ಉತ್ತರ ಪ್ರದೇಶ: ಮದುವೆ ಮುಗಿಸಿ ಬರುತ್ತಿದ್ದ ಬಸ್ ಮತ್ತು ಟ್ರಕ್ ನಡುವೆ ಭೀಕರ ಡಿಕ್ಕಿ; 6 ಮಂದಿ ದುರ್ಮರಣ!
ಉತ್ತರ ಪ್ರದೇಶದ ಸುಲ್ತಾನ್‌ಪುರ ಜಿಲ್ಲೆಯಲ್ಲಿ ಸಂಭ್ರಮದ ಮದುವೆ ಮುಗಿಸಿ ಮನೆಗೆ ಮರಳುತ್ತಿದ್ದವರ ಪಾಲಿಗೆ ವಿಧಿ ಅಟ್ಟಹಾಸ ಮೆರೆದಿದೆ. ಖಾಸಗಿ ಬಸ್ ಮತ್ತು ಟ್ರಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಆರು ಮಂದಿ ಪ್ರಾಣ ಕಳೆದುಕೊಂಡಿದ್ದು, ಹಲವರು ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಅಮೇಠಿ ಜಿಲ್ಲೆಯ ಮುಸಾಫಿರ್ ಖಾನಾದಿಂದ ಮದುವೆ ದಿಬ್ಬಣವು ರಾಯ್ ಬರೇಲಿಗೆ ತೆರಳಿತ್ತು. ಸಮಾರಂಭ ಮುಗಿಸಿ ಮರಳಿ ಬರುತ್ತಿದ್ದಾಗ ಸುಲ್ತಾನ್‌ಪುರದ ಗೌರಿಗಂಜ್ ಹೆದ್ದಾರಿಯಲ್ಲಿ ಎದುರಿನಿಂದ ಬಂದ ವೇಗದ ಟ್ರಕ್ ಬಸ್‌ಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ…

