ಬಡತನ ಗೆದ್ದ ಪ್ರತಿಭೆ: ಮೊದಲ ಯತ್ನದಲ್ಲೇ ಯುಪಿಎಸ್‌ಸಿ ಸಾಧನೆ ಮಾಡಿದ ದಿನಗೂಲಿ ಕಾರ್ಮಿಕನ ಮಗ ಸುಬ್ರಮಣ್ಯ ಭಾರತಿ!
ಕಠಿಣ ಪರಿಶ್ರಮ ಮತ್ತು ಛಲವಿದ್ದರೆ ಎಂತಹ ಗುರಿಯನ್ನಾದರೂ ತಲುಪಬಹುದು ಎಂಬುದಕ್ಕೆ ತಮಿಳುನಾಡಿನ ಸುಬ್ರಮಣ್ಯ ಭಾರತಿ ಅವರ ಯಶಸ್ಸಿನ ಕಥೆಯೇ ಸಾಕ್ಷಿ. ಇಟ್ಟಿಗೆ ಕಾರ್ಖಾನೆಯಲ್ಲಿ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡುವ ತಂದೆಯ ಮಗನೊಬ್ಬ, ದೇಶದ ಅತ್ಯಂತ ಕಠಿಣ ಪರೀಕ್ಷೆ ಎಂದು ಕರೆಯಲ್ಪಡುವ ಯುಪಿಎಸ್‌ಸಿ (UPSC) ನಾಗರಿಕ ಸೇವಾ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ತೇರ್ಗಡೆಯಾಗಿ ಇತಿಹಾಸ ಸೃಷ್ಟಿಸಿದ್ದಾರೆ. ಬಡತನವನ್ನು ಮೆಟ್ಟಿ ನಿಂತು ಅವರು ಕಂಡ ಕನಸು ಇಂದು ನನಸಾಗಿದೆ. ಬಡತನದ ನಡುವೆ ಬೆಳಗಿದ ನಕ್ಷತ್ರ: ಸುಬ್ರಮಣ್ಯ ಭಾರತಿ ಅವರ ತಂದೆ…

