ಏಪ್ರಿಲ್ ತಿಂಗಳಲ್ಲಿ ನಿಮ್ಮ ಕೈದೋಟದಲ್ಲಿ ಅರಳಲಿ ಈ 6 ಸುಂದರ ಹೂವುಗಳು!
ಬೇಸಿಗೆಯ ಬಿಸಿಲು ಏರುತ್ತಿದ್ದಂತೆ ನಮ್ಮ ಕೈದೋಟದ ಕಳೆಗುಂದಬಹುದು. ಆದರೆ ಸರಿಯಾದ ಹೂವಿನ ಗಿಡಗಳನ್ನು ಆಯ್ಕೆ ಮಾಡಿಕೊಂಡರೆ, ಈ ಏಪ್ರಿಲ್ ತಿಂಗಳ ಬಿಸಿಲಿನಲ್ಲಿಯೂ ನಿಮ್ಮ ಮನೆ ಮನೋಹರವಾದ ಹೂವುಗಳಿಂದ ಕಂಗೊಳಿಸಬಹುದು. ಅನೇಕರಿಗೆ ಗಿಡ ನೆಟ್ಟ ಕೂಡಲೇ ಹೂವುಗಳನ್ನು ನೋಡುವ ಆಸೆಯಿರುತ್ತದೆ. ಅಂತಹವರಿಗಾಗಿ ಕೆಲವೇ ದಿನಗಳಲ್ಲಿ ಅರಳುವ ಮತ್ತು ಅತಿಯಾದ ಬಿಸಿಲನ್ನು ತಡೆದುಕೊಳ್ಳುವ ಆರು ಹೂವುಗಳ ಪಟ್ಟಿಯನ್ನು ನಾವು ಇಲ್ಲಿ ನೀಡಿದ್ದೇವೆ. 1. ಜಿನಿಯಾ (Zinnia) ಜಿನಿಯಾ ಹೂವುಗಳು ತೋಟಗಾರಿಕೆ ಆರಂಭಿಸುವವರಿಗೆ ಅತ್ಯುತ್ತಮ ಆಯ್ಕೆ. ಇವುಗಳನ್ನು ಬೀಜದಿಂದ ಸುಲಭವಾಗಿ ಬೆಳೆಸಬಹುದು…

