ಹುಟ್ಟುಹಬ್ಬದ ಸಂಭ್ರಮವೇ ದುರಂತ: ಕೇಕ್ ಹಚ್ಚಿದಕ್ಕೆ ಸ್ನೇಹಿತರನ್ನು ಕೊಂದ ಯುವಕ

ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಬೆಚ್ಚಿಬೀಳಿಸುವಂತಹ ಘಟನೆ ನಡೆದಿದೆ. ಸಾಮಾನ್ಯವಾಗಿ ಸಂತೋಷದಿಂದ ನಡೆಯಬೇಕಿದ್ದ ಹುಟ್ಟುಹಬ್ಬದ ಸಂಭ್ರಮವೇ ರಕ್ತಪಾತದಲ್ಲಿ ಅಂತ್ಯವಾಗಿದೆ. ಬರ್ತ್‌ಡೇ ಪಾರ್ಟಿಯ ವೇಳೆ ಸ್ನೇಹಿತರು ಬರ್ತ್‌ಡೇ ಬಾಯ್ ಮುಖಕ್ಕೆ ಕೇಕ್ ಹಚ್ಚಿದ್ದಾರೆ. ಇದೇ ವಿಚಾರ ಜಗಳಕ್ಕೆ ಕಾರಣವಾಗಿ, ಕ್ಷಣಾರ್ಧದಲ್ಲಿ ಪರಿಸ್ಥಿತಿ ತೀವ್ರಗೊಂಡಿದೆ. ಜಗಳ ತಾರಕಕ್ಕೇರುವಷ್ಟರಲ್ಲಿ ಬರ್ತ್‌ಡೇ ಬಾಯ್ ಜೀತು ಸೈನಿ ತನ್ನ ಸ್ನೇಹಿತರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಈ ದಾಳಿಯಲ್ಲಿ ಅಮರ್‌ದೀಪ್ ಸೈನಿ, ಮನೀಶ್ ಸೈನಿ ಮತ್ತು ಆಕಾಶ್ ಸೈನಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಬಳಿಕ ಆರೋಪಿ…

Read More

ಮಂಗಳೂರು ರೈಲಿನಲ್ಲಿ ಹೆರಿಗೆ ಘಟನೆ: ವೈದ್ಯಕೀಯ ಸೌಲಭ್ಯವಿಲ್ಲದೇ ಡೆಲಿವರಿ

ಮಂಗಳೂರು: ಮನಸ್ಸು ಹಚ್ಚುವ ಘಟನೆ ಮಂಗಳೂರು-ಬೆಂಗಳೂರು ರೈಲಿನಲ್ಲಿ ನಡೆದಿದೆ. ತುಂಬು ಗರ್ಭಿಣಿಗೆ ರೈಲಿನಲ್ಲಿ ಹೆರಿಗೆ ನೋವು ಕಾಣಿಸಿಕೊಂಡಾಗ, ಅಲ್ಲಿದ್ದ ಮಹಿಳೆಯರೇ ಮುಂದೆ ಬಂದು ಮಾನವೀಯತೆ ಮೆರೆದಿದ್ದಾರೆ. ಸುಮಾರು 30 ನಿಮಿಷಗಳ ಕಾಲ ವೈದ್ಯಕೀಯ ಸಹಾಯಕ್ಕಾಗಿ ಕಾದರೂ, ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಮಹಿಳೆಯರು ಪರದೆ ಕಟ್ಟಿ ತುರ್ತು ಹೆರಿಗೆ ನಡೆಸಿದ್ದಾರೆ. ವೈದ್ಯರಿಲ್ಲದ ಪರಿಸ್ಥಿತಿಯಲ್ಲಿಯೇ ಸುರಕ್ಷಿತವಾಗಿ ಮಗುವಿಗೆ ಜನ್ಮ ನೀಡಲಾಗಿದೆ. ಇದರಿಂದ ತಾಯಿ ಹೆಚ್ಚು ರಕ್ತಸ್ರಾವದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ, ರೈಲನ್ನು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ ರೋಡ್ ಬಳಿ…

Read More

ಕಾನ್‌ಸ್ಟೆಬಲ್ ಪ್ರೇಯಸಿ ರೌದ್ರಾವತಾರ – ಪತ್ನಿ, ಮಗ ಹತ್ಯೆ, ಮಕ್ಕಳಿಗೆ ಗಂಭೀರ ಗಾಯ

ಛತ್ತೀಸಗಢದ ರಾಯ್ಪುರದಲ್ಲಿ ಬೆಚ್ಚಿಬೀಳಿಸುವ ಘಟನೆ ನಡೆದಿದೆ.25 ವರ್ಷದ ಮಹಿಳೆ, ತಾನು ಪ್ರೇಮ ಸಂಬಂಧ ಹೊಂದಿದ್ದ ಕಾನ್‌ಸ್ಟೆಬಲ್ ಮನೆಗೆ ನುಗ್ಗಿ ಆತನ ಪತ್ನಿ ಮತ್ತು ಮಕ್ಕಳ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾಳೆ. ಸರೋಜಿನಿ ಭಾರದ್ವಾಜ್ ಎಂಬ ಆರೋಪಿತೆ, ದುರ್ಗದಲ್ಲಿರುವ ಕಾನ್‌ಸ್ಟೆಬಲ್ ಲಲಿತೇಶ್ ಯಾದವ್ ಅವರ ಫ್ಲಾಟ್‌ಗೆ ಹೋಗಿದ್ದಳು.ಅಲ್ಲಿ ಪತ್ನಿ ರೀನಾ ಯಾದವ್ ಜೊತೆ ಜಗಳ ಆರಂಭವಾಗಿದ್ದು, ಏಕಾಏಕಿ ಚಾಕು ತೆಗೆದು ದಾಳಿ ನಡೆಸಿದ್ದಾಳೆ. ದಾಳಿಯಲ್ಲಿ ರೀನಾ ಯಾದವ್ ಹಾಗೂ 9 ವರ್ಷದ ಮಗ ಆದಿತ್ಯ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ…

Read More

ಕುಂದಾಪುರ ದೇವಸ್ಥಾನ ಕಳವು ಪ್ರಕರಣ – ಇಬ್ಬರು ಆರೋಪಿಗಳ ಬಂಧನ

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಆಜ್ರಿ ಗ್ರಾಮದ ಉಮಾಮಹೇಶ್ವರ ದೇವಸ್ಥಾನದಲ್ಲಿ ನಡೆದ ಕಾಣಿಕೆ ಹುಂಡಿ ಕಳವು ಪ್ರಕರಣದಲ್ಲಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಏಪ್ರಿಲ್ 20ರಂದು ಬೆಳಗ್ಗೆ ನಡೆದ ಈ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹೆಲ್ಮೆಟ್ ಧರಿಸಿದ ವ್ಯಕ್ತಿಯೊಬ್ಬ ದೇವಸ್ಥಾನದ ಹೊರ ಪೌಳಿಗೆ ಬಂದು ಹುಂಡಿಯನ್ನು ಕಳ್ಳತನ ಮಾಡಿಕೊಂಡು ಹೋಗಿದ್ದ ದೃಶ್ಯಗಳು ಗಮನಕ್ಕೆ ಬಂದಿದ್ದವು. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಕಮಲಶಿಲೆ ಗ್ರಾಮದ…

Read More

ಕಡಿಮೆ ಬೆಲೆ ಚಿನ್ನ ಹೇಳಿ ಮೋಸ – ಬೆಂಗಳೂರಿನಲ್ಲಿ ಭಾರಿ ವಂಚನೆ

ಬೆಂಗಳೂರು: ಚಿನ್ನ ಖರೀದಿಗೆ ಹೋಗಿದ್ದವರನ್ನು ಗುರಿಯಾಗಿಸಿಕೊಂಡು ಕೋಟಿ ಕೋಟಿ ಹಣ ವಂಚಿಸಿದ ಘಟನೆ ನಗರದ ಹೆಚ್‌ಎಸ್‌ಆರ್‌ ಲೇಔಟ್‌ನಲ್ಲಿ ನಡೆದಿದೆ. ಸರ್ಜಾಪುರ ಮೂಲದ ಪುನೀತ್ ಎಂಬ ವ್ಯಕ್ತಿ ಚಿನ್ನ ಖರೀದಿ ಮಾಡಲು ಯೋಜನೆ ಮಾಡಿದ್ದರು. ಈ ವೇಳೆ ಅವರ ಪರಿಚಯದ ಸವಿತಾ ರೆಡ್ಡಿ, ಹೆಚ್‌ಎಸ್‌ಆರ್‌ ಲೇಔಟ್‌ನಲ್ಲಿರುವ ಎಂಪಿ ಚಿನ್ನದ ಮಳಿಗೆಯಲ್ಲಿ ಕಡಿಮೆ ಬೆಲೆಯಲ್ಲಿ ಚಿನ್ನ ಸಿಗುತ್ತದೆ, ವೆಸ್ಟೇಜ್ ಚಾರ್ಜ್ ಕೂಡ ಕಡಿಮೆ ಇರುತ್ತದೆ ಎಂದು ನಂಬಿಸಿದ್ದಾಳೆ. ಈ ಮಾತು ನಂಬಿದ ಪುನೀತ್ ಸೇರಿದಂತೆ ಹಲವರು ದೊಡ್ಡ ಮೊತ್ತದ ಹಣವನ್ನು…

Read More

ಕೊಡಗು ಜಿಲ್ಲೆಯಲ್ಲಿ ವಿದೇಶಿ ಮಹಿಳೆಯ ಮೇಲೆ ನಡೆದಿರುವ ದೌರ್ಜನ್ಯ ಪ್ರಕರಣ..! ರಾಜ್ಯದಾದ್ಯಂತ ಚರ್ಚೆಗೆ ಗ್ರಾಸ.

ಕೊಡಗು ಜಿಲ್ಲೆಯಲ್ಲಿ ವಿದೇಶಿ ಮಹಿಳೆಯ ಮೇಲೆ ನಡೆದಿರುವ ದೌರ್ಜನ್ಯ ಪ್ರಕರಣ ರಾಜ್ಯದಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಪೊನ್ನಂಪೇಟೆ ತಾಲ್ಲೂಕಿನ ಕುಟ್ಟ ಗ್ರಾಮದಲ್ಲಿರುವ ಖಾಸಗಿ ಹೋಂಸ್ಟೇಯಲ್ಲಿ ಈ ದುರ್ಘಟನೆ ನಡೆದಿದೆ. ಅಮೆರಿಕದ ವಾಷಿಂಗ್ಟನ್ ಮೂಲದ ಮಹಿಳೆ ಏಪ್ರಿಲ್ 19ರಂದು “ದೇವಿ ವಿಲ್ಲಾ” ಹೋಂಸ್ಟೇಯಲ್ಲಿ ವಾಸವಾಗಿದ್ದ ವೇಳೆ, ಅಲ್ಲಿ ಕೆಲಸ ಮಾಡುತ್ತಿದ್ದ ಝಾರ್ಖಂಡ್ ಮೂಲದ ವ್ರಿಜೇಶ್ ಕುಮಾರ್ ಎಂಬಾತ ಅತ್ಯಾಚಾರ ಎಸಗಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ದೂರು ಪ್ರಕಾರ, ಆರೋಪಿಯು ಮಹಿಳೆಗೆ ಮದ್ಯದಲ್ಲಿ ಮದ್ದು ಹಾಕಿ ಕುಡಿಸಿ ನಂತರ ಅತ್ಯಾಚಾರ…

Read More

ಬೆಳಗಾವಿಯಲ್ಲಿ ಕ್ರೂರ ಘಟನೆ: ನೈಟಿ ಧರಿಸಿದ್ದಕ್ಕೆ ಪತ್ನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪತಿ!

ಬೆಳಗಾವಿ ಜಿಲ್ಲೆಯ ಖಾನಾಪೂರದ ನಂದಗಡದಲ್ಲಿ ಪತ್ನಿ ನೈಟಿ ಧರಿಸಿದ್ದಕ್ಕೆ ಪತಿಯೊಬ್ಬ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಅಮಾನವೀಯ ಘಟನೆ ನಡೆದಿದೆ. 80% ಸುಟ್ಟ ಗಾಯಗಳಿಂದ ಮಂಜುಳಾ ಪಾಟೀಲ್‌ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Read More

ಬಾಗಲಕೋಟೆಯಲ್ಲಿ ಲೋಕಾಯುಕ್ತ ದಾಳಿ: ₹1.70 ಲಕ್ಷ ಲಂಚ ಪಡೆಯುತ್ತಿದ್ದ PSI & ಕಾನ್‌ಸ್ಟೇಬಲ್ ರೆಡ್ ಹ್ಯಾಂಡ್ ಅರೆಸ್ಟ್!

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪೊಲೀಸ್ ಠಾಣೆಯಲ್ಲಿ ಭ್ರಷ್ಟಾಚಾರದ ಪ್ರಕರಣ ಬಯಲಾಗಿದೆ. ಸಾರ್ವಜನಿಕರ ಸೇವೆಗೆ ನೇಮಕವಾಗಿರುವ ಪೊಲೀಸರು ಲಂಚ ಸ್ವೀಕರಿಸುವಾಗಲೇ ಲೋಕಾಯುಕ್ತರ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಪಿಎಸ್‌ಐ ಭೀಮಪ್ಪ ರಬಕವಿ ಮತ್ತು ಕಾನ್‌ಸ್ಟೇಬಲ್ ಸಂತೋಷ್ ಬಿರಾದಾರ ಅವರು ಮುತ್ತಪ್ಪ ನಾಯ್ಕರ್ ಎಂಬುವವರ ಮೇಲೆ ಇಸ್ಪೀಟ್ ಮತ್ತು ಬಡ್ಡಿ ದಂಧೆ ಪ್ರಕರಣ ದಾಖಲಿಸುವ ಬೆದರಿಕೆ ಹಾಕಿದ್ದರೆಂಬ ಆರೋಪ ಕೇಳಿಬಂದಿದೆ. ಪ್ರಕರಣದಿಂದ ಹೆಸರು ಕೈಬಿಡಲು ಮತ್ತು ವಶಪಡಿಸಿಕೊಂಡಿದ್ದ ಬೈಕ್ ಬಿಡುಗಡೆ ಮಾಡಲು ₹2 ಲಕ್ಷ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಈ ಕುರಿತು…

Read More

ಅವನ್ನ ಬಿಟ್ಟು ಇವನ ಜೊತೆ ಪ್ರೀತಿ..ಪ್ರಿಯಕರನ ಜೊತೆ ಸೇರಿ ಗಂಡನ ಕಥೆ ಮಟಾಶ್..!

ಅಮೃತಾ ಕೊಲೆ ಆರೋಪಿ ಪ್ರಿಯಕರ ಸಿದ್ದೇಶ್ (32) ಎಡಭಾಗ, ಅಮೃತಾ ಮದ್ಯಭಾಗ ಕೊಲೆಯಾದ ವ್ಯಕ್ತಿ ಜವರಪ್ಪ ಬಲಭಾಗ ಮೈಸೂರು ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವ ಕ್ರೈಂ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು, ಪತ್ನಿಯೇ ತನ್ನ ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಿಸಿದ ಶಾಕ್ ಘಟನೆ ಸರಗೂರು ತಾಲೂಕಿನ ಕುರ್ಣೇಗಾಲ ಗ್ರಾಮದಲ್ಲಿ ನಡೆದಿದೆ. ಹೌದು… ಕುರ್ಣೇಗಾಲ ನಿವಾಸಿ ಜವರಪ್ಪ ಈ ಕ್ರೂರ ಹತ್ಯೆಗೆ ಬಲಿಯಾದ ವ್ಯಕ್ತಿ.ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ, ಮೈಸೂರು ತಾಲೂಕಿನ ಮಾವಿನಹಳ್ಳಿ ಗ್ರಾಮದ ಸಿದ್ದೇಶ್ (32)…

Read More

ಬ್ಯಾಂಕ್ ಒಳಗೆ ಸಿಬ್ಬಂದಿ ಗಲಾಟೆ: ಕ್ಯಾಶಿಯರ್‌ಗೆ ತರಾಟೆ ತೆಗೆದುಕೊಂಡ ಮಹಿಳಾ ಸಿಬ್ಬಂದಿ ವಿಡಿಯೋ ವೈರಲ್

ಚಿಕ್ಕಮಗಳೂರು, ಏಪ್ರಿಲ್ 18: ಬ್ಯಾಂಕ್‌ನಂತಹ ಸಾರ್ವಜನಿಕ ಸ್ಥಳದಲ್ಲಿ ಸಿಬ್ಬಂದಿಗಳ ನಡುವಿನ ಗಲಾಟೆ ಗ್ರಾಹಕರ ಮುಂದೆ ನಡೆದಿರುವ ಘಟನೆ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಜಿಲ್ಲೆಯ ಎನ್.ಆರ್.ಪುರದ ಕೆನರಾ ಬ್ಯಾಂಕ್ ಶಾಖೆಯಲ್ಲಿ ಈ ಅಹಿತಕರ ಘಟನೆ ನಡೆದಿದೆ. ಬ್ಯಾಂಕಿನ ದೈನಂದಿನ ಕೆಲಸದ ವೇಳೆ ಮಹಿಳಾ ಸಿಬ್ಬಂದಿ ದೀಪಾ ಮತ್ತು ಕ್ಯಾಶಿಯರ್ ಚಾಣಕ್ಯ ನಡುವೆ ಮಾತಿನ ಚಕಮಕಿ ಆರಂಭವಾಗಿ, ಅದು ತೀವ್ರವಾಗಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಘಟನೆಯ ವೇಳೆ ಮಹಿಳಾ ಸಿಬ್ಬಂದಿ ಕ್ಯಾಶಿಯರ್‌ನ ಕೊರಳಪಟ್ಟಿ ಹಿಡಿದು ತರಾಟೆಗೆ ತೆಗೆದುಕೊಂಡ…

Read More