ಇರಾನ್ ಶಾಲೆಯ ಮೇಲೆ ಅಮೆರಿಕದ ಕ್ಷಿಪಣಿ ದಾಳಿ: 165 ಮಕ್ಕಳ ಸಾವಿಗೆ ‘ತಾಂತ್ರಿಕ ತಪ್ಪು’ ಕಾರಣ? ತನಿಖೆಯಲ್ಲಿ ಬಯಲಾದ ಕಹಿ ಸತ್ಯ!
ಯುದ್ಧದ ಅನಿಶ್ಚಿತತೆಯ ನಡುವೆ ಅದೆಷ್ಟೋ ಅಮಾಯಕರು ಬಲಿಯಾಗುತ್ತಾರೆ ಎಂಬುದಕ್ಕೆ ಇತ್ತೀಚೆಗೆ ಇರಾನ್‌ನಲ್ಲಿ ನಡೆದ ಘಟನೆಯೇ ಸಾಕ್ಷಿ. ದಕ್ಷಿಣ ಇರಾನ್‌ನ ಮಿನಾಬ್ ನಗರದಲ್ಲಿರುವ ಪ್ರಾಥಮಿಕ ಶಾಲೆಯೊಂದರ ಮೇಲೆ ನಡೆದ ಕ್ಷಿಪಣಿ ದಾಳಿಯು ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿತ್ತು. ಈಗ ಈ ಭೀಕರ ದುರಂತದ ಹಿಂದೆ ಅಮೆರಿಕದ ಸೇನೆಯ ‘ತಾಂತ್ರಿಕ ಮತ್ತು ಗುರಿ ಗುರುತಿಸುವಿಕೆಯಲ್ಲಿನ ತಪ್ಪು’ (Targeting Mistake) ಇರುವುದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ. ಏನಿದು ಘಟನೆ? ಕಳೆದ ಫೆಬ್ರವರಿ 28 ರಂದು ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷದ ಆರಂಭಿಕ…

