
ಬೆಂಗಳೂರು ನಗರದಲ್ಲಿ ಆತಂಕ ಮೂಡಿಸಿದ ಘಟನೆ!
ಬ್ಯಾಡರಹಳ್ಳಿಯ ಖಾಸಗಿ ಡಯಾಗ್ನೋಸ್ಟಿಕ್ ಲ್ಯಾಬ್ನಲ್ಲಿ ತಪಾಸಣೆಗೆ ಹೋದ ಮಹಿಳೆಗೆ ಕಿರುಕುಳ ಆರೋಪ ಕೇಳಿಬಂದಿದೆ.
ರಕ್ತದ ಮಾದರಿ ತೆಗೆದುಕೊಳ್ಳುವ ವೇಳೆ ನಿರ್ಲಕ್ಷ್ಯ ತೋರಿದ ಲ್ಯಾಬ್ ಸಿಬ್ಬಂದಿ, ಮಹಿಳೆ ಪ್ರಶ್ನಿಸಿದಾಗ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ.
ಇಷ್ಟೇ ಅಲ್ಲ, ಕೆಲ ದಿನಗಳ ನಂತರ ಮಹಿಳೆಯ ಮನೆಗೆ ತೆರಳಿ ವಿಷಯ ಹೊರಗೆ ಹೇಳಿದರೆ ಸುಮ್ಮನೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ ಆರೋಪವೂ ಕೇಳಿಬಂದಿದೆ.
ಈ ಸಂಬಂಧ ಮ್ಯಾನೇಜರ್ ಮತ್ತು ಸಿಬ್ಬಂದಿ ವಿರುದ್ಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಈ ಘಟನೆ ವೈದ್ಯಕೀಯ ಕ್ಷೇತ್ರದ ಮೇಲೆ ಜನರ ನಂಬಿಕೆಗೆ ದೊಡ್ಡ ಹೊಡೆತ ನೀಡಿದೆ.

