ತೈಲ ಮಾರಾಟ ಕಂಪನಿಗಳ ಸಂಕಷ್ಟ: ಪೆಟ್ರೋಲ್ ಬಂಕ್ ಮಾಲೀಕರಿಗೆ ಮುಂಗಡ ಪಾವತಿ ಕಡ್ಡಾಯ! ಗ್ರಾಹಕರ ಮೇಲೆ ಬೀರುತ್ತದೆಯೇ ಪರಿಣಾಮ?
ಪಶ್ಚಿಮ ಏಷ್ಯಾದ ಯುದ್ಧದ ಕಾರ್ಮೋಡಗಳು ಭಾರತದ ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರತೊಡಗಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ $100 ದಾಟಿದ್ದರೂ, ಭಾರತ ಸರ್ಕಾರವು ಜನಸಾಮಾನ್ಯರ ಹಿತದೃಷ್ಟಿಯಿಂದ ಪೆಟ್ರೋಲ್ ಮತ್ತು ಡೀಸೆಲ್ ಚಿಲ್ಲರೆ ಬೆಲೆಗಳನ್ನು ಏರಿಸಿಲ್ಲ. ಇದರ ನೇರ ಹೊಡೆತ ಈಗ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ (OMCs) ಮೇಲೆ ಬಿದ್ದಿದ್ದು, ಅವರು ಈಗ ತಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಕಠಿಣ ಕ್ರಮಗಳಿಗೆ ಮುಂದಾಗಿದ್ದಾರೆ. ಏನಿದು ಹೊಸ ನಿಯಮ? ಈವರೆಗೆ ಭಾರತೀಯ ತೈಲ…

