ಕೆಲಸ ಮಾಡ್ತಿದ್ದ ಮನೆಯಲ್ಲೇ 50 ಲಕ್ಷ ಮೌಲ್ಯದ ಚಿನ್ನಾಭರಣ ಎಗರಿಸಿದ ಚಾಲಾಕಿ!
ಕೆಲಸ-ಮಾಡ್ತಿದ್ದ-ಮನೆಯಲ್ಲೇ-50-ಲಕ್ಷ-ಮೌಲ್ಯದ-ಚಿನ್ನಾಭರಣ-ಎಗರಿಸಿದ-ಚಾಲಾಕಿ

ಬೆಂಗಳೂರು: ಕೆಲಸ ಮಾಡ್ತಿದ್ದ ಮನೆಯಲ್ಲಿ ಕಳ್ಳತನ ಮಾಡ್ತಿದ್ದ ಆರೋಪಿ ಮಹಿಳೆಯನ್ನ ಬಂಧನ ಮಾಡಲಾಗಿದೆ. ದಿವ್ಯಾ (22) ಎನ್ನವವರು ಬಂಧಿತ ಆರೋಪಿಯಾಗಿದ್ದು, ಬೆಂಗಳೂರಿನ ಯಮಲೂರಿನ ದಿವ್ಯಶ್ರೀ ಟೆಕ್ ಪಾರ್ಕ್ ವಿಲ್ಲಾ ಒಂದರಲ್ಲಿ ವಾಸವಿದ್ದ ಉದ್ಯಮಿ ಮನೆಯಲ್ಲಿ ಕೆಲಸ ಮಾಡ್ತಾ ಚಿನ್ನಾಭರಣವನ್ನ ಕಳ್ಳತನ ಮಾಡಲಾಗಿದೆ. ಉದ್ಯಮಿ ಮಕ್ಕಳನ್ನು ನೋಡಿಕೊಳ್ತಿದ್ದ ಯುವತಿ ದಿವ್ಯಾ. ಮನೆಯಲ್ಲಿ ಯಾರು ಇಲ್ಲದಿದ್ದಾಗ ಚಿನ್ನಾಭರಣ ಕಳ್ಳತನ ಮಾಡಿದ್ದಾಳೆ.
ಚಾಲಾಕಿ ಕಳ್ಳಿ ಡೈಮಂಡ್ ಸರ ಸೇರಿ 50 ಲಕ್ಷ ಮೌಲ್ಯದ ಚಿನ್ನಾಭರಣವನ್ನ ಎಗರಿಸಿದ್ದು, ಮನೆಯಲ್ಲಿ ಚಿನ್ನಾಭರಣ ಕಾಣದಿದ್ದಾಗ ಉದ್ಯಮಿ ದೂರು ನೀಡಿದ್ದಾರೆ. ಸದ್ಯ ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನ ಬಂಧಿಸಿಲಾಗಿದೆ. ಅಷ್ಟೇ ಅಲ್ಲದೇ ಪೊಲೀಸರ ವಶದಲ್ಲಿದ್ದಾಗಲು ಆರೋಪಿ ದಿವ್ಯ ಕೈ ಕೊಯ್ದುಕೊಂಡು ಡ್ರಾಮಾ ಮಾಡಿದ್ದಾಳೆ. ಸದ್ಯ ದಿವ್ಯಾಳನ್ನ ಬಂಧಿಸಿ 30 ಲಕ್ಷದ ಚಿನ್ನಾಭರಣವನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ.
What's Your Reaction?






