
ಬೆಂಗಳೂರು: ಗೃಹ ಸಚಿವರ ಹೆಸರನ್ನು ದುರುಪಯೋಗಪಡಿಸಿಕೊಂಡು ಕೋಟ್ಯಾಂತರ ರೂಪಾಯಿ ವಂಚನೆ ನಡೆಸಿದ ಪ್ರಕರಣ ಇದೀಗ ಬಯಲಾಗುತ್ತಿದೆ. ತಾನೇ ಅಮಿತ್ ಶಾ ಅವರ ವಿಶೇಷ ಕರ್ತವ್ಯಾಧಿಕಾರಿ ಎಂದು ಹೇಳಿಕೊಂಡು ಜಮ್ಮು-ಕಾಶ್ಮೀರ ಮೂಲದ ವೈದ್ಯರಿಂದ 2.70 ಕೋಟಿ ರೂಪಾಯಿ ದೋಚಿದ ಆರೋಪದಲ್ಲಿ ಸುಜಯೇಂದ್ರ ವಿರುದ್ಧ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.
ಮಠದ ಮೂಲಕ ಪರಿಚಯ ಬೆಳೆಸಿಕೊಂಡ ಆರೋಪಿ, ರಾಜಕೀಯ ಸಂಪರ್ಕಗಳನ್ನೂ ದುರುಪಯೋಗ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಏರ್‌ಪೋರ್ಟ್ ಬಳಿ ಜಮೀನು ಕೊಡಿಸುವುದಾಗಿ ನಂಬಿಸಿ ಹಣ ಪಡೆದು ಮೋಸ ಮಾಡಿದ್ದಾನೆ.
ಇದರ ಜೊತೆಗೆ ರಾಜ್ಯಪಾಲರ ನಕಲಿ ಸಹಿ ಹಾಗೂ ಸರ್ಕಾರಿ ಲೆಟರ್ ಹೆಡ್ ಬಳಸಿ ಮತ್ತೊಂದು ವಂಚನೆಗೂ ಮುಂದಾಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಪೊಲೀಸರು ಮನೆಯ ಮೇಲೆ ದಾಳಿ ನಡೆಸಿದಾಗ ನಕಲಿ ದಾಖಲೆಗಳು ಪತ್ತೆಯಾಗಿದ್ದು, ಪ್ರಕರಣದ ವ್ಯಾಪ್ತಿ ಇನ್ನಷ್ಟು ದೊಡ್ಡದಿರಬಹುದು ಎಂದು ಅನುಮಾನ ವ್ಯಕ್ತವಾಗಿದೆ.

