ಕಡಿಮೆ ಬೆಲೆ ಚಿನ್ನ ಹೇಳಿ ಮೋಸ – ಬೆಂಗಳೂರಿನಲ್ಲಿ ಭಾರಿ ವಂಚನೆ
ಬೆಂಗಳೂರು: ಚಿನ್ನ ಖರೀದಿಗೆ ಹೋಗಿದ್ದವರನ್ನು ಗುರಿಯಾಗಿಸಿಕೊಂಡು ಕೋಟಿ ಕೋಟಿ ಹಣ ವಂಚಿಸಿದ ಘಟನೆ ನಗರದ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ನಡೆದಿದೆ. ಸರ್ಜಾಪುರ ಮೂಲದ ಪುನೀತ್ ಎಂಬ ವ್ಯಕ್ತಿ ಚಿನ್ನ ಖರೀದಿ ಮಾಡಲು ಯೋಜನೆ ಮಾಡಿದ್ದರು. ಈ ವೇಳೆ ಅವರ ಪರಿಚಯದ ಸವಿತಾ ರೆಡ್ಡಿ, ಹೆಚ್‌ಎಸ್‌ಆರ್ ಲೇಔಟ್‌ನಲ್ಲಿರುವ ಎಂಪಿ ಚಿನ್ನದ ಮಳಿಗೆಯಲ್ಲಿ ಕಡಿಮೆ ಬೆಲೆಯಲ್ಲಿ ಚಿನ್ನ ಸಿಗುತ್ತದೆ, ವೆಸ್ಟೇಜ್ ಚಾರ್ಜ್ ಕೂಡ ಕಡಿಮೆ ಇರುತ್ತದೆ ಎಂದು ನಂಬಿಸಿದ್ದಾಳೆ. ಈ ಮಾತು ನಂಬಿದ ಪುನೀತ್ ಸೇರಿದಂತೆ ಹಲವರು ದೊಡ್ಡ ಮೊತ್ತದ ಹಣವನ್ನು…

