ಕರ್ನಾಟಕ ಗಿಗ್ ಕಾರ್ಮಿಕರ ಕಲ್ಯಾಣ ಶುಲ್ಕ: ಕೈಗಾರಿಕಾ ಸಂಸ್ಥೆಗಳಿಂದ ಸರ್ಕಾರದ ಸ್ಪಷ್ಟನೆಗೆ ಆಗ್ರಹ! ಅಷ್ಟಕ್ಕೂ ಗೊಂದಲ ಎಲ್ಲಿದೆ?
ಇಂದಿನ ಡಿಜಿಟಲ್ ಯುಗದಲ್ಲಿ ಸ್ವಿಗ್ಗಿ, ಝೊಮ್ಯಾಟೋ, ಅಮೆಜಾನ್ ಮತ್ತು ಓಲಾ ಅಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಕೆಲಸ ಮಾಡುವ ‘ಗಿಗ್ ಕಾರ್ಮಿಕರ’ (Gig Workers) ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಇವರ ಸಾಮಾಜಿಕ ಭದ್ರತೆಗಾಗಿ ಕರ್ನಾಟಕ ಸರ್ಕಾರವು ‘ಕರ್ನಾಟಕ ಗಿಗ್ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಮಸೂದೆ’ಯನ್ನು ಜಾರಿಗೊಳಿಸಲು ಮುಂದಾಗಿದೆ. ಈ ಮಸೂದೆಯ ಅಡಿಯಲ್ಲಿ ಪ್ರತಿ ವಹಿವಾಟಿನ ಮೇಲೆ ‘ಕಲ್ಯಾಣ ಶುಲ್ಕ’ (Welfare Fee) ವಿಧಿಸಲು ಉದ್ದೇಶಿಸಲಾಗಿದೆ. ಆದರೆ, ಈ ಶುಲ್ಕದ ಲೆಕ್ಕಾಚಾರ ಮತ್ತು ಅದರ ಅನುಷ್ಠಾನದ ಬಗ್ಗೆ…

