
ಬೆಂಗಳೂರು:ರಾಜ್ಕುಮಾರ್ ಸಮಾಧಿ ವಿವಾದ: ನಟ ಚೇತನ್ಗೆ ಸಾ.ರಾ ಗೋವಿಂದು ಅವರು ನಟ ಚೇತನ್ ಅಹಿಂಸಾ
ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, “ಜೈಲಿಗೆ ಹೋದ್ರೂ ಚಿಂತೆ ಇಲ್ಲ, ಅಣ್ಣಾವ್ರ ವಿಚಾರದಲ್ಲಿ ಯಾವತ್ತೂ ರಾಜಿ ಆಗಲ್ಲ” ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ರಾಜ್ಕುಮಾರ್ ಸಮಾಧಿ ವಿಚಾರದಲ್ಲಿ ಚೇತನ್ ನೀಡಿದ ದೂರಿನ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಗೋವಿಂದು, “48 ವರ್ಷಗಳ ಕನ್ನಡ ಹೋರಾಟದಲ್ಲಿ ನಾನು ಯಾವತ್ತೂ ಹಿಂದೆ ಸರಿದಿಲ್ಲ. ನನಗೆ ಶಕ್ತಿ ಮತ್ತು ಸ್ಫೂರ್ತಿ ಡಾ. ರಾಜ್ಕುಮಾರ್” ಎಂದು ಹೇಳಿದರು.
ಇದೇ ವೇಳೆ ನಟ ಚೇತನ್ ವಿರುದ್ಧ ಕಿಡಿಕಾರಿದ ಅವರು, “ಎಲ್ಲಿಂದ ಬಂದಿದೀಯ? ಡಾ. ರಾಜ್ಕುಮಾರ್ ಬಗ್ಗೆ ನಿನಗೇನು ಗೊತ್ತು? ಗೋಕಾಕ್ ಚಳುವಳಿಯ ಇತಿಹಾಸ ಗೊತ್ತಾ?” ಎಂದು ಪ್ರಶ್ನಿಸಿದರು.
ಡಾ. ರಾಜ್ಕುಮಾರ್ ಅವರಿಗೆ ಕುಂಬಳಗೋಡಿಯಲ್ಲಿ 15 ಎಕರೆ ಜಾಗವಿತ್ತು. ತಮ್ಮ ಕುಟುಂಬದವರು ಮಣ್ಣಾದ ಜಾಗದಲ್ಲೇ ತಾವೂ ಇರಬೇಕು ಎಂಬ ಆಸೆ ಹೊಂದಿದ್ದರು. ಆದರೆ ಅಭಿಮಾನಿಗಳ ಅನುಕೂಲಕ್ಕಾಗಿ ಇಂದಿನ ಸ್ಥಳದಲ್ಲಿ ಸ್ಮಾರಕ ನಿರ್ಮಿಸಲಾಗಿದೆ ಎಂದು ಗೋವಿಂದು ಸ್ಪಷ್ಟಪಡಿಸಿದರು.
ತಮ್ಮ ವಿರುದ್ಧ ದಾಖಲಾಗಿರುವ ಆರೋಪಗಳನ್ನೂ ತಳ್ಳಿಹಾಕಿದ ಅವರು, “ನಾನೇನು ದಾಂದಲೆ ಮಾಡಿದ್ದೀನಿ? ನಾವು ನ್ಯಾಯಕ್ಕಾಗಿ ಹೋರಾಟ ಮಾಡ್ತಿದ್ದೇವೆ. ನಾವೇನು ಸತ್ತಿಲ್ಲ, ಬದುಕಿದ್ದೇವೆ” ಎಂದು ಎಚ್ಚರಿಕೆ ನೀಡಿದರು.

