ವಿಠ್ಠಲ್ ಮಲ್ಯ ರಸ್ತೆಯಲ್ಲಿ ಕಾರ್-ಬೈಕ್ ಭೀಕರ ಡಿಕ್ಕಿ: ರಕ್ತಸಿಕ್ತನಾದ ಸವಾರನಿಗೆ ಕಾರು ಮಾಲೀಕ ಮಹಿಳೆಯಿಂದ ಅವಾಚ್ಯ ನಿಂದನೆ!
ಬೆಂಗಳೂರಿನ ಅತ್ಯಂತ ಪ್ರತಿಷ್ಠಿತ ರಸ್ತೆಗಳಲ್ಲಿ ಒಂದಾದ ವಿಠ್ಠಲ್ ಮಲ್ಯ ರಸ್ತೆಯಲ್ಲಿ (Vittal Mallya Road) ಇಂದು ಭೀಕರ ರಸ್ತೆ ಅಪಘಾತ ಸಂಭವಿಸಿದೆ. ನಗರದ ಹೃದಯಭಾಗದಲ್ಲಿರುವ ಶೆಲ್ ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ಕಾರು ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ್ದು, ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಘಟನೆಯ ವಿವರ: ವೇಗವಾಗಿ ಬಂದ ಬೈಕ್ ಸವಾರನೊಬ್ಬ ನಿಯಂತ್ರಣ ತಪ್ಪಿ ಮುಂದೆ ಚಲಿಸುತ್ತಿದ್ದ ಕಾರಿನ ಬಂಪರ್‌ಗೆ ಬಲವಾಗಿ ಗುದ್ದಿದ್ದಾನೆ. ಡಿಕ್ಕಿಯ ರಭಸಕ್ಕೆ ಕಾರಿನ ಬಂಪರ್ ಸಂಪೂರ್ಣವಾಗಿ ನೆಜ್ಜುಗುಜ್ಜಾಗಿದೆ. ಇತ್ತ ಬೈಕ್…

