12 ವರ್ಷದಿಂದ ತಲೆಮರಿಸಿಕೊಂಡಿದ್ದ ಆರೋಪಿಯ ಬಂಧನ!
CCB-police-arrested-the-accused-who-was-absconding-for-12 years

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಹನ್ನೆರಡು ವರ್ಷಗಳಿಂದ ತಲೆಮರಿಸಿಕೊಂಡಿದ್ದ ಆರೋಪಿಯನ್ನ ಬಂಧನ ಮಾಡಲಾಗಿದೆ. ಸಿಸಿಬಿಯ ಒಸಿಐ (OCW) ವಿಭಾಗದ ಅಧಿಕಾರಿಗಳಿಂದ ಆರೋಪಿಯನ್ನ ಅರೆಸ್ಟ್ ಮಾಡಲಾಗಿದೆ. ವಿವೇಕ್ ಬಂಧಿತ ಆರೋಪಿಯಾಗಿದ್ದು, 2012 ರಲ್ಲಿ ಬೆಂಗಳೂರಿನ ಆರ್ ಟಿ ನಗರದ ಆರ್ಮ್ಸ್ ಆಯ್ಟ್ ಮತ್ತು ದರೋಡೆ ಯತ್ನ ಕೇಸ್‌ನಲ್ಲಿ ಆರೋಪಿಯನ್ನ ಅರೆಸ್ಟ್ ಮಾಡಲಾಗಿತ್ತು. ನಂತರ ಪೊಲೀಸರ ಕೈಗೂ ಸಿಗದೆ ನ್ಯಾಯಾಲಯಕ್ಕೂ ಹಾಜರಾಗದೆ ಆರೋಪಿ ವಿವೇಕ್ ಎಸ್ಕೇಪ್ ಆಗಿದ್ದ. ಸದ್ಯ ಮೈಸೂರಿನಲ್ಲಿ ತಲೆಮರಿಸಿಕೊಂಡಿದ್ದ ವಿವೇಕ್‌ನನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
What's Your Reaction?






