ಲೆಕ್ಕ ಮಂಡನೆ ವೇಳೆ ಗದ್ದಲ: ಹರಿಹರ ಪೀಠದಲ್ಲಿ ಕಲ್ಲು, ಚಪ್ಪಲಿ ತೂರಾಟ
ದಾವಣಗೆರೆ: ಹರಿಹರದಲ್ಲಿರುವ ಪಂಚಮಸಾಲಿ ಗುರುಪೀಠದಲ್ಲಿ ಲೆಕ್ಕ ಮಂಡನೆ ವಿಚಾರವಾಗಿ ಭಾರೀ ಹೈಡ್ರಾಮಾ ನಡೆದಿದೆ. 18 ವರ್ಷಗಳ ಲೆಕ್ಕ ನೀಡಲು ಟ್ರಸ್ಟಿಗಳು ಮುಂದಾದ ವೇಳೆ, ಮಠದ ಆವರಣದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಟ್ರಸ್ಟಿಗಳು ಮಠಕ್ಕೆ ಆಗಮಿಸುತ್ತಿದ್ದಂತೆ, ವಚನಾನಂದ ಸ್ವಾಮೀಜಿಗಳ ಬೆಂಬಲಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. “ಕಳ್ಳ… ಕಳ್ಳ…” ಎಂದು ಕೂಗಿದ ಭಕ್ತರು ಟ್ರಸ್ಟಿಗಳ ವಿರುದ್ಧ ಪ್ರತಿಭಟನೆ ನಡೆಸಿದರು. ಈ ವೇಳೆ ಎರಡು ಗುಂಪುಗಳ ನಡುವೆ ವಾಗ್ವಾದ ತಾರಕಕ್ಕೇರಿ, ಪರಿಸ್ಥಿತಿ ಹತೋಟಿ ತಪ್ಪಿತು. ಸುದ್ದಿಗೋಷ್ಠಿ ಆರಂಭವಾಗುತ್ತಿದ್ದಂತೆ ರಾಣಿಬೆನ್ನೂರು ಮಾಜಿ ಶಾಸಕ…

