್ಲಿ ಹಿಂಬಾಲಿಸಿಕೊಂಡು ಬಂದಿದ್ದಾರೆ. ಈ ವೇಳೆ ರಸ್ತೆ ಮೇಲೆ ಭಾರಿ ಸಂಚಾರ ಉಂಟಾಗಿ ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾಯಿತು.
ಮಾಜಿ ಶಾಸಕ ಪ್ರೀತಂಗೌಡ ಅವರ ಆಪ್ತರು ಈ ಸ್ವಾಗತ ಕಾರ್ಯಕ್ರಮವನ್ನು ಆಯೋಜಿಸಿದ್ದು, ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ವಿಶೇಷವಾಗಿ ಪ್ರೀತಂಗೌಡ ಫ್ಯಾನ್ಸ್ ಪೇಜ್‌ನಲ್ಲಿ ಈ ದೃಶ್ಯಗಳು ಅಪ್‌ಲೋಡ್ ಆಗಿದ್ದು, ಕ್ಷಣಾರ್ಧದಲ್ಲಿ ವೈರಲ್ ಆಗಿವೆ.
ಈ ಘಟನೆ ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ರೌಡಿಶೀಟರ್‌ಗೆ ಈ ರೀತಿಯ ಸ್ವಾಗತ ನೀಡಿರುವುದಕ್ಕೆ ವಿರೋಧ ವ್ಯಕ್ತವಾಗಿದೆ.

