ಫೈನಲ್‌ನಲ್ಲಿ ಹೈಡ್ರಾಮಾ: ಕರ್ನಾಟಕ ಆಟಗಾರನಿಗೆ ತಲೆಯಿಂದ ಗುದ್ದಿದ ಜೆ&ಕೆ ನಾಯಕ ಪಾರಸ್ ಡೋಗ್ರಾ!
ಕರ್ನಾಟಕ ಮತ್ತು ಜಮ್ಮು ಕಾಶ್ಮೀರ ನಡುವಿನ ರಣಜಿ ಫೈನಲ್ ವೇಳೆ ಸಂಘರ್ಷ. ಕರ್ನಾಟಕದ ಆಟಗಾರ ಕೆವಿ ಅನೀಶ್‌ಗೆ ಜೆ&ಕೆ ನಾಯಕ ಪಾರಸ್ ಡೋಗ್ರಾ ತಲೆಯಿಂದ ಗುದ್ದಿದ (Headbutt) ವಿಡಿಯೋ ವೈರಲ್ ಆಗಿದೆ. ಮಯಾಂಕ್ ಅಗರವಾಲ್ ಮಧ್ಯಪ್ರವೇಶಿಸಿ ಜಗಳ ಬಿಡಿಸಿದ ಘಟನೆ ಇಲ್ಲಿದೆ. ಹುಬ್ಬಳ್ಳಿ: ಕರ್ನಾಟಕ ಮತ್ತು ಜಮ್ಮು ಕಾಶ್ಮೀರ ನಡುವೆ ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ 2024-25ರ ಫೈನಲ್ ಪಂದ್ಯದ ಎರಡನೇ ದಿನದಂದು ಕ್ರಿಕೆಟ್ ಲೋಕವೇ ಬೆಚ್ಚಿಬೀಳುವಂತಹ ಘಟನೆ ನಡೆದಿದೆ. ಮೈದಾನದಲ್ಲಿ ಮಾತಿನ ಚಕಮಕಿ ವಿಕೋಪಕ್ಕೆ ಹೋಗಿ…

