ಸುಶಾಂತ್ ಸಿಂಗ್ ಪ್ರಕರಣ: 6 ವರ್ಷಗಳ ಬಳಿಕ ರಿಯಾ ಚಕ್ರವರ್ತಿಗೆ ಬ್ಯಾಂಕ್ ಹಣದ ಮೇಲಿನ ಹಕ್ಕು ಮರಳಿ!
ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜ್ಪೂತ್ ಸಾವಿನ ಪ್ರಕರಣ ದೇಶದಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿತ್ತು. 2020ರ ಜೂನ್ನಲ್ಲಿ ಮುಂಬೈನ ಮನೆಯಲ್ಲಿ ಅನುಮಾನಾಸ್ಪದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು. ಈ ಘಟನೆ ಬಳಿಕ ಹಲವು ಕೋನಗಳಲ್ಲಿ ತನಿಖೆ ನಡೆದಿದ್ದು, ಹಲವು ವಿವಾದಗಳಿಗೆ ಕಾರಣವಾಗಿತ್ತು. ಈ ಪ್ರಕರಣದಲ್ಲಿ ಮುಖ್ಯವಾಗಿ ಸುದ್ದಿಯಾದ ಹೆಸರು ನಟಿ ರಿಯಾ ಚಕ್ರವರ್ತಿ. ಸುಶಾಂತ್ ಅವರ ಮಾಜಿ ಗೆಳತಿಯಾಗಿದ್ದ ರಿಯಾ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿದ್ದವು. ಪ್ರಕರಣದ ಆರಂಭದಲ್ಲಿ ಅವರನ್ನು ‘ವಿಲನ್’ ರೀತಿಯಲ್ಲಿ ಚಿತ್ರಿಸಲಾಗಿದ್ದು, ಅವರು ಜೈಲಿಗೂ…

