ಇನ್ ಸ್ಟಾಗ್ರಾಂ ಪ್ರೀತಿಗಾಗಿ ಗಂಡನನ್ನ ಕೊಲೆ ಮಾಡಿಸಿದ ಐನಾತಿ ಪತ್ನಿ!
ಇನ್ ಸ್ಟಾಗ್ರಾಂ ಪ್ರೀತಿಗಾಗಿ ಗಂಡನನ್ನ ಕೊಲೆ ಮಾಡಿಸಿದ ಐನಾತಿ ಪತ್ನಿ!

ತುಮಕೂರು: ಪ್ರಿಯತಮನಿಗಾಗಿ ಪ್ರೀತಿಸಿ ಮದುವೆಯಾಗಿದ್ದ ಗಂಡನನ್ನೇ ಕೊಲೆ ಮಾಡಲಾಗಿದೆ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಮಲ್ಲೆಕಾವು ಗ್ರಾಮದ ಬಳಿ ಈ ಘಟನೆ ನಡೆದಿದೆ. ಪ್ರಕಾಶ್ (30) ಮೃತ ದುರ್ದೈವಿಯಾಗಿದ್ದು, ಹರ್ಷಿತಾ (28) ಗಂಡನನ್ನೇ ಕೊಲೆ ಮಾಡಿಸಿದ್ದಾಳೆ. ಕಲಬುರಗಿ ಜಿಲ್ಲೆಯ ಚಿಂಚುಲಿ ಮೂಲದವನಾಗಿರೋ ಪ್ರಕಾಶ್, ಮೂರು ವರ್ಷದ ಹಿಂದೆ ಹರ್ಷಿತಾಳನ್ನ ಇನ್ ಸ್ಟಾಗ್ರಾಂ ಮೂಲಕ ಪರಿಚಯವಾಗಿದೆ. ಬಳಿಕ ಪರಸ್ಪರ ಪ್ರೀತಿಸಿ ಇಬ್ಬರೂ ಮದುವೆಯಾಗಿ ಪ್ರಕಾಶ್ ಪತ್ನಿಯ ತವರಿನಲ್ಲೇ ವಾಸವಿದ್ದು, ದಂಪತಿಗೆ ಒಂದೂವರೆ ವರ್ಷದ ಮಗುವೂ ಇದೆ.
ಆದ್ರೆ ಇತ್ತೀಚಿಗೆ ಇನ್ ಸ್ಟಾಗ್ರಾಂನಲ್ಲಿ ಹರ್ಷಿತಾಳಿಗೆ ಮಾಜಿ ಪ್ರಿಯತಮ ಗುಂಡನ ಜೊತೆ ಮರು ಪ್ರೇಮಾಕುರ ಶುರುವಾಗಿದೆ. ಬಳಿಕ 2 ತಿಂಗಳ ಹಿಂದೆ ಪ್ರಿಯಕರನ ಜೊತೆ ಒಡೆಹೋಗಿ ಪುನ: ಮನೆಗೆ ವಾಪಸ್ ಆಗಿದ್ದಳು. ಆದ್ರೆ ಒಳಗೊಳಗೇ ಪ್ರಿಯಕರ ಗುಂಡನ ಜೊತೆ ಸೇರಿ ಗಂಡನ ಕೊಲೆಗೆ ಸ್ಕೆಚ್ ಹಾಕಿದ್ದ ಪತ್ನಿ. ಸಹೋದರ ಸೋಮಶೇಖರ್ ಹಾಗೂ ಪ್ರಿಯತಮ ಗುಂಡನಿಗೆ ಸುಫಾರಿ ನೀಡಿದ್ದಾಳೆ. ಇದರಂತೆ ನಂಬಿಸಿ ಮೃತ ಪ್ರಕಾಶ್ ನನ್ನ ಕರೆಸಿಕೊಂಡಿದ್ದ ಐನಾತಿ ಪತ್ನಿಯ ಸಹೋದರ ಸೋಮಶೇಖರ್. ಪ್ರಕಾಶ್ ಬರುತ್ತಿದ್ದಂತೆ ಆತನ ಮೇಲೆ ಗುಂಡ ಮತ್ತು ಆತನ ಸ್ನೇಹಿತ ರಂಗಸ್ವಾಮಯ್ಯ ಡ್ರ್ಯಾಗರ್ ನಿಂದ ಎದೆಭಾಗಕ್ಕೆ ಚುಚ್ಚಿ ಕೊಲೆ ಮಾಡಿದ್ದಾರೆ. ಬಳಿಕ ಕೊಲೆ ಆರೋಪಿಗಳು ಅಪಘಾತದ ರೀತಿಯಲ್ಲಿ ಬಿಂಬಿಸಲು ಪ್ರಯತ್ನಿಸಿದ್ದಾರೆ. ಆದ್ರೆ ಎದೆಭಾಗಕ್ಕೆ ಚುಚ್ಚಿದ ಗಾಯ ಪತ್ತೆ ಹಿನ್ನೆಲೆ ಇದು ಕೊಲೆ ಎಂದು ಖಚಿತ ಪಡಿಸಿದ ಕೊರಟಗೆರೆ ಪೊಲೀಸರು. ಸದ್ಯ ಕೊರಟಗೆರೆ ಪೊಲೀಸರಿಂದ ಹರ್ಷಿತಾ, ಸೋಮಶೇಖರ್, ರಂಗಸ್ವಾಮಯ್ಯ ಬಂಧನ ಮಾಡಲಾಗಿದ್ದು, ಗುಂಡನಿಗಾಗಿ ಪೊಲೀಸರು ಬೀಸಿದ್ದಾರೆ.
What's Your Reaction?






