ಪಾಕಿಸ್ತಾನ ಭಾಗವೆಂದು ಜಮ್ಮು-ಕಾಶ್ಮೀರ ತೋರಿಕೆ; ನೇಪಾಳ ಏರ್‌ಲೈನ್ಸ್ ವಿರುದ್ಧ ಟೀಕೆ

ಜಮ್ಮು ಮತ್ತು ಕಾಶ್ಮೀರವನ್ನು ಪಾಕಿಸ್ತಾನದ ಭಾಗವೆಂದು ತನ್ನ ನೆಟ್‌ವರ್ಕ್ ನಕ್ಷೆಯಲ್ಲಿ ತೋರಿಸಿ ನೇಪಾಳ ಏರ್‌ಲೈನ್ಸ್ ತೀವ್ರ ವಿವಾದಕ್ಕೀಡಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಂಚಲಾಗಿದ್ದ ಪೋಸ್ಟ್‌ನಲ್ಲಿ ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಪ್ರದೇಶಗಳನ್ನು ಪಾಕಿಸ್ತಾನದ ಭಾಗವಾಗಿ ತೋರಿಸಲಾಗಿದ್ದು, ಭಾರತೀಯ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಪೋಸ್ಟ್ ವೈರಲ್ ಆದ ಬೆನ್ನಲ್ಲೇ #BoycottNepalAirlines ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್‌ಗೆ ಬಂದಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹಾಗೂ ವಿಮಾನಯಾನ ಸಚಿವಾಲಯ ನೇಪಾಳದ ವಿರುದ್ಧ ರಾಜತಾಂತ್ರಿಕ ಕ್ರಮ ಕೈಗೊಳ್ಳಬೇಕೆಂದು ಹಲವರು ಒತ್ತಾಯಿಸಿದ್ದಾರೆ.

ಭೋಜ್‌ಪುರಿ ನಟ ಹಾಗೂ ಗಾಯಕ ಖೇಸರಿಲಾಲ್ ಯಾದವ್ ಸೇರಿದಂತೆ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ನೇಪಾಳ ಏರ್‌ಲೈನ್ಸ್ ವಿರುದ್ಧ ಕಿಡಿಕಾರಿದ್ದಾರೆ. ವಿವಾದ ತೀವ್ರವಾಗುತ್ತಿದ್ದಂತೆ ನೇಪಾಳ ಏರ್‌ಲೈನ್ಸ್ ತನ್ನ ಪೋಸ್ಟ್ ಡಿಲೀಟ್ ಮಾಡಿ ಸಾರ್ವಜನಿಕ ಕ್ಷಮೆಯಾಚನೆ ಪ್ರಕಟಿಸಿದೆ.

ತಪ್ಪಾದ ನಕ್ಷೆ ಸಂಸ್ಥೆಯ ಅಧಿಕೃತ ನಿಲುವನ್ನು ಪ್ರತಿಬಿಂಬಿಸುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಏರ್‌ಲೈನ್ಸ್, ಭವಿಷ್ಯದಲ್ಲಿ ಇಂತಹ ತಪ್ಪುಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ತಿಳಿಸಿದೆ.

Leave a Reply

Your email address will not be published. Required fields are marked *