ನಟ ದರ್ಶನ್ ಬಿಡುಗಡೆಗಾಗಿ ದೇವರ ಮೋರೆ ಹೋದ ಕುಟುಂಬಸ್ಥರು!
Family-members-went-to-temple-for-the-release-of-actor-Darshan

ರೇಣುಕಾಸ್ವಾಮಿ ಕೊಲೆ ಕೇಸ್ ಪ್ರಕರಣದಲ್ಲಿ ಈಗಾಗಲೇ ಸ್ಯಾಂಡಲ್ವುಡ್ ಸ್ಟಾರ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅಂದರ್ ಆಗಿದ್ದಾರೆ. ಒಂದು ಕಡೆ ರಾಜ್ಯದಾದ್ಯಂತ ಅಭಿಮಾನಿಗಳು ದರ್ಶನ್ ಜೈಲಿನಿಂದ ಆದಷ್ಟು ಬೇಗ ಬಿಡುಗಡೆಯಾಗಲೆಂದು ದೇವರ ಮೋರೆಯನ್ನ ಹೋಗುತ್ತಿದ್ದಾರೆ. ಮತ್ತೊಂದು ಕಡೆ ದರ್ಶನ್ ಕುಟುಂಬಸ್ಥರು ದರ್ಶನ್‌ರನ್ನ ಹೊರ ಕರೆತರಲು ದೇವರ ಮೊರೆ ಹೋಗಿದ್ದಾರೆ.
ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿರುವ ಆರತಿ ಉಕ್ಕಡ ದೇಗುಲಕ್ಕೆ ದರ್ಶನ್ ಅಳಿಯ ಚಂದನ್ ಅವರು ಭೇಟಿ ನೀಡಿ ವಿಶೇಷ ಪೂಜೆಯನ್ನ ಸಲ್ಲಿಸಿದ್ದಾರೆ. ಅತ್ತ ದರ್ಶನ್ ಧರ್ಮಪತ್ನಿ ವಿಜಯಲಕ್ಷ್ಮೀ ಅವರು ನಿನ್ನೇ ಅಮವಾಸ್ಯೆ ಪ್ರಯುಕ್ತ ಬನಶಂಕರಿ ದೇವಸ್ಥಾನಕ್ಕೆ ತೆರಳಿ ಅಮ್ಮನವರಿಗೆ ವಿಶೇಷ ಪೂಜೆಯಲ್ಲಿ ಸಲ್ಲಿಸಿದ್ದು, ಇತ್ತ ಅಳಿಯ ಚಂದನ್ ಆರತಿ ಉಕ್ಕಡದಲ್ಲಿ ಮಾಡಿಸಿದ್ದಾರೆ.
What's Your Reaction?






