ಉಚಿತ ಆಪ್‌ಗಳ ಡೌನ್‌ಲೋಡ್ ಅಪಾಯಕಾರಿ: ನಿಮ್ಮ ವೈಯಕ್ತಿಕ ಡೇಟಾ ಕಳುವಾಗುವ ಮುನ್ನ ಎಚ್ಚರ!
ಇಂದಿನ ಡಿಜಿಟಲ್ ಕಾಲಘಟ್ಟದಲ್ಲಿ ನಾವು ಸ್ಮಾರ್ಟ್‌ಫೋನ್ ಆಪ್‌ಗಳ ಮೇಲೆ ಅತಿಯಾಗಿ ಅವಲಂಬಿತರಾಗಿದ್ದೇವೆ. ಇಂಟರ್ನೆಟ್‌ನಲ್ಲಿ ನೂರಾರು ಉಪಯುಕ್ತ ಆಪ್‌ಗಳು ‘ಉಚಿತ’ವಾಗಿ ಲಭ್ಯವಿವೆ. ಆದರೆ, ನಮಗೆ ಉಚಿತವಾಗಿ ಸಿಗುತ್ತಿರುವ ಈ ಸೌಲಭ್ಯಗಳಿಗೆ ನಾವು ನಮ್ಮ ‘ಖಾಸಗಿತನ’ವನ್ನೇ ಬೆಲೆಯಾಗಿ ನೀಡುತ್ತಿದ್ದೇವೆಯೇ? ಹೌದು ಎನ್ನುತ್ತಾರೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ನ್ಯಾಯಮೂರ್ತಿ ವಿ. ರಾಮಸುಬ್ರಹ್ಮಣ್ಯನ್. ಮೈಸೂರಿನ ಜೆಎಸ್‌ಎಸ್ ಕಾನೂನು ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಈ ಗಂಭೀರ ವಿಷಯದ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಉಚಿತ ಆಪ್‌ಗಳ ಹಿಂದಿರುವ ಸೈಬರ್ ಜಾಲ: ಮೈಸೂರು…

