ಅಮಿತ್ ಶಾ ಹೆಸರಿನಲ್ಲಿ 2.70 ಕೋಟಿ ವಂಚನೆ: ಸುಜಯೇಂದ್ರ ವಿರುದ್ಧ ಚಾರ್ಜ್‌ಶೀಟ್
ಬೆಂಗಳೂರು: ಗೃಹ ಸಚಿವರ ಹೆಸರನ್ನು ದುರುಪಯೋಗಪಡಿಸಿಕೊಂಡು ಕೋಟ್ಯಾಂತರ ರೂಪಾಯಿ ವಂಚನೆ ನಡೆಸಿದ ಪ್ರಕರಣ ಇದೀಗ ಬಯಲಾಗುತ್ತಿದೆ. ತಾನೇ ಅಮಿತ್ ಶಾ ಅವರ ವಿಶೇಷ ಕರ್ತವ್ಯಾಧಿಕಾರಿ ಎಂದು ಹೇಳಿಕೊಂಡು ಜಮ್ಮು-ಕಾಶ್ಮೀರ ಮೂಲದ ವೈದ್ಯರಿಂದ 2.70 ಕೋಟಿ ರೂಪಾಯಿ ದೋಚಿದ ಆರೋಪದಲ್ಲಿ ಸುಜಯೇಂದ್ರ ವಿರುದ್ಧ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಮಠದ ಮೂಲಕ ಪರಿಚಯ ಬೆಳೆಸಿಕೊಂಡ ಆರೋಪಿ, ರಾಜಕೀಯ ಸಂಪರ್ಕಗಳನ್ನೂ ದುರುಪಯೋಗ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಏರ್‌ಪೋರ್ಟ್ ಬಳಿ ಜಮೀನು ಕೊಡಿಸುವುದಾಗಿ ನಂಬಿಸಿ ಹಣ ಪಡೆದು ಮೋಸ ಮಾಡಿದ್ದಾನೆ. ಇದರ ಜೊತೆಗೆ ರಾಜ್ಯಪಾಲರ…

