ಟಾಕ್ಸಿಕ್ ಕಥೆ ರಿವೀಲ್ ಮಾಡಿದ ಯಶ್: ಗೋವಾ-ಪೋರ್ಚುಗೀಸ್ ಸಮರ, ತಂದೆ-ಮಗನ ರಿವೇಂಜ್ ಡ್ರಾಮಾ!
ಕನ್ನಡ ಚಿತ್ರರಂಗದಲ್ಲಿ ಭಾರೀ ನಿರೀಕ್ಷೆ ಮೂಡಿಸಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಚಿತ್ರದ ಕಥಾಹಂದರ ಇದೀಗ ಸಿನಿಪ್ರಿಯರಲ್ಲಿ ಹೊಸ ಕುತೂಹಲ ಹುಟ್ಟಿಸಿದೆ. ಸಾಮಾನ್ಯ ಮಾಸ್ ಕಥೆಗಳನ್ನು ಮೀರಿ, ವಿಭಿನ್ನ ಕಾಲಘಟ್ಟವನ್ನು ಹಿನ್ನೆಲೆಯಾಗಿ ತೆಗೆದುಕೊಂಡಿರುವುದು ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ. ಯಶ್ ನೀಡಿರುವ ಮಾಹಿತಿ ಪ್ರಕಾರ, ಟಾಕ್ಸಿಕ್ ಒಂದು ತಂದೆ–ಮಗ ಸಂಬಂಧದ ಮೇಲೆ ಆಧಾರಿತ ಪ್ರತೀಕಾರದ ಕಥೆ. ಆದರೆ ಇದು ಕೇವಲ ರಿವೇಂಜ್ ಡ್ರಾಮಾ ಮಾತ್ರವಲ್ಲ. ಭಾವನೆ, ಬಾಂಧವ್ಯ ಮತ್ತು ನೋವಿನ ಆಳವನ್ನು ಒಳಗೊಂಡ ಗಾಢ ಕಥಾಹಂದರ ಇದರಲ್ಲಿ…

