ಮೈಸೂರು ಅಭಿವೃದ್ಧಿ ಪ್ರಾಧಿಕಾರ (MDA) ಬಜೆಟ್ 2026-27: ನಿವೇಶನ ರಹಿತರಿಗೆ ಹೊಸ ಭರವಸೆ
ಮೈಸೂರು ನಗರದ ಜನತೆಗೆ, ವಿಶೇಷವಾಗಿ ಸ್ವಂತ ನಿವೇಶನದ ಕನಸು ಕಾಣುತ್ತಿರುವವರಿಗೆ ಮೈಸೂರು ಅಭಿವೃದ್ಧಿ ಪ್ರಾಧಿಕಾರವು (ಈಗಿನ ಎಂಡಿಎ – MDA) ಈ ಬಾರಿಯ ಬಜೆಟ್‌ನಲ್ಲಿ ಭರ್ಜರಿ ಸಿಹಿಸುದ್ದಿ ನೀಡಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು (MUDA) ಮೈಸೂರು ಅಭಿವೃದ್ಧಿ ಪ್ರಾಧಿಕಾರವಾಗಿ ಮರುನಾಮಕರಣಗೊಂಡ ಬಳಿಕ ಮಂಡನೆಯಾದ ಚೊಚ್ಚಲ ಬಜೆಟ್ ಇದಾಗಿದ್ದು, ಅಭಿವೃದ್ಧಿ ಪಥದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲು ಮುಂದಾಗಿದೆ. ವಸತಿ ಬಡಾವಣೆಗಳ ನಿರ್ಮಾಣಕ್ಕೆ ಭಾರಿ ಮೊತ್ತ ಈ ಬಾರಿಯ ಬಜೆಟ್‌ನ ಅತ್ಯಂತ ಆಕರ್ಷಕ ಅಂಶವೆಂದರೆ ಹೊಸ ವಸತಿ ಬಡಾವಣೆಗಳ ನಿರ್ಮಾಣ….

