ವಿಜಯ್ ರಾಜಕೀಯ ಗೆಲುವು: ‘ಜನ ನಾಯಗನ್’ ಚಿತ್ರಕ್ಕೆ ಹೊಸ ಜೀವ

ವಿಜಯ್‌ಗೆ ಚಿತ್ರರಂಗಕ್ಕೆ ಗುಡ್‌ಬೈ? ‘ಜನ ನಾಯಗನ್’ ಚಿತ್ರಕ್ಕೆ ರಾಜಕೀಯ ಮೈಲೇಜ್!

ತಮಿಳುನಾಡು ರಾಜಕೀಯದಲ್ಲಿ ನಟ ದಳಪತಿ ವಿಜಯ್ ಹೊಸ ಅಲೆ ಸೃಷ್ಟಿಸಿದ್ದಾರೆ. ರಾಜಕೀಯ ಪ್ರವೇಶದ ಬಳಿಕ ಸಿಎಂ ಗದ್ದುಗೆ ಸನಿಹಕ್ಕೆ ಬಂದಿರುವ ವಿಜಯ್ ಇದೀಗ ಕಾಲಿವುಡ್‌ಗೆ ಗುಡ್‌ಬೈ ಹೇಳುವ ಸಾಧ್ಯತೆ ಹೆಚ್ಚಾಗಿದೆ. ಇದೇ ವಿಚಾರ ಅಭಿಮಾನಿಗಳಲ್ಲಿ ಭಾರೀ ಆತಂಕ ಹುಟ್ಟಿಸಿದೆ.

ಕಳೆದ ಹಲವು ವರ್ಷಗಳಿಂದ ವಿಜಯ್ ಸಿನಿಮಾಗಳು ಕೇವಲ ಮನರಂಜನೆಗೆ ಸೀಮಿತವಾಗಿರಲಿಲ್ಲ. ಅವರ ಚಿತ್ರಗಳಲ್ಲಿ ರಾಜಕೀಯ ವ್ಯಂಗ್ಯ, ಸಾಮಾಜಿಕ ಸಮಸ್ಯೆಗಳ ಕುರಿತ ಸಂದೇಶಗಳು ಹೆಚ್ಚಾಗಿ ಕಾಣಿಸಿಕೊಂಡಿದ್ದವು. ವಿಶೇಷವಾಗಿ ‘ಜನ ನಾಯಗನ್’ ಸಿನಿಮಾ ಸಾಕಷ್ಟು ವಿವಾದಗಳ ಮಧ್ಯೆಯೇ ಸದ್ದು ಮಾಡಿತ್ತು.

ಸೆನ್ಸಾರ್ ಮಂಡಳಿಯ ಅಡೆತಡೆ, ರಾಜಕೀಯ ಒತ್ತಡ, ಚಿತ್ರದ ವಿರುದ್ಧ ಸೃಷ್ಟಿಯಾದ ವಿವಾದ . ಜನರ ಕಣ್ಣಲ್ಲಿ ವಿಜಯ್ ಒಬ್ಬ “ಸಂತ್ರಸ್ತ ನಾಯಕ”ನಂತೆ ಕಾಣಿಸಿಕೊಂಡರು. ಇದೇ ವಿಚಾರ ಅಭಿಮಾನಿಗಳಲ್ಲಿ ರಾಜಕೀಯ ಆಕ್ರೋಶ ಹೆಚ್ಚಿಸಿ, ವಿಜಯ್‌ಗೆ ದೊಡ್ಡ ಬೆಂಬಲವಾಗಿ ಪರಿಣಮಿಸಿತು.

ಇದೀಗ ರಾಜಕೀಯದಲ್ಲಿ ವಿಜಯ್ ಮುನ್ನಡೆ ಸಾಧಿಸುತ್ತಿದ್ದಂತೆ ‘ಜನ ನಾಯಗನ್’ ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಏರಿಕೆಯಾಗಿದೆ. ವಿಜಯ್ ಸಿಎಂ ಆದರೆ ಈ ಚಿತ್ರಕ್ಕೆ ಐತಿಹಾಸಿಕ ಮಟ್ಟದ ಮೈಲೇಜ್ ಸಿಗುವ ಸಾಧ್ಯತೆ ಇದೆ ಎಂದು ಸಿನಿ ಪಂಡಿತರು ಹೇಳುತ್ತಿದ್ದಾರೆ.

ಆದರೆ ಮತ್ತೊಂದೆಡೆ ವಿಜಯ್ ಸಿನಿಮಾ ಕರಿಯರ್‌ಗೆ ತೆರೆ ಬೀಳುವ ಸಾಧ್ಯತೆ ಅಭಿಮಾನಿಗಳನ್ನು ಬೇಸರಗೊಳಿಸಿದೆ. ರಾಜಕೀಯ ಜವಾಬ್ದಾರಿಗಳ ಕಾರಣ ಅವರು ಸಂಪೂರ್ಣವಾಗಿ ಸಿನಿಮಾಗಳಿಂದ ದೂರ ಉಳಿಯಬಹುದು ಎನ್ನಲಾಗುತ್ತಿದೆ.

ನಟನೆಯಲ್ಲಿ ಉತ್ತುಂಗದಲ್ಲಿರುವಾಗಲೇ ರಾಜಕೀಯದತ್ತ ಸಂಪೂರ್ಣವಾಗಿ ತಿರುಗುತ್ತಿರುವ ವಿಜಯ್ ನಿರ್ಧಾರ ಕಾಲಿವುಡ್‌ಗೆ ದೊಡ್ಡ ನಷ್ಟವಾದರೂ, ತಮಿಳುನಾಡು ರಾಜಕೀಯಕ್ಕೆ ಹೊಸ ಭರವಸೆಯ ನಾಯಕ ಸಿಕ್ಕಂತಾಗಿದೆ.

Leave a Reply

Your email address will not be published. Required fields are marked *