ತಾನೆ ತಪ್ಪು ಮಾಡಿ ಕಾರು ಚಾಲಕನಿಗೆ ಅವಾಜ್ ಹಾಕಿದ ಮಹಿಳೆ!
ತಾನೆ ತಪ್ಪು ಮಾಡಿ ಕಾರು ಚಾಲಕನಿಗೆ ಅವಾಜ್ ಹಾಕಿದ ಮಹಿಳೆ!

ಬೆಂಗಳೂರು: ಬೆಂಗಳೂರಿನಲ್ಲಿ ಮಹಿಳೆಯೊಬ್ಬಳು ತಾನೆ ತಪ್ಪು ಮಾಡಿ ಕಾರು ಚಾಲಕನಿಗೆ ಅವಾಜ್ ಹಾಕಿದ್ದಾಳೆ. ಬನ್ನೇರುಘಟ್ಟ ರಸ್ತೆ ಗೊಟ್ಟಿಗೆರೆಯಲ್ಲಿ ಈ ಘಟನೆ ನಡೆದಿದ್ದು, ಕಾರು ಚಲಾಯಿಸಿಕೊಂಡು ಹೋಗುತ್ತಿದ್ದ ವ್ಯಕ್ತಿಯ ಕಾರ್ ಎಡಕ್ಕೆ ಸ್ಕೂಟರ್ ತಿರುಗಿಸಿದ ಮಹಿಳೆ. ಈ ವೇಳೆ ಕಾರಿಗೆ ತಾಗಿ ಮಹಿಳೆ ರಸ್ತೆಗೆ ಬಿದ್ದಿದ್ದಾಳೆ. ಜುಲೈ 27 ರ ಸಂಜೆ 7 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಘಟನೆಯ ದೃಶ್ಯ ಕಾರೊಂದರ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸದ್ಯ ಕಾರು ನಿಧಾನವಾಗಿದ್ದಿದ್ದರಿಂದ ಮಹಿಳೆಗೆ ಯಾವುದೇ ರೀತಿಯಲ್ಲಿ ಪ್ರಾಣಹಾನಿಯಾಗಿಲ್ಲ. ನಂತರ ಬಂದು ಕಾರು ಚಾಲಕನಿಗೆ ಆವಾಜ್ ಹಾಕಿದ್ದಾಳೆ. ಇನ್ನೂ ಘಟನೆ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ.
What's Your Reaction?






