ಮನೆ ಮುಂದೆ ನಿಲ್ಲಿಸಿದ್ದ ಸ್ಕೂಟಿ ಹ್ಯಾಂಡಲ್ ಲಾಕ್ ಮುರಿದು ಕಳ್ಳತನ!
scooty-parked-in-front-of-a-house-in-Sarjarapur-was-theft

ಬೆಂಗಳೂರು: ಸರ್ಜಾರಪುದಲ್ಲಿ ಮನೆ ಮುಂದೆ ನಿಲ್ಲಿಸಿದ ಸ್ಕೂಟಿಯನ್ನ ಖತರ್ನಾಕ್ ಖದೀಮರು ಎಗರಿಸಿದ್ದಾರೆ. ಬೆಂಗಳೂರಿನ ಸರ್ಜಾಪುರದ ಸಂಪುರ ಗೇಟ್ ಬಳಿ ಮನೆ ಮಂದೆ ನಿಲ್ಲಿಸಿದ ಸ್ಕೂಟಿಯನ್ನ ಕಳ್ಳತನ ಮಾಡಲಾಗಿದೆ. ಮೂವರು ಕಳ್ಳರಿಂದ ಸ್ಕೂಟಿ ಹ್ಯಾಂಡಲ್ ಲಾಕ್ ಮುರಿದು ಕಳ್ಳತನ ಮಾಡಲಾಗಿದೆ. ಹ್ಯಾಂಡಲ್ ಲಾಕ್ ಮುರಿದು ಸರ್ಜಾಪುರದ ಸಂಪುರ ಗೇಟ್‌ನಿಂದ ದೊಮ್ಮಸಂದ್ರದ ಕಡೆಗೆ ಗಾಡಿ ತಳ್ಳಿಕೊಂಡೆ ಹೋಗಿದ್ದಾರೆ.
ದೊಮ್ಮಸಂದ್ರದ ಕಡೆ ತಳ್ಳಿಕೊಂಡು ಹೋಗುವ ದೃಶ್ಯ ಸಿಸಿಟಿವಿ ಕ್ಯಾಮಾರದಲ್ಲಿ ಸೆರೆಯಾಗಿದೆ. ಒಂದು ಕಡೆ ದೊಮ್ಮಸಂದ್ರದ ಕಡೆ ತಳ್ಳಿಕೊಂಡು ಹೋಗುವ ದೃಶ್ಯ, ಮತ್ತೊಂದು ಕಡೆ ಹ್ಯಾಂಡಲ್ ಲಾಕ್ ಮುರಿದು ಕಳ್ಳತನ ದೃಶ್ಯ ಇವೆರಡನ್ನು ಪೊಲೀಸರಿಗೆ ಟ್ಯಾಗ್ ಮಾಡಿ ಎಕ್ಸ್ ಖಾತೆಯಲ್ಲಿ ವಿಡಿಯೋ ಶೇರ್ ಮಾಡಲಾಗಿದ್ದು, ಕಳ್ಳತನ ಬಗ್ಗೆ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲು ಮಾಡಿಕೊಂಡು ಪೊಲೀಸರು ಖದೀಮರಿಗೆ ಬಲೆ ಬೀಸಿದ್ದಾರೆ.
What's Your Reaction?






