ಮುಡಾ ಹಗರಣ ಬಿಜೆಪಿ ಪಾದಯಾತ್ರೆ ಕುರಿತು ಸಿದ್ಧತಾ ಸಭೆ!
A-preparatory-meeting-was-held-regarding-the-BJP-party's-walkout-for-the-Muda-scam
ಬೆಂಗಳೂರು: ಮುಡಾ ಸೈಟ್ ಹಗರಣ ವಿಚಾರವಾಗಿ ಬಿಜೆಪಿ ಪಕ್ಷದಿಂದ ಪಾದಯಾತ್ರೆ ನಡೆಸುವ ವಿಚಾರಕ್ಕೆ ಸಂಬಂಧಿಸಿ ಸಿದ್ಧತಾ ಸಭೆ ನಡೆಸಲಾಗುತ್ತಿದೆ. ಪಾದಯಾತ್ರೆ ಬಗ್ಗೆ ಜೆಡಿಎಸ್ ಹಿಂದೆ ಸರಿದ ಬೆನ್ನಲ್ಲೇ ಬಿಜೆಪಿ ಪಕ್ಷ ತನ್ನ ಸಿದ್ಧತೆಯನ್ನ ಮುಂದುವರಿಸಿದೆ. ಬೆಂಗಳೂರುರಿನ ಮಲ್ಲೇಶ್ವರನಲ್ಲಿರುವ ಬಿಜೆಪಿ ರಾಜ್ಯ ಕಚೇರಿಯಲ್ಲಿ ಯುವ ಮೋರ್ಚಾ ಸಿದ್ಧತಾ ಸಭೆಯನ್ನ ನಡೆಸಿದ್ದಾರೆ. ಬಿಜೆಪಿ ಪಾದಯಾತ್ರೆಯ ಮೊದಲ ದಿನದ ಜವಾಬ್ದಾರಿಯನ್ನ ಯುವ ಮೋರ್ಚಾಗೆ ವಹಿಸಲಾಗಿದೆ. ಸದ್ಯ ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ, ಯುವ ಮೋರ್ಚಾ ರಾಜ್ಯಾಧ್ಯಕ್ಷ ಧೀರಜ್ ಮುನಿರಾಜು, ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಪೂಂಜ ಉಪಸ್ಥಿತಿರಿದ್ದರು.
What's Your Reaction?






