“ಇಂದು ನಿಜವಾಗಿಯೂ ರಾಜನಂತೆ ನಿಂತಿದ್ದೀರಿ” – ವಿಜಯ್‌ಗೆ ಶಿವಣ್ಣ ಶುಭಾಶಯ
ತಮಿಳುನಾಡು ರಾಜಕೀಯದಲ್ಲಿ ಹೊಸ ಅಧ್ಯಾಯ ಬರೆದಿರುವ Vijay ನೇತೃತ್ವದ ಟಿವಿಕೆ ಪಕ್ಷ ಭರ್ಜರಿ ಪ್ರದರ್ಶನ ನೀಡಿದ್ದು, ಈ ಹಿನ್ನೆಲೆ ಸ್ಯಾಂಡಲ್‌ವುಡ್ ನಟ Shivarajkumar ವಿಶೇಷವಾಗಿ ಅಭಿನಂದಿಸಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಶಿವಣ್ಣ, “ಒಮ್ಮೆ ನಾನು ತಮಾಷೆಯಾಗಿ TVK ಅಂದ್ರೆ Try Vijay as King ಅಂದಿದ್ದೆ. ಇಂದು ನಿಜವಾಗಿಯೂ ನೀವು ರಾಜನಂತೆ ಎದ್ದು ನಿಂತಿದ್ದೀರಿ” ಎಂದು ಬರೆದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, “ಟೀಕೆಗಳು ಎದುರಾದ ಸಮಯದಲ್ಲಿ ನೀವು ಮೌನವಾಗಿದ್ದು, ನಿಮ್ಮ ಕೆಲಸಗಳ ಮೂಲಕ…

