ರಾಜಿ ಸಂಧಾನ ಮಾಡುವ ಕೆಲ್ಸಾನ ನಾನು ಮಾಡಲ್ಲ; ವಿನೋದ್ ರಾಜ್!

ಬೆಂಗಳೂರು: ರೇಣುಕಾಸ್ವಾಮಿ ಮನೆಗೆ ನಟ ವಿನೋದ್ ರಾಜ್ ಭೇಟಿ ನೀಡಿದ್ದ ವಿಚಾರಕ್ಕೆ ಸಂಬಂಧಿಸಿ, ಮಾಧ್ಯಮಗಳಲ್ಲಿ ಪ್ರಸಾರವಾದ ಸುದ್ದಿ ಬಗ್ಗೆ ನಟ ವಿನೋದ್ ಬೇಸರ ವ್ಯಕ್ತಪಡಿಸಿದ್ದಾರೆ. ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಭೇಟಿ ಬಳಿಕ ಕಳೆದ 26 ರಂದು ಶುಕ್ರವಾರದಂದು ರೇಣುಕಾಸ್ವಾಮಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದ ವಿನೋದ್ ರಾಜ್. ಈ ವೇಳೆ ವಿನೋದ್ ರಾಜ್ ಅವರು ರೇಣುಕಾಸ್ವಾಮಿ ಕುಟುಂಬಕ್ಕೆ 1 ಲಕ್ಷ ಧನ ಸಹಾಯ ಮಾಡಿದ್ದರು. ಆದ್ರೆ ಮಧ್ಯಮಗಳಲ್ಲಿ ರಾಜಿ ಸಂಧಾನಕ್ಕಾಗಿ ಹೋಗಿದ್ದರು ಎಂಬಂತೆ ಬಿಂಬಿತವಾಗಿತ್ತು. ಈ ಬಗ್ಗೆ ಡ್ಯಾನ್ಸ್ ಕಿಂಗ್ ವಿನೋದ್ ರಾಜ್ ಬೇಸರ ಹೊರಹಾಕಿದ್ದಾರೆ.
ನಟ ದರ್ಶನ್ ತೂಗದೀಪ್ ಅವರನ್ನ ಒಬ್ಬ ಕಲಾವಿದ ಎಂಬ ಕಾರಣಕ್ಕೆ ಭೇಟಿ ಮಾಡಿ ಬಂದೆ, ರೇಣುಕಾಸ್ವಾಮಿ ಪತ್ನಿ ಗರ್ಭಿಣಿ, ಹುಟ್ಟೋ ಮಗುಗೆ ಏನಾದ್ರೂ ಒಳ್ಳೇದು ಮಾಡೋಕಾಗುತ್ತ ಅಂತ ಹೋಗಿ ಸಾಂತ್ವಾನ ಹೇಳಿ ನನ್ನ ಕೈಲಾದ ಕಾಣಿಕೆ ಕೊಟ್ಟು ಬಂದೆ. ಆದರೆ ಮಾಧ್ಯಮಗಳಲ್ಲಿ ಇಲ್ಲ ಸಲ್ಲದ ವಿಚಾರದ ಬಗ್ಗೆ ಮಾತನಾಡಲಾಗುತ್ತಿದೆ. ನಾನು ರೇಣುಕಾಸ್ವಾಮಿ ಮನೆಗೆ ಹೋಗಿದ್ದು, ರಾಜಿ ಸಂಧಾನ ಅಲ್ಲ, ರಾಜಿ ಮಾಡೋಕು ಆಗಲ್ಲ, ಅಂತಹ ಕೆಲ್ಸಾನ ನಾನು ಮಾಡಲ್ಲ ಎಂದು ತಿಳಿಸಿದ್ದಾರೆ.
What's Your Reaction?






