ಹಾಸನದಲ್ಲಿ ರೌಡಿಶೀಟರ್ ಸೈಲೆಂಟ್ ಸುನಿಲ್ಗೆ ಭರ್ಜರಿ ಸ್ವಾಗತ – ವೀಡಿಯೋ ವೈರಲ್
ಹಾಸನ: ಜಿಲ್ಲೆಯ ಶಾಂತಿಗ್ರಾಮ ಟೋಲ್ ಸಮೀಪ ನಟೋರಿಯಸ್ ರೌಡಿಶೀಟರ್ ಸೈಲೆಂಟ್ ಸುನಿಲ್ ಆಗಮಿಸುತ್ತಿದ್ದಂತೆ ಯುವಕರ ಗುಂಪೊಂದು ಭರ್ಜರಿ ಸ್ವಾಗತ ಕೋರಿರುವ ಘಟನೆ ನಡೆದಿದೆ. ಹತ್ತಾರು ಕಾರುಗಳಲ್ಲಿ ಬಂದ ಬೆಂಬಲಿಗರು, ಸೈಲೆಂಟ್ ಸುನಿಲ್ ಕಾರನ್ನು ಎಸ್ಕಾರ್ಟ್ ರೀತಿಯಲ್ಲಿ ಹಿಂಬಾಲಿಸಿಕೊಂಡು ಬಂದಿದ್ದಾರೆ. ಈ ವೇಳೆ ರಸ್ತೆ ಮೇಲೆ ಭಾರಿ ಸಂಚಾರ ಉಂಟಾಗಿ ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾಯಿತು. ಮಾಜಿ ಶಾಸಕ ಪ್ರೀತಂಗೌಡ ಅವರ ಆಪ್ತರು ಈ ಸ್ವಾಗತ ಕಾರ್ಯಕ್ರಮವನ್ನು ಆಯೋಜಿಸಿದ್ದು, ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ವಿಶೇಷವಾಗಿ ಪ್ರೀತಂಗೌಡ…

