ಚಲಿಸುತ್ತಿದ್ದ ಬಸ್‌ಗೆ ಲಾರಿ ಢಿಕ್ಕಿ, ಓರ್ವ ವಿದ್ಯಾರ್ಥಿ ಗಂಭೀರ!
A-lorry-hit-a-moving-bus-and-a-student-sustained-serious-injurie.

ಉಡುಪಿ: ಕುಂದಾಪುರದಲ್ಲಿ ಚಲಿಸುತ್ತಿದ್ದ ಬಸ್‌ಗೆ ಲಾರಿ ಢಿಕ್ಕಿ ಹೊಡೆದಿದ್ದು, ಓರ್ವ ವಿದ್ಯಾರ್ಥಿಗೆ ಗಂಭೀರವಾಗಿದ್ದು, ಹಲವರಿಗೆ ಗಾಯವಾಗಿದೆ. ಕುಂದಾಪುರದ ತಲ್ಲೂರು ಪ್ರವಾಸಿ ಹೋಟೇಲ್ ಎದುರಿರುವ ರಾಷ್ಟ್ರೀಯ ಹೆದ್ದಾರಿ 66 ಯಲ್ಲಿ ಈ ದುರ್ಘಟನೆ ನಡೆದಿದೆ. ಬೈಂದೂರುನಿಂದ ಕುಂದಾಪುರದ ಕಡೆಗೆ ಬರುತ್ತಿದ್ದ ಖಾಸಗಿ ಬಸ್‌ಗೆ ಲಾರಿ ಹಿಂದಿನಿಂದ ಬಂದು ಢಿಕ್ಕಿ ಹೊಡೆದಿದೆ. ಅಪಘಾತದಿಂದಾಗಿ ಬಸ್‌ನಲ್ಲಿರುವ ಹಲವು ಮಂದಿಗೆ ಗಾಯಗಳಾಗಿವೆ. ಹೆದ್ದಾರಿ ಬಳಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಅಚಾನಕ್ ಆಗಿ ಬಸ್ ನಿಂತಿದೆ. ಈ ವೇಳೆ ಹಿಂದಿನಿಂದ ಬಂದ ಬಸ್ ಢಿಕ್ಕಿ ಹೊಡೆದಿದೆ.
ಇನ್ನೂ ಬಸ್‌ಗೆ ಢಿಕ್ಕಿ ಹೊಡೆದ ರಭಸಕ್ಕೆ ಯಾವುದೇ ರೀತಿಯಲ್ಲಿ ಅಪಾಯ ಸಂಭವಿಸಿಲ್ಲ. ಸದ್ಯ ಬಸ್‌ನಲ್ಲಿದ್ದ ಕುಂದಾಪುರ ವೆಂಕಟರಮಣ ಆಂಗ್ಕ ಮಾಧ್ಯಮ ಸ್ಕೂಲ್ ವಿದ್ಯಾರ್ಥಿ ಪ್ರಸಾದ್ ಎನ್ನುವವರಿಗೆ ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
What's Your Reaction?






