
ರಾಜಮೌಳಿ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ‘ವಾರಣಾಸಿ’ ಶೂಟಿಂಗ್ ಇದೀಗ ನೀರಿನ ಸಂಕಷ್ಟದಿಂದ ಸ್ಥಗಿತಗೊಳ್ಳುವ ಭೀತಿಗೆ ಸಿಲುಕಿದೆ.
ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಸಮುದ್ರದ ಸೆಟ್ ನಿರ್ಮಾಣಕ್ಕಾಗಿ ಸುಮಾರು 150 ಟ್ಯಾಂಕರ್ ನೀರು ಅಗತ್ಯವಿದೆ ಎಂದು ಚಿತ್ರತಂಡ ಮನವಿ ಸಲ್ಲಿಸಿತ್ತು. ಆದರೆ, ಬೇಸಿಗೆಯಲ್ಲಿ ನಗರದಲ್ಲಿ ತೀವ್ರ ಕುಡಿಯುವ ನೀರಿನ ಕೊರತೆ ಇರುವುದರಿಂದ, ಜಲ ಮಂಡಳಿ ಈ ಮನವಿಯನ್ನು ತಿರಸ್ಕರಿಸಿದೆ.
ಈ ನಿರ್ಧಾರದಿಂದ ಶೂಟಿಂಗ್ ತಾತ್ಕಾಲಿಕವಾಗಿ ನಿಲ್ಲುವ ಸಾಧ್ಯತೆಗಳು ಹೆಚ್ಚಾಗಿವೆ. ಇದರಿಂದ ಮಹೇಶ್ ಬಾಬು ನಟನೆಯ ಈ ಚಿತ್ರ ಸಮಯಕ್ಕೆ ಮುಗಿಯುತ್ತದೆಯೇ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.
ಈ ಚಿತ್ರದಲ್ಲಿ ಮಹೇಶ್ ಬಾಬು ಜೊತೆಗೆ ಪ್ರಿಯಾಂಕಾ ಚೋಪ್ರಾ ಹಾಗೂ ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಹಲವು ಹಂತಗಳ ಶೂಟಿಂಗ್ ವಿದೇಶಗಳಲ್ಲಿ ಪೂರ್ಣಗೊಂಡಿದ್ದು, ಮುಂದಿನ ಭಾಗ ಹೈದರಾಬಾದ್‌ನಲ್ಲಿ ನಡೆಯಬೇಕಿತ್ತು.
ಆದರೆ ನೀರಿನ ಕೊರತೆ ಹಿನ್ನೆಲೆಯಲ್ಲಿ ಶೂಟಿಂಗ್ ವಿಳಂಬವಾಗುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದ ಚಿತ್ರದ ಬಿಡುಗಡೆ ದಿನಾಂಕಕ್ಕೂ ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದೆ.
ಇದೀಗ ಎಲ್ಲರ ಗಮನ ಜಲ ಮಂಡಳಿ ಹಾಗೂ ಚಿತ್ರತಂಡ ಮುಂದಿನ ನಿರ್ಧಾರಗಳತ್ತ ನೆಟ್ಟಿದೆ.

