ಬಾಗಲಕೋಟೆಯಲ್ಲಿ ಲೋಕಾಯುಕ್ತ ದಾಳಿ: ₹1.70 ಲಕ್ಷ ಲಂಚ ಪಡೆಯುತ್ತಿದ್ದ PSI & ಕಾನ್‌ಸ್ಟೇಬಲ್ ರೆಡ್ ಹ್ಯಾಂಡ್ ಅರೆಸ್ಟ್!

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪೊಲೀಸ್ ಠಾಣೆಯಲ್ಲಿ ಭ್ರಷ್ಟಾಚಾರದ ಪ್ರಕರಣ ಬಯಲಾಗಿದೆ. ಸಾರ್ವಜನಿಕರ ಸೇವೆಗೆ ನೇಮಕವಾಗಿರುವ ಪೊಲೀಸರು ಲಂಚ ಸ್ವೀಕರಿಸುವಾಗಲೇ ಲೋಕಾಯುಕ್ತರ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಪಿಎಸ್‌ಐ ಭೀಮಪ್ಪ ರಬಕವಿ ಮತ್ತು ಕಾನ್‌ಸ್ಟೇಬಲ್ ಸಂತೋಷ್ ಬಿರಾದಾರ ಅವರು ಮುತ್ತಪ್ಪ ನಾಯ್ಕರ್ ಎಂಬುವವರ ಮೇಲೆ ಇಸ್ಪೀಟ್ ಮತ್ತು ಬಡ್ಡಿ ದಂಧೆ ಪ್ರಕರಣ ದಾಖಲಿಸುವ ಬೆದರಿಕೆ ಹಾಕಿದ್ದರೆಂಬ ಆರೋಪ ಕೇಳಿಬಂದಿದೆ. ಪ್ರಕರಣದಿಂದ ಹೆಸರು ಕೈಬಿಡಲು ಮತ್ತು ವಶಪಡಿಸಿಕೊಂಡಿದ್ದ ಬೈಕ್ ಬಿಡುಗಡೆ ಮಾಡಲು ₹2 ಲಕ್ಷ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಈ ಕುರಿತು…

Read More

ಟಾಕ್ಸಿಕ್ ಕಥೆ ರಿವೀಲ್ ಮಾಡಿದ ಯಶ್: ಗೋವಾ-ಪೋರ್ಚುಗೀಸ್ ಸಮರ, ತಂದೆ-ಮಗನ ರಿವೇಂಜ್ ಡ್ರಾಮಾ!

ಕನ್ನಡ ಚಿತ್ರರಂಗದಲ್ಲಿ ಭಾರೀ ನಿರೀಕ್ಷೆ ಮೂಡಿಸಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಚಿತ್ರದ ಕಥಾಹಂದರ ಇದೀಗ ಸಿನಿಪ್ರಿಯರಲ್ಲಿ ಹೊಸ ಕುತೂಹಲ ಹುಟ್ಟಿಸಿದೆ. ಸಾಮಾನ್ಯ ಮಾಸ್ ಕಥೆಗಳನ್ನು ಮೀರಿ, ವಿಭಿನ್ನ ಕಾಲಘಟ್ಟವನ್ನು ಹಿನ್ನೆಲೆಯಾಗಿ ತೆಗೆದುಕೊಂಡಿರುವುದು ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ. ಯಶ್ ನೀಡಿರುವ ಮಾಹಿತಿ ಪ್ರಕಾರ, ಟಾಕ್ಸಿಕ್ ಒಂದು ತಂದೆ–ಮಗ ಸಂಬಂಧದ ಮೇಲೆ ಆಧಾರಿತ ಪ್ರತೀಕಾರದ ಕಥೆ. ಆದರೆ ಇದು ಕೇವಲ ರಿವೇಂಜ್ ಡ್ರಾಮಾ ಮಾತ್ರವಲ್ಲ. ಭಾವನೆ, ಬಾಂಧವ್ಯ ಮತ್ತು ನೋವಿನ ಆಳವನ್ನು ಒಳಗೊಂಡ ಗಾಢ ಕಥಾಹಂದರ ಇದರಲ್ಲಿ…

Read More

ಭೀಕರ ಅಪಘಾತ: ಹುಡುಗಿ ನೋಡಲು ಹೊರಟ ಕುಟುಂಬ ಸೇರಿದ್ದು ಮಸಣಕ್ಕೆ – 4 ಸಾವು, 21 ಮಂದಿಗೆ ಗಾಯ

ವಿಜಯನಗರ ಜಿಲ್ಲೆಯಲ್ಲಿ ಹೃದಯ ಕಲುಕುವ ಭೀಕರ ರಸ್ತೆ ಅಪಘಾತ.. ಹೊಸಪೇಟೆಯ ಹೊರವಲಯದಲ್ಲಿ ನಡೆದ ಸರಣಿ ಅಪಘಾತದಲ್ಲಿ ನಾಲ್ವರು ದಾರುಣವಾಗಿ ಸಾವನ್ನಪ್ಪಿದ್ದು, 21 ಮಂದಿ ಗಾಯಗೊಂಡಿದ್ದಾರೆ. ಕನ್ಯೆ ನೋಡಲು ಸಂತೋಷವಾಗಿ ಹೊರಟಿದ್ದ ಕುಟುಂಬ.ಕ್ಷಣಾರ್ಧದಲ್ಲಿ ಮಸಣ ಸೇರಿರುವ ದುರ್ಘಟನೆ ಇದು. ಹೌದು.. ಕಿತ್ನೂರು ಗ್ರಾಮದ 28 ವರ್ಷದ ಕೊಟ್ರೇಶ್, ಮದುವೆ ಮಾತುಕತೆಗೆ ಗಂಗಾವತಿ ಕಡೆ ಹೊರಟಿದ್ದ. ಆತನ ಜೊತೆ ತಾಯಿ ಸುಜಾತ (34), ತಂದೆ ನಾಗಪ್ಪ (58) ಸಹ ಪ್ರಯಾಣಿಸುತ್ತಿದ್ದರು. ಆದರೆ ಡಣಾಪುರದ ಬಳಿ ಯಮಸ್ವರೂಪಿಯಾಗಿ ಬಂದ ಲಾರಿಯೊಂದು. ಅವರ…

Read More

ಅವನ್ನ ಬಿಟ್ಟು ಇವನ ಜೊತೆ ಪ್ರೀತಿ..ಪ್ರಿಯಕರನ ಜೊತೆ ಸೇರಿ ಗಂಡನ ಕಥೆ ಮಟಾಶ್..!

ಅಮೃತಾ ಕೊಲೆ ಆರೋಪಿ ಪ್ರಿಯಕರ ಸಿದ್ದೇಶ್ (32) ಎಡಭಾಗ, ಅಮೃತಾ ಮದ್ಯಭಾಗ ಕೊಲೆಯಾದ ವ್ಯಕ್ತಿ ಜವರಪ್ಪ ಬಲಭಾಗ ಮೈಸೂರು ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವ ಕ್ರೈಂ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು, ಪತ್ನಿಯೇ ತನ್ನ ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಿಸಿದ ಶಾಕ್ ಘಟನೆ ಸರಗೂರು ತಾಲೂಕಿನ ಕುರ್ಣೇಗಾಲ ಗ್ರಾಮದಲ್ಲಿ ನಡೆದಿದೆ. ಹೌದು… ಕುರ್ಣೇಗಾಲ ನಿವಾಸಿ ಜವರಪ್ಪ ಈ ಕ್ರೂರ ಹತ್ಯೆಗೆ ಬಲಿಯಾದ ವ್ಯಕ್ತಿ.ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ, ಮೈಸೂರು ತಾಲೂಕಿನ ಮಾವಿನಹಳ್ಳಿ ಗ್ರಾಮದ ಸಿದ್ದೇಶ್ (32)…

Read More

ಎಣ್ಣೆ ಪ್ರಿಯರಿಗೆ ಬಿಗ್ ಶಾಕ್: ಆಲ್ಕೋಹಾಲ್ ಆಧಾರಿತ ತೆರಿಗೆ – ಮದ್ಯದ ಬೆಲೆ 20% ಏರಿಕೆ ಸಾಧ್ಯತೆ

ಬೆಂಗಳೂರು, ಏಪ್ರಿಲ್ 19: ರಾಜ್ಯದ ಮದ್ಯಪ್ರಿಯರಿಗೆ ಶಾಕ್ ನೀಡುವ ಬೆಳವಣಿಗೆಯಾಗಿ, ಕರ್ನಾಟಕ ಸರ್ಕಾರ ಮದ್ಯದಲ್ಲಿನ ಆಲ್ಕೋಹಾಲ್ ಪ್ರಮಾಣದ ಆಧಾರದ ಮೇಲೆ ಹೊಸ ತೆರಿಗೆ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ. ಈ ಸಂಬಂಧ ಕರಡು ಅಧಿಸೂಚನೆಯನ್ನು ಸರ್ಕಾರ ಹೊರಡಿಸಿದ್ದು, ಇದು ಜಾರಿಯಾದರೆ ಮದ್ಯದ ಬೆಲೆಗಳಲ್ಲಿ ಗಣನೀಯ ಏರಿಕೆ ಆಗುವ ಸಾಧ್ಯತೆ ಇದೆ. ಹೊಸ ನಿಯಮದ ಪ್ರಕಾರ, ಮದ್ಯದಲ್ಲಿರುವ ಆಲ್ಕೋಹಾಲ್ ಪ್ರಮಾಣ (Alcohol In Beverage – AIB) ಹೆಚ್ಚಾದಷ್ಟೂ ಅದರ ಮೇಲೆ ವಿಧಿಸುವ ತೆರಿಗೆಯೂ ಹೆಚ್ಚಾಗಲಿದೆ. ಇದರ ಪರಿಣಾಮವಾಗಿ…

Read More

ಬ್ಯಾಂಕ್ ಒಳಗೆ ಸಿಬ್ಬಂದಿ ಗಲಾಟೆ: ಕ್ಯಾಶಿಯರ್‌ಗೆ ತರಾಟೆ ತೆಗೆದುಕೊಂಡ ಮಹಿಳಾ ಸಿಬ್ಬಂದಿ ವಿಡಿಯೋ ವೈರಲ್

ಚಿಕ್ಕಮಗಳೂರು, ಏಪ್ರಿಲ್ 18: ಬ್ಯಾಂಕ್‌ನಂತಹ ಸಾರ್ವಜನಿಕ ಸ್ಥಳದಲ್ಲಿ ಸಿಬ್ಬಂದಿಗಳ ನಡುವಿನ ಗಲಾಟೆ ಗ್ರಾಹಕರ ಮುಂದೆ ನಡೆದಿರುವ ಘಟನೆ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಜಿಲ್ಲೆಯ ಎನ್.ಆರ್.ಪುರದ ಕೆನರಾ ಬ್ಯಾಂಕ್ ಶಾಖೆಯಲ್ಲಿ ಈ ಅಹಿತಕರ ಘಟನೆ ನಡೆದಿದೆ. ಬ್ಯಾಂಕಿನ ದೈನಂದಿನ ಕೆಲಸದ ವೇಳೆ ಮಹಿಳಾ ಸಿಬ್ಬಂದಿ ದೀಪಾ ಮತ್ತು ಕ್ಯಾಶಿಯರ್ ಚಾಣಕ್ಯ ನಡುವೆ ಮಾತಿನ ಚಕಮಕಿ ಆರಂಭವಾಗಿ, ಅದು ತೀವ್ರವಾಗಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಘಟನೆಯ ವೇಳೆ ಮಹಿಳಾ ಸಿಬ್ಬಂದಿ ಕ್ಯಾಶಿಯರ್‌ನ ಕೊರಳಪಟ್ಟಿ ಹಿಡಿದು ತರಾಟೆಗೆ ತೆಗೆದುಕೊಂಡ…

Read More

ಹುಟ್ಟುಹಬ್ಬದಂದು ಕೆಎಲ್ ರಾಹುಲ್ ಅಬ್ಬರ: ಆರ್‌ಸಿಬಿ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಗೆ 6 ವಿಕೆಟ್ ಜಯ

ಬೆಂಗಳೂರು: ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ರೋಮಾಂಚಕ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ ತಂಡವು ಹಾಲಿ ಚಾಂಪಿಯನ್ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು 6 ವಿಕೆಟ್‌ಗಳಿಂದ ಮಣಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡ 175 ರನ್‌ಗಳ ಸವಾಲಿನ ಗುರಿ ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ತಂಡಕ್ಕೆ ಆರಂಭದಲ್ಲಿ ಆಘಾತ ಎದುರಾಯಿತು. ಮೊದಲ 3 ಓವರ್‌ಗಳಲ್ಲೇ ಪ್ರಮುಖ 3 ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 18 ರನ್‌ಗಳಿಗೆ ಕುಸಿತ ಕಂಡಿತು. ಈ ಸಂಕಷ್ಟದ ಹೊತ್ತಿನಲ್ಲಿ ಕನ್ನಡಿಗ ಕೆ.ಎಲ್‌…

Read More

ದೆಹಲಿಯಲ್ಲಿ ಭಯೋತ್ಪಾದಕ ಸಂಚು ಭೇದಿಸಿದ ಪೊಲೀಸರು: ಆಟಿಕೆ ಕಾರಿನಲ್ಲಿ IED ದಾಳಿ ಯೋಜನೆ, 4 ಬಂಧನ

ನವದೆಹಲಿ, ಏಪ್ರಿಲ್ 18: ದೆಹಲಿ ಪೊಲೀಸರು ಮಹತ್ವದ ಭಯೋತ್ಪಾದಕ ಸಂಚುವನ್ನು ವಿಫಲಗೊಳಿಸಿದ್ದು, ಮಹಾರಾಷ್ಟ್ರ, ಒಡಿಶಾ ಮತ್ತು ಬಿಹಾರ ಮೂಲದ ನಾಲ್ವರು ಶಂಕಿತ ಉಗ್ರರನ್ನು ಬಂಧಿಸಿದ್ದಾರೆ. ರಾಜಧಾನಿ ದೆಹಲಿಯಲ್ಲಿ ಆಟಿಕೆ ಕಾರುಗಳನ್ನು ಬಳಸಿಕೊಂಡು ದಾಳಿ ನಡೆಸಲು ಅವರು ಯೋಜನೆ ರೂಪಿಸಿದ್ದರೆಂದು ತಿಳಿದುಬಂದಿದೆ. ಪೊಲೀಸರ ಪ್ರಕಾರ, ಆರೋಪಿಗಳು ನಗರದಲ್ಲಿನ ಸೂಕ್ಷ್ಮ ಮತ್ತು ಜನದಟ್ಟಣೆಯ ಪ್ರದೇಶಗಳನ್ನು ಗುರಿಯಾಗಿಸಿ ಪೂರ್ವ ಪರಿಶೀಲನೆ ನಡೆಸಿದ್ದರು. ಅಲ್ಲದೆ, ಎನ್‌ಕ್ರಿಪ್ಟ್ ಮಾಡಲಾದ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಇನ್ನಷ್ಟು ಮಂದಿಯನ್ನು ತಮ್ಮ ಗುಂಪಿಗೆ ಸೇರಿಸಿಕೊಳ್ಳಲು ಪ್ರಯತ್ನಿಸಿದ್ದರು. ಕಾರ್ಯಾಚರಣೆಯ ವೇಳೆ…

Read More

ಕಡೂರಿನಲ್ಲಿ ರಾಗಿ ದಂಧೆ: ಪೊಲೀಸರ ವಿರುದ್ಧ ಗಂಭೀರ ಆರೋಪ..!

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಪಂಚನಹಳ್ಳಿ ಗ್ರಾಮದಲ್ಲಿ ಬೆಚ್ಚಿಬೀಳಿಸುವಂತಹ ಘಟನೆ ಬೆಳಕಿಗೆ ಬಂದಿದೆ. ರೈತರಿಗೆ ನ್ಯಾಯ ನೀಡಬೇಕಾದ ವ್ಯವಸ್ಥೆಯೇ ಈಗ ಪ್ರಶ್ನಾರ್ಹವಾಗಿದ್ದು, ರಾಗಿ ದಂಧೆಯ ಹಿಂದೆ ದೊಡ್ಡ ಜಾಲ ಕಾರ್ಯನಿರ್ವಹಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಮಧ್ಯರಾತ್ರಿ 11 ಗಂಟೆ ಸುಮಾರಿಗೆ, ಬಿರಲಿಂಗೇಶ್ವರ ದೇವಸ್ಥಾನದ ಸಮೀಪದಲ್ಲಿರುವ ಮನೆಯ ಮುಂದೆ ಲಾರಿಗಳ ಮೂಲಕ ಅಕ್ರಮವಾಗಿ ರಾಗಿ ತರಲಾಗುತ್ತಿದೆ ಎಂಬ ಆರೋಪ ಇದೆ. ನಂತರ ಆ ರಾಗಿಯನ್ನು ಟ್ಯಾಕ್ಟರ್‌ಗಳಿಗೆ ವರ್ಗಾವಣೆ ಮಾಡಲಾಗುತ್ತಿದೆ. ಆಶ್ಚರ್ಯದ ಸಂಗತಿ ಏನೆಂದರೆ, ಈ ಎಲ್ಲಾ ಘಟನೆಗಳ ನಡುವೆ…

Read More

ಯೋಗೇಶ್ ಗೌಡ ಹತ್ಯೆ ಪ್ರಕರಣ: ವಿನಯ್ ಕುಲಕರ್ಣಿ ಸೇರಿ 16ಮಂದಿಗೆ ಜೀವಾವಧಿ ಶಿಕ್ಷೆ

ಬೆಂಗಳೂರು: ರಾಜ್ಯವನ್ನು ಬೆಚ್ಚಿಬೀಳಿಸಿದ್ದ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಮಹತ್ವದ ತೀರ್ಪು ಪ್ರಕಟವಾಗಿದೆ. ಕಾಂಗ್ರೆಸ್ ಶಾಸಕ ವಿನಯ್‌ ಕಲಕರ್ಣಿ ಸೇರಿದಂತೆ 16 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ನೀಡಿದೆ. ಒಟ್ಟು 17 ಮಂದಿಯನ್ನು ದೋಷಿಗಳೆಂದು ಘೋಷಿಸಲಾಗಿದ್ದು, ವಿನಯ್ ಕುಲಕರ್ಣಿ 15ನೇ ಅಪರಾಧಿಯಾಗಿ ಗುರುತಿಸಲ್ಪಟ್ಟಿದ್ದಾರೆ. ಕೊಲೆ ಹಾಗೂ ಪಿತೂರಿ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಅಪರಾಧಿಗೂ ಜೀವಾವಧಿ ಶಿಕ್ಷೆಯ ಜೊತೆಗೆ ತಲಾ ₹30 ಸಾವಿರ ದಂಡ ವಿಧಿಸಲಾಗಿದೆ. ನ್ಯಾಯಾಲಯದ ತೀರ್ಪಿನ ಬಳಿಕ ಸಿಬಿಐ…

Read More