ಭೀಕರ ಅಪಘಾತ: ಹುಡುಗಿ ನೋಡಲು ಹೊರಟ ಕುಟುಂಬ ಸೇರಿದ್ದು ಮಸಣಕ್ಕೆ – 4 ಸಾವು, 21 ಮಂದಿಗೆ ಗಾಯ

ವಿಜಯನಗರ ಜಿಲ್ಲೆಯಲ್ಲಿ ಹೃದಯ ಕಲುಕುವ ಭೀಕರ ರಸ್ತೆ ಅಪಘಾತ.. ಹೊಸಪೇಟೆಯ ಹೊರವಲಯದಲ್ಲಿ ನಡೆದ ಸರಣಿ ಅಪಘಾತದಲ್ಲಿ ನಾಲ್ವರು ದಾರುಣವಾಗಿ ಸಾವನ್ನಪ್ಪಿದ್ದು, 21 ಮಂದಿ ಗಾಯಗೊಂಡಿದ್ದಾರೆ.

ಕನ್ಯೆ ನೋಡಲು ಸಂತೋಷವಾಗಿ ಹೊರಟಿದ್ದ ಕುಟುಂಬ.ಕ್ಷಣಾರ್ಧದಲ್ಲಿ ಮಸಣ ಸೇರಿರುವ ದುರ್ಘಟನೆ ಇದು. ಹೌದು.. ಕಿತ್ನೂರು ಗ್ರಾಮದ 28 ವರ್ಷದ ಕೊಟ್ರೇಶ್, ಮದುವೆ ಮಾತುಕತೆಗೆ ಗಂಗಾವತಿ ಕಡೆ ಹೊರಟಿದ್ದ. ಆತನ ಜೊತೆ ತಾಯಿ ಸುಜಾತ (34), ತಂದೆ ನಾಗಪ್ಪ (58) ಸಹ ಪ್ರಯಾಣಿಸುತ್ತಿದ್ದರು.

ಆದರೆ ಡಣಾಪುರದ ಬಳಿ ಯಮಸ್ವರೂಪಿಯಾಗಿ ಬಂದ ಲಾರಿಯೊಂದು. ಅವರ ಬದುಕನ್ನೇ ಕ್ಷಣಾರ್ಧದಲ್ಲಿ ಕೊನೆಗೊಳಿಸಿದೆ. ಲಾರಿಯ ಭೀಕರ ಡಿಕ್ಕಿಗೆ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ಇವರ ಜೊತೆಗೆ ತಿಮ್ಮಲಾಪುರದ ದುರ್ಗಪ್ಪ (55) ಕೂಡ ಸಾವನ್ನಪ್ಪಿದ್ದಾರೆ.

ಅಪಘಾತದ ಭೀಕರತೆ ಎಷ್ಟಿತ್ತು ಅಂದ್ರೆ. ದೇಹಗಳು ಚೂರುಚೂರಾಗಿ ಚದುರಿಬಿದ್ದಿದ್ದು. ನೋಡಿದವರ ಹೃದಯ ಕಲುಕುವಂತಿತ್ತು. ಘಟನೆ ಬಳಿಕ ಸ್ಥಳಕ್ಕೆ ಧಾವಿಸಿದ ಪೊಲೀಸರು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.

ಒಂದು ಕುಟುಂಬದ ಮೂವರು ಸಾವನ್ನಪ್ಪಿದ ಸುದ್ದಿ. ಎರಡು ಗ್ರಾಮಗಳಲ್ಲಿ ಶೋಕದ ನೆರಳು ಹರಡಿಸಿದೆ. ಕಿತ್ನೂರು ಮತ್ತು ತಿಮ್ಮಲಾಪುರ ಗ್ರಾಮಗಳಲ್ಲಿ ನೀರವ ಮೌನ ಆವರಿಸಿದೆ. ಮದುವೆ ಸಂಭ್ರಮಕ್ಕೆ ಹೊರಟಿದ್ದವರ ಮನೆ
ಇಂದು ಶೋಕ ಸಾಗರದಲ್ಲಿ ಮುಳುಗಿದೆ. ಈ ದಾರುಣ ಘಟನೆ ವಿಜಯನಗರ ಜಿಲ್ಲೆಯಲ್ಲಿ ಭಾರಿ ಆಘಾತ ಮೂಡಿಸಿದ್ದು, ರಸ್ತೆ ಸುರಕ್ಷತೆ ಬಗ್ಗೆ ಮತ್ತೆ ಪ್ರಶ್ನೆಗಳನ್ನು ಎಬ್ಬಿಸಿದೆ.

Leave a Reply

Your email address will not be published. Required fields are marked *