ಪುನೀತ್ ಕೆರೆಹಳ್ಳಿ ವಿರುದ್ಧ ಕಾಂಗ್ರೆಸ್ ನಿರಂತರವಾಗಿ ತನ್ನ ಕ್ರೌರ್ಯ ಮೆರೆಯುತ್ತಿದೆ!
Congress-government-is-constantly-showing-its-cruelty-against-Puneeth-Kerehalli

ಬೆಂಗಳೂರು: ಹಿಂದೂ ಕಾರ್ಯಕರ್ತರು, ಸಾಮಾಜಿಕ ಕಾರ್ಯಕರ್ತರನ್ನು ದ್ವೇಷಿಸುವುದು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಪರಮ ಉದ್ದೇಶವಿದ್ದಂತಿದೆ ಎಂದು ಬಿಜೆಪಿ ರಾಜ್ಯಾದ್ಯಕ್ಷ ವಿಜೆಯೇಂದ್ರ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ. ಹಿಂದೂಪರ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಪುನೀತ್ ಕೆರೆಹಳ್ಳಿ ವಿರುದ್ಧ ಕಾಂಗ್ರೆಸ್ ಸರ್ಕಾರ ನಿರಂತರವಾಗಿ ತನ್ನ ಕ್ರೌರ್ಯವನ್ನ ಮೆರೆಯುತ್ತಿದೆ. ರಾಜಸ್ಥಾನದಿಂದ ಬೆಂಗಳೂರಿಗೆ ಬರುತ್ತಿದ್ದ ಟನ್ ಗಟ್ಟಲೆ ಅಕ್ರಮ ಮಾಂಸ ರಫ್ತಿನ ಮಾಫಿಯಾ ಚಟುವಟಿಕೆಯ ಮೇಲೆ ಬೆಳಕು ಚೆಲ್ಲಿದ ಪುನೀತ್ ಕೆರೆಹಳ್ಳಿ ಅವರನ್ನು ಬಂಧಿಸಿ ಅನಾಗರೀಕವಾಗಿ ನಡೆದುಕೊಂಡಿರುವ ಪೊಲೀಸರ ದೌರ್ಜನ್ಯವನ್ನು ಬಿಜೆಪಿ ಪಕ್ಷವು ಬಲವಾಗಿ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ.
ಅಲ್ಲದೇ ನಾಗರೀಕ ಪ್ರಜ್ಞೆ ಮೆರೆದು ಜನರ ಆರೋಗ್ಯದ ಕಾಳಜಿ ವಹಿಸಿ ಕುರಿ ಮಾಂಸದ ಹೆಸರಿನಲ್ಲಿ ಬೆಂಗಳೂರಿಗೆ ಬಂದಿದ್ದ ಶಂಕಿತ ಮಾಂಸದ ಕುರಿತು ಪ್ರಶ್ನೆ ಮಾಡಿದ್ದು, ಹೋರಾಡಿದ್ದು ತಪ್ಪು ಎಂದು ಪೊಲೀಸರು ಪರಿಗಣಿಸುವುದಾದರೆ. ಇನ್ನು ಮುಂದೆ ಈ ಸರ್ಕಾರದಲ್ಲಿ ಅಕ್ರಮ ಹಾಗೂ ಮಾಫಿಯಾಗಳ ವಿರುದ್ಧ ಹೋರಾಟವನ್ನು ನಡೆಸುವುದು ಕ್ರಿಮಿನಲ್ ಅಪರಾಧವಾಗುತ್ತದೆ ಎಂದು ಪೊಲೀಸರು ಸಂದೇಶ ರವಾನಿಸಿದ್ದಾರೆ.
ಅಷ್ಟೇ ಅಲ್ಲದೇ ಜನರ ಆರೋಗ್ಯದ ಕಾಳಜಿಗಾಗಿ ಪ್ರಾಮಾಣಿಕವಾಗಿ ದನಿಯೆತ್ತಿದ್ದ ಪುನೀತ್ ಕೆರೆಹಳ್ಳಿ ಅವರನ್ನು ಬಂಧಿಸಿ ಅನಾಗರಿಕವಾಗಿ ವರ್ತಿಸಿರುವ ಪೊಲೀಸರ ನಡವಳಿಕೆ ಬ್ರಿಟಿಷರ ಕಾಲದ ದಮನಕಾರಿ ಧೋರಣೆಯನ್ನು ಪ್ರತಿಬಿಂಬಿಸಿದೆ. ಹಾಗೆ ಪೊಲೀಸರ ಕ್ರೌರ್ಯ ಹಾಗೂ ಅಟ್ಟಹಾಸವನ್ನು ಬಿಜೆಪಿ ಖಂಡಿಸುತ್ತದೆ ಎಂದು ಪೊಲೀಸ್ ಇಲಾಖೆ ಮತ್ತು ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿವೈ ವಿಜೆಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
What's Your Reaction?






