ವಯನಾಡು ಭೂಕುಸಿತ ದುರಂತ ಸಾವಿನ ಸಂಖ್ಯೆ 156ಕ್ಕೆ ಏರಿಕೆ!
ವಯನಾಡು ಭೂಕುಸಿತ ದುರಂತ ಸಾವಿನ ಸಂಖ್ಯೆ 156ಕ್ಕೆ ಏರಿಕೆ!

ಕೇರಳ: ಕೇರಳದ ವಯನಾಡು ಭೂಕುಸಿತ ದುರಂತ ಪ್ರಕರಣಕ್ಕೆ ಸಂಬಂಧಿಸಿ ಇಂದಿಗೆ ಸಾವಿನ ಸಂಖ್ಯೆ 156ಕ್ಕೆ ಏರಿಕೆಯಾಗಿದೆ. ಈ ದುರಂತದಲ್ಲಿ ಅಂದಾಜು 98 ಮಂದಿ ನಾಪತ್ತೆಯಾಗಿದ್ದು, 481 ಕ್ಕೂ ಹೆಚ್ಚು ಮಂದಿಯನ್ನ ರಕ್ಷಣಾ ಕಾರ್ಯದಿಂದ ರಕ್ಷಣೆ ಮಾಡಲಾಗಿದ. ಇನ್ನೂ ಕಾಳಜಿ ಕೇಂದ್ರಗಳಲ್ಲಿ ಈವರೆಗಿನ 3068 ಜನರನ್ನ ನೋಂದಣಿ ಮಾಡಿಕೊಳ್ಳಲಾಗಿದೆ ಎಂದು ಕೇರಳ ಸರ್ಕಾರದ ಜಿಲ್ಲಾಧಿಕಾರಿ ಮೇಘಶ್ರೀ ಅವರಿಂದ ಸರ್ಕಾರಕ್ಕೆ ಮಾಹಿತಿಯನ್ನ ನೀಡಿದ್ದಾರೆ.
ಸದ್ಯ, ಸರ್ಕಾರಿ ದಾಖಲೆಗಳ ಮೂಲಕ ಕೊಚ್ಚಿ ಹೋದವರ ಮಾಹಿತಿಯನ್ನ ಸಂಗ್ರಹ ಮಾಡಿಕೊಳ್ಳಲಾಗುತ್ತಿದ್ದು, ಆಧಾರ್, ರೇಷನ್ ಕಾರ್ಡ್, ಕುಟುಂಬಸ್ಥರು ನೀಡುವ ಮಾಹಿತಿ ಆಧಾರದ ಮೇಲೆ ದುರಂತದ ಅಂದಾಜುನನ್ನ ತಿಳಿಸಲು ಮುಂದಾಗಿದ್ದಾರೆ. ಅಲ್ಲದೇ ವಯನಾಡು ಜಿಲ್ಲೆಯ ಮೆಪ್ಪಾಡಿಯಲ್ಲಿ ಐದು ಸಹಾಯ ಕೇಂದ್ರಗಳನ್ನ ತೆರೆಯಲಾಗಿದೆ. ಅಷ್ಟೇ ಅಲ್ಲದೇ ಹೆಲ್ಪ್‌ಲೈನ್ ಮೂಲಕ ಸರ್ಕಾರ ನೀಡುವ ದಾಖಲೆಗಳನ್ನು ಕಾಳಜಿ ಕೇಂದ್ರದ ನೋಂದಣಿ ಜತೆ ಸಂತ್ರಸ್ತರ ಪತ್ತೆಗೆ ಯತ್ನಿಸುತ್ತಿದ್ದಾರೆ ಎಂದು ಸರ್ಕಾರ ತಿಳಿಸಿದೆ.
What's Your Reaction?






