ಟಾಕ್ಸಿಕ್ ಕಥೆ ರಿವೀಲ್ ಮಾಡಿದ ಯಶ್: ಗೋವಾ-ಪೋರ್ಚುಗೀಸ್ ಸಮರ, ತಂದೆ-ಮಗನ ರಿವೇಂಜ್ ಡ್ರಾಮಾ!

ಕನ್ನಡ ಚಿತ್ರರಂಗದಲ್ಲಿ ಭಾರೀ ನಿರೀಕ್ಷೆ ಮೂಡಿಸಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಚಿತ್ರದ ಕಥಾಹಂದರ ಇದೀಗ ಸಿನಿಪ್ರಿಯರಲ್ಲಿ ಹೊಸ ಕುತೂಹಲ ಹುಟ್ಟಿಸಿದೆ. ಸಾಮಾನ್ಯ ಮಾಸ್ ಕಥೆಗಳನ್ನು ಮೀರಿ, ವಿಭಿನ್ನ ಕಾಲಘಟ್ಟವನ್ನು ಹಿನ್ನೆಲೆಯಾಗಿ ತೆಗೆದುಕೊಂಡಿರುವುದು ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ.

ಯಶ್ ನೀಡಿರುವ ಮಾಹಿತಿ ಪ್ರಕಾರ, ಟಾಕ್ಸಿಕ್ ಒಂದು ತಂದೆ–ಮಗ ಸಂಬಂಧದ ಮೇಲೆ ಆಧಾರಿತ ಪ್ರತೀಕಾರದ ಕಥೆ. ಆದರೆ ಇದು ಕೇವಲ ರಿವೇಂಜ್ ಡ್ರಾಮಾ ಮಾತ್ರವಲ್ಲ. ಭಾವನೆ, ಬಾಂಧವ್ಯ ಮತ್ತು ನೋವಿನ ಆಳವನ್ನು ಒಳಗೊಂಡ ಗಾಢ ಕಥಾಹಂದರ ಇದರಲ್ಲಿ ಇದೆ. ವಿಶೇಷವಾಗಿ ತಂದೆ ಮತ್ತು ಮಗನ ನಡುವಿನ ಸಂಬಂಧ ಹೇಗೆ ರೂಪಾಂತರಗೊಳ್ಳುತ್ತದೆ ಎಂಬುದೇ ಚಿತ್ರದ ಹೃದಯವಾಗಿದೆ.

ಇನ್ನೂ ವಿಶೇಷವೆಂದರೆ, ಕಥೆ ಗೋವನಲ್ಲಿ ʻಪೋರ್ಚುಗೀಸ್‌ ರೂಲ್‌ ಆಫ್‌ ಗೋವʼ ಕಾಲಘಟ್ಟದ ಹಿನ್ನೆಲೆಯಲ್ಲೇ ಸಾಗುತ್ತದೆ. ಭಾರತ ಸ್ವಾತಂತ್ರ್ಯದ ಸಮಯದಲ್ಲಿ ಗೋವಾ ಇನ್ನೂ ಪೋರ್ಚುಗೀಸ್‌ ಆಡಳಿತದಲ್ಲಿದ್ದದ್ದು, ಕಥೆಗೆ ವಿಭಿನ್ನ ತೂಕವನ್ನು ನೀಡುತ್ತದೆ. ಈ ಐತಿಹಾಸಿಕ ಟಚ್ ಚಿತ್ರಕ್ಕೆ ಹೊಸ ಔಟ್‌ಲುಕ್ ನೀಡಲಿದೆ.

ಚಿತ್ರದ ಸ್ಟಾರ್ ಕಾಸ್ಟ್ ಕೂಡ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಲೇಡಿ ಸೂಪರ್ ಸ್ಟಾರ್ ನಯನತಾರ ಯಶ್ ಅವರ ಅಕ್ಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಜೊತೆಗೆ ಕೀರಾ ಅಡ್ವಾಣಿ ಹಾಗೂ ರುಕ್ಮಿಣಿ ವಸಂತ ವಿಭಿನ್ನ ಶೇಡ್‌ಗಳಲ್ಲಿ ನಾಯಕಿಯರಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಇತಿಹಾಸ ಮತ್ತು ಎಮೋಶನ್ ಮಿಶ್ರಣವಾಗಿರುವ ಈ ಕಥೆ, ಪ್ರೇಕ್ಷಕರಿಗೆ ಕೇವಲ ಮನರಂಜನೆ ಮಾತ್ರವಲ್ಲದೆ ಗಾಢ ಅನುಭವವನ್ನೂ ನೀಡುವ ಸಾಧ್ಯತೆ ಇದೆ. ತಮ್ಮ ಕ್ಯಾರಿಯರ್‌ನಲ್ಲಿ ಹೊಸ ರೀತಿಯ ಪಾತ್ರವನ್ನು ಆಯ್ಕೆ ಮಾಡಿಕೊಂಡಿರುವ ಯಶ್, ಮತ್ತೊಮ್ಮೆ ವಿಭಿನ್ನ ರೀತಿಯಲ್ಲಿ ಅಭಿಮಾನಿಗಳನ್ನು ಅಚ್ಚರಿಗೊಳಿಸಲು ಸಜ್ಜಾಗಿದ್ದಾರೆ.

ಒಟ್ಟಿನಲ್ಲಿ, ಟಾಕ್ಸಿಕ್ ಸಿನಿಮಾ ಸ್ಟೈಲಿಷ್ ಪ್ರೆಸೆಂಟೇಶನ್ ಜೊತೆಗೆ ಭಾವನಾತ್ಮಕ ಕಥಾಹಂದರ ಹೊಂದಿರುವ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಹೊರಹೊಮ್ಮುವ ಎಲ್ಲ ಲಕ್ಷಣಗಳನ್ನು ತೋರಿಸುತ್ತಿದೆ. ಯಶ್ ಅಭಿಮಾನಿಗಳಿಗೆ ಇದು ಮತ್ತೊಂದು ದೊಡ್ಡ ಸರ್ಪ್ರೈಸ್ ಪ್ಯಾಕೇಜ್ ಆಗಲಿದೆ ಎಂಬುದು ಖಚಿತ.

Leave a Reply

Your email address will not be published. Required fields are marked *