ಭೀಕರ ಅಪಘಾತ: ಹುಡುಗಿ ನೋಡಲು ಹೊರಟ ಕುಟುಂಬ ಸೇರಿದ್ದು ಮಸಣಕ್ಕೆ – 4 ಸಾವು, 21 ಮಂದಿಗೆ ಗಾಯ
ವಿಜಯನಗರ ಜಿಲ್ಲೆಯಲ್ಲಿ ಹೃದಯ ಕಲುಕುವ ಭೀಕರ ರಸ್ತೆ ಅಪಘಾತ.. ಹೊಸಪೇಟೆಯ ಹೊರವಲಯದಲ್ಲಿ ನಡೆದ ಸರಣಿ ಅಪಘಾತದಲ್ಲಿ ನಾಲ್ವರು ದಾರುಣವಾಗಿ ಸಾವನ್ನಪ್ಪಿದ್ದು, 21 ಮಂದಿ ಗಾಯಗೊಂಡಿದ್ದಾರೆ. ಕನ್ಯೆ ನೋಡಲು ಸಂತೋಷವಾಗಿ ಹೊರಟಿದ್ದ ಕುಟುಂಬ.ಕ್ಷಣಾರ್ಧದಲ್ಲಿ ಮಸಣ ಸೇರಿರುವ ದುರ್ಘಟನೆ ಇದು. ಹೌದು.. ಕಿತ್ನೂರು ಗ್ರಾಮದ 28 ವರ್ಷದ ಕೊಟ್ರೇಶ್, ಮದುವೆ ಮಾತುಕತೆಗೆ ಗಂಗಾವತಿ ಕಡೆ ಹೊರಟಿದ್ದ. ಆತನ ಜೊತೆ ತಾಯಿ ಸುಜಾತ (34), ತಂದೆ ನಾಗಪ್ಪ (58) ಸಹ ಪ್ರಯಾಣಿಸುತ್ತಿದ್ದರು. ಆದರೆ ಡಣಾಪುರದ ಬಳಿ ಯಮಸ್ವರೂಪಿಯಾಗಿ ಬಂದ ಲಾರಿಯೊಂದು. ಅವರ…

