
ಛತ್ತೀಸಗಢದ ರಾಯ್ಪುರದಲ್ಲಿ ಬೆಚ್ಚಿಬೀಳಿಸುವ ಘಟನೆ ನಡೆದಿದೆ.
25 ವರ್ಷದ ಮಹಿಳೆ, ತಾನು ಪ್ರೇಮ ಸಂಬಂಧ ಹೊಂದಿದ್ದ ಕಾನ್ಸ್ಟೆಬಲ್ ಮನೆಗೆ ನುಗ್ಗಿ ಆತನ ಪತ್ನಿ ಮತ್ತು ಮಕ್ಕಳ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾಳೆ.
ಸರೋಜಿನಿ ಭಾರದ್ವಾಜ್ ಎಂಬ ಆರೋಪಿತೆ, ದುರ್ಗದಲ್ಲಿರುವ ಕಾನ್ಸ್ಟೆಬಲ್ ಲಲಿತೇಶ್ ಯಾದವ್ ಅವರ ಫ್ಲಾಟ್ಗೆ ಹೋಗಿದ್ದಳು.
ಅಲ್ಲಿ ಪತ್ನಿ ರೀನಾ ಯಾದವ್ ಜೊತೆ ಜಗಳ ಆರಂಭವಾಗಿದ್ದು, ಏಕಾಏಕಿ ಚಾಕು ತೆಗೆದು ದಾಳಿ ನಡೆಸಿದ್ದಾಳೆ.
ದಾಳಿಯಲ್ಲಿ ರೀನಾ ಯಾದವ್ ಹಾಗೂ 9 ವರ್ಷದ ಮಗ ಆದಿತ್ಯ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸಿದರೂ ಬದುಕುಳಿಯಲಿಲ್ಲ.
ಇನ್ನಿಬ್ಬರು ಹೆಣ್ಣುಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದು, ಒಬ್ಬಳ ಸ್ಥಿತಿ ಚಿಂತಾಜನಕವಾಗಿದೆ.
ಘಟನೆಯ ವೇಳೆ ಒಬ್ಬಳು ಮಗಳು ಸ್ನಾನಗೃಹದಲ್ಲಿ ಅಡಗಿ ಪಾರಾಗಿದ್ದು, ಇನ್ನೊಬ್ಬಳು ನೆರೆಹೊರೆಯವರಿಗೆ ಮಾಹಿತಿ ನೀಡಿದ್ದಾಳೆ.
ಸ್ಥಳಕ್ಕೆ ಬಂದ ನೆರೆಹೊರೆಯವರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ಪ್ರಕರಣ ದೇಶವನ್ನೇ ಬೆಚ್ಚಿಬೀಳಿಸಿದ್ದು, ಪೊಲೀಸ್ ತನಿಖೆ ಮುಂದುವರಿದಿದೆ.

