
ತಮಿಳುನಾಡು ರಾಜಕೀಯದಲ್ಲಿ ಹೊಸ ಅಧ್ಯಾಯ ಬರೆದಿರುವ Vijay ನೇತೃತ್ವದ ಟಿವಿಕೆ ಪಕ್ಷ ಭರ್ಜರಿ ಪ್ರದರ್ಶನ ನೀಡಿದ್ದು, ಈ ಹಿನ್ನೆಲೆ ಸ್ಯಾಂಡಲ್ವುಡ್ ನಟ Shivarajkumar ವಿಶೇಷವಾಗಿ ಅಭಿನಂದಿಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಶಿವಣ್ಣ, “ಒಮ್ಮೆ ನಾನು ತಮಾಷೆಯಾಗಿ TVK ಅಂದ್ರೆ Try Vijay as King ಅಂದಿದ್ದೆ. ಇಂದು ನಿಜವಾಗಿಯೂ ನೀವು ರಾಜನಂತೆ ಎದ್ದು ನಿಂತಿದ್ದೀರಿ” ಎಂದು ಬರೆದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, “ಟೀಕೆಗಳು ಎದುರಾದ ಸಮಯದಲ್ಲಿ ನೀವು ಮೌನವಾಗಿದ್ದು, ನಿಮ್ಮ ಕೆಲಸಗಳ ಮೂಲಕ ಉತ್ತರ ಕೊಟ್ಟಿದ್ದೀರಿ. ಅದೇ ನಿಜವಾದ ಗೆಲುವು” ಎಂದು ವಿಜಯ್ ಅವರ ರಾಜಕೀಯ ಹೋರಾಟವನ್ನು ಶಿವಣ್ಣ ಕೊಂಡಾಡಿದ್ದಾರೆ.
234 ಸದಸ್ಯ ಬಲ ಹೊಂದಿರುವ ತಮಿಳುನಾಡು ವಿಧಾನಸಭೆಯಲ್ಲಿ ಬಹುಮತಕ್ಕೆ 118 ಸ್ಥಾನಗಳ ಅಗತ್ಯವಿದ್ದು, ವಿಜಯ್ ನೇತೃತ್ವದ ಟಿವಿಕೆ ಪಕ್ಷ 108 ಸ್ಥಾನಗಳಲ್ಲಿ ಗೆಲುವು ಸಾಧಿಸಿ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಬಹುಮತಕ್ಕೆ ಇನ್ನೂ 10 ಸ್ಥಾನಗಳ ಅವಶ್ಯಕತೆ ಇದೆ.
ಏಪ್ರಿಲ್ 23ರಂದು ನಡೆದ ಮತದಾನದಲ್ಲಿ ರಾಜ್ಯಾದ್ಯಂತ ಭರ್ಜರಿ ಮತದಾನ ನಡೆದಿದ್ದು, ಒಟ್ಟು 84.69% ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಆಡಳಿತಾರೂಢ ಡಿಎಂಕೆ ಮೈತ್ರಿಕೂಟ, ಎಐಎಡಿಎಂಕೆ ಮೈತ್ರಿಕೂಟ, ವಿಜಯ್ ನೇತೃತ್ವದ ಟಿವಿಕೆ ಹಾಗೂ ಎನ್ಟಿಕೆ ಪಕ್ಷಗಳು ಕಣಕ್ಕಿಳಿದಿದ್ದವು.
ವಿಜಯ್ ಅವರ ಈ ರಾಜಕೀಯ ಏಳ್ಗೆ ಇದೀಗ ದಕ್ಷಿಣ ಭಾರತದ ರಾಜಕೀಯದಲ್ಲೇ ದೊಡ್ಡ ಚರ್ಚೆಗೆ ಕಾರಣವಾಗಿದೆ.

