SSLC ಫಲಿತಾಂಶ ದಿನವೇ ಡಬಲ್ ದುರಂತ: ಫೇಲ್ ಆದ ವಿದ್ಯಾರ್ಥಿ ಆತ್ಮಹತ್ಯೆ, ಪಾಸ್ ಆದ ವಿದ್ಯಾರ್ಥಿ ನೀರಲ್ಲಿ ಮುಳುಗಿ ಸಾವು

ಚಿತ್ರದುರ್ಗ (ಏ.26): ಎಸ್ಎಸ್‌ಎಲ್‌ಸಿ (SSLC) ಫಲಿತಾಂಶ ಪ್ರಕಟವಾದ ದಿನವೇ ರಾಜ್ಯದಲ್ಲಿ ಎರಡು ಹೃದಯವಿದ್ರಾವಕ ಘಟನೆಗಳು ಬೆಳಕಿಗೆ ಬಂದಿವೆ.

ಚಿತ್ರದುರ್ಗದಲ್ಲಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಮನನೊಂದು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ನಗರದ ಹೊರಪೇಟೆ ಪ್ರದೇಶದ ಡಾನ್ ಬೋಸ್ಕೋ ಶಾಲೆಯ ವಿದ್ಯಾರ್ಥಿ ಅಯಾನ್ ಬೇಗ್ (16) ನೇಣು ಬಿಗಿದುಕೊಂಡು ಜೀವ ಅಂತ್ಯಗೊಳಿಸಿದ್ದಾನೆ. ಫಲಿತಾಂಶ ಪ್ರಕಟವಾದ ಕೆಲವೇ ಹೊತ್ತಿನಲ್ಲಿ ಈ ದುರ್ಘಟನೆ ನಡೆದಿರುವುದು ಕುಟುಂಬದವರನ್ನು ಶೋಕ ಸಾಗರಕ್ಕೆ ತಳ್ಳಿದೆ.

ಇನ್ನೊಂದೆಡೆ, ಕೋಲಾರ ಜಿಲ್ಲೆಯಲ್ಲಿ ಪಾಸ್ ಆದ ಖುಷಿಯಲ್ಲಿ ಸ್ನೇಹಿತರೊಂದಿಗೆ ಈಜಲು ಹೋದ ವಿದ್ಯಾರ್ಥಿಯೊಬ್ಬ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಹರ್ಷದ ಕ್ಷಣವೇ ದುಃಖದಲ್ಲಿ ಅಂತ್ಯಗೊಂಡಿದೆ.

ಒಂದೇ ದಿನದಲ್ಲಿ ಸಂಭವಿಸಿದ ಈ ಎರಡು ಘಟನೆಗಳು ಸಮಾಜದಲ್ಲಿ ಆತಂಕ ಮೂಡಿಸಿದ್ದು, ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಬಗ್ಗೆ ಚಿಂತನೆಗೆ ಕಾರಣವಾಗಿದೆ.

Leave a Reply

Your email address will not be published. Required fields are marked *