ಹಿಟ್ಲರ್ ಕಲ್ಯಾಣ ಸೀರಿಯಲ್ ನಟ ದಿಲೀಪ್ ರಾಜ್ ನಿಧನ ಸುದ್ದಿ

ಹಿಟ್ಲರ್ ಕಲ್ಯಾಣ ಖ್ಯಾತಿಯ ನಟ ದಿಲೀಪ್ ರಾಜ್ ನಿಧನ: ಕನ್ನಡ ಚಿತ್ರರಂಗದಲ್ಲಿ ಶೋಕ ಕನ್ನಡ ಕಿರುತೆರೆ ಮತ್ತು ಚಿತ್ರರಂಗದಲ್ಲಿ ತಮ್ಮ ವಿಶಿಷ್ಟ ಅಭಿನಯದಿಂದ ಗುರುತಿಸಿಕೊಂಡಿದ್ದ ನಟ ದಿಲೀಪ್ ರಾಜ್ ಇಂದು ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 47 ವರ್ಷ ವಯಸ್ಸಾಗಿತ್ತು. ‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯ ಮೂಲಕ ಕಿರುತೆರೆಗೆ ಶಕ್ತಿಶಾಲಿ ಕಮ್‌ಬ್ಯಾಕ್ ಮಾಡಿದ್ದ ದಿಲೀಪ್ ರಾಜ್, ತಮ್ಮ ಪಾತ್ರದ ಮೂಲಕ ವೀಕ್ಷಕರ ಮನಸ್ಸನ್ನು ಗೆದ್ದಿದ್ದರು. ಸಿನಿಮಾ ಮತ್ತು ಟಿವಿ ಎರಡರಲ್ಲೂ ತಮ್ಮದೇ ಆದ ಸ್ಥಾನವನ್ನು ನಿರ್ಮಿಸಿಕೊಂಡಿದ್ದ ಅವರು…

Read More

“ಇಂದು ನಿಜವಾಗಿಯೂ ರಾಜನಂತೆ ನಿಂತಿದ್ದೀರಿ” – ವಿಜಯ್‌ಗೆ ಶಿವಣ್ಣ ಶುಭಾಶಯ

ತಮಿಳುನಾಡು ರಾಜಕೀಯದಲ್ಲಿ ಹೊಸ ಅಧ್ಯಾಯ ಬರೆದಿರುವ Vijay ನೇತೃತ್ವದ ಟಿವಿಕೆ ಪಕ್ಷ ಭರ್ಜರಿ ಪ್ರದರ್ಶನ ನೀಡಿದ್ದು, ಈ ಹಿನ್ನೆಲೆ ಸ್ಯಾಂಡಲ್‌ವುಡ್ ನಟ Shivarajkumar ವಿಶೇಷವಾಗಿ ಅಭಿನಂದಿಸಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಶಿವಣ್ಣ, “ಒಮ್ಮೆ ನಾನು ತಮಾಷೆಯಾಗಿ TVK ಅಂದ್ರೆ Try Vijay as King ಅಂದಿದ್ದೆ. ಇಂದು ನಿಜವಾಗಿಯೂ ನೀವು ರಾಜನಂತೆ ಎದ್ದು ನಿಂತಿದ್ದೀರಿ” ಎಂದು ಬರೆದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, “ಟೀಕೆಗಳು ಎದುರಾದ ಸಮಯದಲ್ಲಿ ನೀವು ಮೌನವಾಗಿದ್ದು, ನಿಮ್ಮ ಕೆಲಸಗಳ ಮೂಲಕ…

Read More

ರಾಜ್‌ಕುಮಾರ್ ಸಮಾಧಿ ವಿವಾದ: ನಟ ಚೇತನ್‌ಗೆ ಸಾ.ರಾ ಗೋವಿಂದು ತಿರುಗೇಟು

ಬೆಂಗಳೂರು:ರಾಜ್‌ಕುಮಾರ್ ಸಮಾಧಿ ವಿವಾದ: ನಟ ಚೇತನ್‌ಗೆ ಸಾ.ರಾ ಗೋವಿಂದು ಅವರು ನಟ ಚೇತನ್ ಅಹಿಂಸಾ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, “ಜೈಲಿಗೆ ಹೋದ್ರೂ ಚಿಂತೆ ಇಲ್ಲ, ಅಣ್ಣಾವ್ರ ವಿಚಾರದಲ್ಲಿ ಯಾವತ್ತೂ ರಾಜಿ ಆಗಲ್ಲ” ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ರಾಜ್‌ಕುಮಾರ್ ಸಮಾಧಿ ವಿಚಾರದಲ್ಲಿ ಚೇತನ್ ನೀಡಿದ ದೂರಿನ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಗೋವಿಂದು, “48 ವರ್ಷಗಳ ಕನ್ನಡ ಹೋರಾಟದಲ್ಲಿ ನಾನು ಯಾವತ್ತೂ ಹಿಂದೆ ಸರಿದಿಲ್ಲ. ನನಗೆ ಶಕ್ತಿ ಮತ್ತು ಸ್ಫೂರ್ತಿ ಡಾ. ರಾಜ್‌ಕುಮಾರ್” ಎಂದು ಹೇಳಿದರು….

Read More

ರಾಜಮೌಳಿ ‘ವಾರಣಾಸಿ’ ಚಿತ್ರಕ್ಕೆ ಬ್ರೇಕ್? ಜಲ ಮಂಡಳಿಯ ನಿರ್ಧಾರದಿಂದ ಶಾಕ್

ರಾಜಮೌಳಿ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ‘ವಾರಣಾಸಿ’ ಶೂಟಿಂಗ್ ಇದೀಗ ನೀರಿನ ಸಂಕಷ್ಟದಿಂದ ಸ್ಥಗಿತಗೊಳ್ಳುವ ಭೀತಿಗೆ ಸಿಲುಕಿದೆ. ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಸಮುದ್ರದ ಸೆಟ್ ನಿರ್ಮಾಣಕ್ಕಾಗಿ ಸುಮಾರು 150 ಟ್ಯಾಂಕರ್ ನೀರು ಅಗತ್ಯವಿದೆ ಎಂದು ಚಿತ್ರತಂಡ ಮನವಿ ಸಲ್ಲಿಸಿತ್ತು. ಆದರೆ, ಬೇಸಿಗೆಯಲ್ಲಿ ನಗರದಲ್ಲಿ ತೀವ್ರ ಕುಡಿಯುವ ನೀರಿನ ಕೊರತೆ ಇರುವುದರಿಂದ, ಜಲ ಮಂಡಳಿ ಈ ಮನವಿಯನ್ನು ತಿರಸ್ಕರಿಸಿದೆ. ಈ ನಿರ್ಧಾರದಿಂದ ಶೂಟಿಂಗ್ ತಾತ್ಕಾಲಿಕವಾಗಿ ನಿಲ್ಲುವ ಸಾಧ್ಯತೆಗಳು ಹೆಚ್ಚಾಗಿವೆ. ಇದರಿಂದ ಮಹೇಶ್ ಬಾಬು ನಟನೆಯ ಈ ಚಿತ್ರ…

Read More

ತಮಿಳುನಾಡು ಫಲಿತಾಂಶ ದಿನ ತಿರುಪತಿಗೆ ತ್ರಿಷಾ ಭೇಟಿ – ವಿಜಯ್ ಗೆಲುವಿಗಾಗಿ ಪ್ರಾರ್ಥನೆ?

ಚೆನ್ನೈ: ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಇಂದು (ಮೇ 4) ಭಾರೀ ಕುತೂಹಲ ಮೂಡಿಸಿದ್ದು, ತಮಿಳುನಾಡಿನ ರಾಜಕೀಯ ಬೆಳವಣಿಗೆಗಳತ್ತ ದೇಶದ ಗಮನ ಸೆಳೆದಿದೆ. ಇದೇ ಸಂದರ್ಭದಲ್ಲಿ ನಟಿ ತ್ರಿಷಾ ಕೃಷ್ಣನ್‌ ಅವರು ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇಂದು ತಮ್ಮ 43ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ತ್ರಿಷಾ, ಬೆಳಗ್ಗೆ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದು ಆಶೀರ್ವಾದ ಪಡೆದರು. ದೇವಸ್ಥಾನದಲ್ಲಿ ತ್ರಿಷಾ ಕಾಣಿಸಿಕೊಂಡಿರುವ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ…

Read More

‘ವಸುದೇವ ಕುಟುಂಬ’ ಧಾರಾವಾಹಿ ಕಿರಿಕ್: ನಡು ರಸ್ತೆಯಲ್ಲಿ ನಿರ್ಮಾಪಕರನ್ನು ಅಡ್ಡಹಾಕಿದ ಹಂಸ

ಸ್ಟಾರ್ ಸುವರ್ಣ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ‘ವಸುದೇವ ಕುಟುಂಬ’ ಇದೀಗ ದೊಡ್ಡ ವಿವಾದಕ್ಕೆ ಗುರಿಯಾಗಿದೆ. ಮಾಜಿ ಬಿಗ್ ಬಾಸ್ ಸ್ಪರ್ಧಿ ಹಂಸ, ನಟಿ ಚೈತ್ರಾ ಹಾಗೂ ಹಿರಿಯ ನಟ ಅವಿನಾಶ್ ಸೇರಿದಂತೆ ಪ್ರಮುಖ ಕಲಾವಿದರು ನಟಿಸುತ್ತಿರುವ ಈ ಧಾರಾವಾಹಿಯ ನಿರ್ಮಾಪಕರ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ. ಕಳೆದ ಕೆಲವು ತಿಂಗಳುಗಳಿಂದ ಸಂಭಾವನೆ ನೀಡಿಲ್ಲ ಹಾಗೂ ಯೂನಿಟ್ ಸದಸ್ಯರಿಗೆ ಸರಿಯಾದ ಆಹಾರ ಮತ್ತು ಸೌಲಭ್ಯ ನೀಡಿಲ್ಲ ಎಂದು ಕಲಾವಿದರು ಆರೋಪಿಸಿದ್ದಾರೆ. ಈ ಹಿನ್ನೆಲೆ ಇಂದು ನಾಗರಬಾವಿಯ ಹೋಟೆಲ್…

Read More

‘ಧುರಂಧರ್ 2’ ಕತೆ ಕದ್ದ ಆರೋಪ | ಆದಿತ್ಯ ಧರ್ ವಿರುದ್ಧ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು

ರಣವೀರ್ ಸಿಂಗ್ ನಟನೆಯ ‘ಧುರಂಧರ್’ ಹಾಗೂ ‘ಧುರಂಧರ್ 2’ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸದ್ದು ಮಾಡುತ್ತಿದ್ದು, ಎರಡೂ ಸಿನಿಮಾಗಳ ಒಟ್ಟು ಕಲೆಕ್ಷನ್ 3000 ಕೋಟಿ ರೂಪಾಯಿ ದಾಟಿದೆ. ಆದರೆ ಇದೇ ಸಮಯದಲ್ಲಿ ಸಿನಿಮಾ ನಿರ್ದೇಶಕ ಆದಿತ್ಯ ಧರ್ ವಿರುದ್ಧ ಕತೆ ಕದ್ದ ಆರೋಪ ಕೇಳಿಬಂದಿದೆ. ಕರ್ನಾಟಕದ ಸಂತೋಶ್ ಕುಮಾರ್ ಎಂಬುವರು, ‘ಡಿ ಸಾಹೇಬ್’ ಹೆಸರಿನ ಕಥೆಯನ್ನು ತಾವು ಈಗಾಗಲೇ ಸ್ಕ್ರೀನ್ ರೈಟರ್ಸ್ ಅಸೋಸಿಯೇಷನ್‌ನಲ್ಲಿ ನೋಂದಾಯಿಸಿದ್ದಾಗಿ ಹೇಳಿಕೊಂಡಿದ್ದಾರೆ. ಅವರ ಪ್ರಕಾರ, ‘ಧುರಂಧರ್ 2’ ಸಿನಿಮಾ ತಮ್ಮ ಕಥೆಯನ್ನು…

Read More

ಕಾಂತಾರ’ ಹಿಟ್ ಬಳಿಕ ಹಳೆಯ ಸಿನಿಮಾ ರಿಲೀಸ್: ರಿಷಬ್ ಶೆಟ್ಟಿ ತೆಲುಗಿಗೆ ಎಂಟ್ರಿ

ಕಾಂತಾರ’ ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಗಳಿಸಿರುವ ರಿಷಬ್ ಶೆಟ್ಟಿ ಅವರ ಹಳೆಯ ಸಿನಿಮಾವೊಂದು ಈಗ ಮತ್ತೆ ಸುದ್ದಿಯಲ್ಲಿದೆ. ‘ಹರಿಕಥೆ ಅಲ್ಲ ಗಿರಿಕಥೆ’ ಎಂಬ ಚಿತ್ರವು ಇದೀಗ ‘ಎ ಫಿಲ್ಮ್ ಬೈ ಗಿರಿ’ ಹೆಸರಿನಲ್ಲಿ ತೆಲುಗಿಗೆ ಡಬ್ ಆಗಿ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾ ಮೇ 8ರಂದು ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ತೆರೆಗೆ ಬರಲಿದೆ. ವಿಶೇಷವೆಂದರೆ, ಈ ಚಿತ್ರವು 2022ರಲ್ಲಿ ‘ಕಾಂತಾರ’ ಬಿಡುಗಡೆಯಕ್ಕೂ ಮೊದಲು ತೆರೆಕಂಡಿತ್ತು. ಆಗ ಈ ಚಿತ್ರ…

Read More

ಟಾಲಿವುಡ್‌ನ ಹಾಟ್ ಜೋಡಿ ರೀ-ಎಂಟ್ರಿ: ನಾಗಾರ್ಜುನ ಜೊತೆ ಟಬು ಮತ್ತೆ ತೆರೆಗೆ

ಟಾಲಿವುಡ್‌ನ ಹಿಟ್ ಜೋಡಿ ನಾಗಾರ್ಜುನ ಮತ್ತು ಟಬು ಮತ್ತೆ ಒಂದಾಗುತ್ತಿರುವ ಸುದ್ದಿ ಸಿನಿ ಪ್ರಿಯರಲ್ಲಿ ಭಾರೀ ಕುತೂಹಲ ಮೂಡಿಸಿದೆ. ದಶಕಗಳ ಹಿಂದೆ ರೊಮ್ಯಾಂಟಿಕ್ ಸಿನಿಮಾಗಳಲ್ಲಿ ಮಿಂಚಿದ್ದ ಈ ಜೋಡಿ ಈಗ 28 ವರ್ಷಗಳ ಬಳಿಕ ಮತ್ತೆ ತೆರೆಗೆ ಬರುತ್ತಿದೆ. ನಾಗಾರ್ಜುನ ತಮ್ಮ 100ನೇ ಸಿನಿಮಾದಾದ ‘ಕಿಂಗ್ 100’ನಲ್ಲಿ ಅಭಿನಯಿಸುತ್ತಿದ್ದು, ಈ ಸಿನಿಮಾದಲ್ಲಿ ಟಬು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಟಬು ಶೂಟಿಂಗ್ ಆರಂಭಿಸಿದ್ದು, ಸೆಟ್‌ನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಸಿನಿಮಾ ತಂದೆ-ಮಗಳ ಭಾವನಾತ್ಮಕ ಬಾಂಧವ್ಯದ…

Read More

ಸುಶಾಂತ್ ಸಿಂಗ್ ಪ್ರಕರಣ: 6 ವರ್ಷಗಳ ಬಳಿಕ ರಿಯಾ ಚಕ್ರವರ್ತಿಗೆ ಬ್ಯಾಂಕ್ ಹಣದ ಮೇಲಿನ ಹಕ್ಕು ಮರಳಿ!

ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜ್‌ಪೂತ್ ಸಾವಿನ ಪ್ರಕರಣ ದೇಶದಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿತ್ತು. 2020ರ ಜೂನ್‌ನಲ್ಲಿ ಮುಂಬೈನ ಮನೆಯಲ್ಲಿ ಅನುಮಾನಾಸ್ಪದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು. ಈ ಘಟನೆ ಬಳಿಕ ಹಲವು ಕೋನಗಳಲ್ಲಿ ತನಿಖೆ ನಡೆದಿದ್ದು, ಹಲವು ವಿವಾದಗಳಿಗೆ ಕಾರಣವಾಗಿತ್ತು. ಈ ಪ್ರಕರಣದಲ್ಲಿ ಮುಖ್ಯವಾಗಿ ಸುದ್ದಿಯಾದ ಹೆಸರು ನಟಿ ರಿಯಾ ಚಕ್ರವರ್ತಿ. ಸುಶಾಂತ್ ಅವರ ಮಾಜಿ ಗೆಳತಿಯಾಗಿದ್ದ ರಿಯಾ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿದ್ದವು. ಪ್ರಕರಣದ ಆರಂಭದಲ್ಲಿ ಅವರನ್ನು ‘ವಿಲನ್’ ರೀತಿಯಲ್ಲಿ ಚಿತ್ರಿಸಲಾಗಿದ್ದು, ಅವರು ಜೈಲಿಗೂ…

Read More